ಬಜ್ಪೆಯಲ್ಲೊಂದು ಮಾದರಿ ರಿಕ್ಷಾ ನಿಲ್ದಾಣ ನಿರ್ಮಾಣ!
– ವಿಧಾನ ಪರಿಷತ್ತಿನ ಸದಸ್ಯ ಐವನ್ ಡಿಸೋಜಾ ಅನುದಾನ ಕೊಟ್ಟು ಸಾಥ್!
– ಬಿಸಿಲಿನ ಬೇಗೆಗೆ ಬೆಂದು ಹೋಗಿದ್ದ ರಿಕ್ಷಾ ಚಾಲಕರಿಗೆ ನೆರವು
– ಕಾರ್ಯಕ್ರಮದಲ್ಲಿ ಉದ್ಯಮಿ ರೊನಾಲ್ಡ್ ಫೆರ್ನಾಡೀಸ್ ಅವರಿಗೆ ಗೌರವ
NAMMUR EXPRESS NEWS
ಬಜ್ಪೆ: ಬಜ್ಪೆ ಪೇಟೆಯ ರಸ್ತೆಯಲ್ಲಿ ಮಾದರಿ ರಿಕ್ಷಾ ಪಾರ್ಕ್ ಒಂದನ್ನು ಏ. 19ರಂದು ಬೆಳಿಗ್ಗೆ 11 ಗಂಟೆಗೆ ಅದ್ದೂರಿ ಉದ್ಘಾಟನೆ ಮಾಡಿ ರಿಕ್ಷಾ ಚಾಲಕ ಮಾಲಕರ ಸಂಘಕ್ಕೆ ಆಸರೆ ನೀಡಲಾಯಿತು.
ಹೌದು ಇತ್ತೀಚೆಗೆ ಬಜ್ಪೆ ಪೇಟೆಯ ರಸ್ತೆ ಅಗಲೀಕರಣದ ಸಮಯದಲ್ಲಿ ಕಿನ್ನಿಪದವು ರಿಕ್ಷಾ ನಿಲ್ದಾಣವನ್ನು ತೆರವುಗೊಳಿಸಿದರ ಪರಿಣಾಮವಾಗಿ ಈ ವರ್ಷದ ಬಿಸಿಲಿನ ಬೇಗೆಗೆ ಬೆಂದು ಹೋಗಿದ್ದ ರಿಕ್ಷಾ ಚಾಲಕರು ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಮೊರೆ ಹೋಗಿದ್ದರು. ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯು ವಿಧಾನ ಪರಿಷತ್ತಿನ ಸದಸ್ಯರಾದ ಐವನ್ ಡಿಸೋಜಾರ ಬಳಿ ವಿಷಯ ತಿಳಿಸಿದಾಗ ತಕ್ಷಣ ಅವರು ತಮ್ಮ ಅನುದಾನದಿಂದ ರಿಕ್ಷಾ ಪಾರ್ಕ್ ಮಾಡಲು ಹಣ ಒದಗಿಸಿಕೊಟ್ಟು ಸುಸಜ್ಜಿತ, ಮಾದರಿ ರಿಕ್ಷಾ ಪಾರ್ಕ್ ನಿರ್ಮಾಣಕ್ಕೆ ಸಹಕರಿಸಿದರು.
ಹಾಗೂ ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ,ಉದ್ಯಮಿ ರೊನಾಲ್ಡ್ ಫೆರ್ನಾಡೀಸ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ಮತ್ತು ರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ಐವನ್ ಡಿಸೋಜಾ, ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಸಿರಾಜ್ ಬಜ್ಪೆ ,ಸಹ ಸಂಚಾಲಕರಾದ ಇಸ್ಮಾಯಿಲ್ ಇಂಜಿನಿಯೆರ್,ಬಜ್ಪೆ ಪೊಲೀಸ್ ಠಾಣೆ ಅಧಿಕಾರಿ ಸಂದೀಪ್, ರಾಜ್ಯ ದಲಿತ ಸಂಘದ ಸಂಚಾಲಕರಾದ ದೇವದಾಸ್, ಮುಲ್ಕಿ ಮೂಡಬಿದ್ರೆ ಕಾಂಗ್ರೆಸ್ ಐಟಿ ಸೆಲ್ ಅಧ್ಯಕ್ಷರಾದ ನಿಸಾರ್ ಕರಾವಳಿ, ಕಾಂಗ್ರೆಸ್ ಮುಖಂಡರಾದ ರೊನಾಲ್ಡ್ ಫೆರ್ನಾಡೀಸ್, ನಿಸಾರ್ ಕರಾವಳಿ, ವಿಜಯ ಸುವರ್ಣ, ಜೇಕಬ್ ಪಿರೇರಾ, ಖಾದರ್ ಏರ್ಪೋರ್ಟ್, SDPI ರಾಜ್ಯ ಮುಖಂಡರಾದ ಅಥಾವುಲ್ಲಾ ಜೋಕಟ್ಟೆ, ಹಸೈನಾರ್, MJM ಮಸೀದಿಯ ಅಧ್ಯಕ್ಷರಾದ ಅಬ್ದುಲ್ ಖಾದರ್, ಹಿರಿಯರಾದ ಮೊನಕ, ಗುತ್ತಿಗೆದಾರ ಅಬೂಬಕ್ಕರ್ ಸಿದ್ದಿಕ್ ಮತ್ತು ಊರಿನ ಅನೇಕ ಸಂಘ ಸಂಸ್ಥೆಗಳ ಮುಖಂಡರುಗಳು, ಊರಿನ ಗಣ್ಯರು ಮತ್ತು ನಾಗರಿಕರು ಭಾಗವಹಿಸಿ ಶುಭ ಹಾರೈಸಿದರು .
