ಗೋಣಿಬೀಡಿನಲ್ಲಿ ಬಸವೇಶ್ವರ ಜಯಂತಿ ಕಾರ್ಯಕ್ರಮ
* ಬಸವಣ್ಣನೆಂದರೆ ಸಂವಿಧಾನ- ಡಾ.ಮೋಹನ್ ರಾಜಣ್ಣ
* ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಕಾರ್ಯಕ್ರಮ ಆಯೋಜನೆ
NAMMMUR EXPRESS NEWS
ಮೂಡಿಗೆರೆ: ಬಸವಣ್ಣನೆಂದರೆ ಸಂವಿಧಾನ ಒಂದು ತತ್ವಜ್ಞಾನ, ಒಂದು ಪ್ರಯೋಗ ಶಾಲೆ,ನಡೆ ಮತ್ತು ನುಡಿ ಎರಡೂ ಒಂದೇ ಆಗಿದ್ದ ಬಸವಣ್ಣ ಮಹಾಸಾಧಕ ಎಂದು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಡಾ.ಮೋಹನ್ ರಾಜಣ್ಣ ಹೇಳಿದರು.
ತಾಲೂಕಿನ ಗೋಣಿಬೀಡಿನಲ್ಲಿ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ )ವತಿಯಿಂದ ಆಯೋಜಿಸಿದ ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದ ಅವರು ಪ್ರತಿಯೊಬ್ಬರು ಸಹ ಬಸವಣ್ಣ ನವರ ವಿಚಾರಧಾರೆ, ಚಿಂತನೆ, ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ಉಮಾ ಮೋಹನ್ ಬಸವಣ್ಣನವರು ವಚನಗಳ ಮೂಲಕ ನೀಡಿರುವ ಸಮಾಜ ಸುಧಾರಣಾ ಸಂದೇಶಗಳನ್ನು ಜೀವನದಲ್ಲಿ ಅಳವಡಿಸುವ ಮೂಲಕ ನಾವು ಭಸ್ಮಧಾರಣೆಯಂಥ ಬಹಿರಂಗ ಪ್ರಕ್ರಿಯೇಗಿಂತಲೂ ಬಸವಧಾರಣೆ ಯಂಥ ಅಂತರಂಗ ಪ್ರಕ್ರಿಯೆ ಒಳಗಾಗಬೇಕು ಎಂದರು.
ಹಿರಿಯ ಟ್ರಸ್ಟಿಗಳಾದ ಸಿ.ಸಿ.ರಾಜಣ್ಣ, ಹಾಗೂ ಟ್ರಸ್ಟಿಗಳಾದ ಬಾಂಧವ್ಯ, ಡಿಂಪಲ್, ಪ್ರಸನ್ನ,ಗಂಗಾಧರ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಬಸವ ಪ್ರಾರ್ಥನೆ ಮಾಡಿ ಸಿಹಿ ಹಂಚಲಾಯಿತು.
