Categories
ಕರಾವಳಿ

ತಲೆ ತುಂಡಾದ ಮೃತದೇಹ ಬಿದ್ದಿದೆ ಸುಳ್ಳು ಸುದ್ದಿಗೆ ಹೈರಾಣಾದ ಪೊಲೀಸರು!

ತಲೆ ತುಂಡಾದ ಮೃತದೇಹ ಬಿದ್ದಿದೆ ಸುಳ್ಳು ಸುದ್ದಿಗೆ ಹೈರಾಣಾದ ಪೊಲೀಸರು!
– ಬೈಂದೂರು ಪೊಲೀಸರನ್ನು ದಿನವಿಡೀ ಅಲೆದಾಡಿಸಿದ ಭೂಪ
– ಪೊಲೀಸರ ಅತಿಥಿಯಾದ ವ್ಯಕ್ತಿ: ಏನಿದು ಘಟನೆ..?

NAMMUR EXPRESS NEWS
ಬೈಂದೂರು: “ಶಿರವಿಲ್ಲದ ಮೃತದೇಹ ಬಿದ್ದಿದೆ” ಎಂಬುದಾಗಿ ಸುಳ್ಳು ಮಾಹಿತಿ ನೀಡಿ ಜನರಲ್ಲಿ ಭೀತಿ ಮೂಡಿಸಿದ ಹಾಗೂ ಪೊಲೀಸರನ್ನು ಅದಕ್ಕಾಗಿ ದಿನವಿಡೀ ಅಲೆದಾಡಿಸಿದ ಭೂಪ ಬೈಂದೂರು ಪೊಲೀಸರ ಅತಿಥಿಯಾಗಿದ್ದಾನೆ. ಬಾಗಲಕೋಟೆ ಜಿಲ್ಲಾಯ ಪಕೀರಪ್ಪ ಯಲ್ಲಪ್ಪ(30) ಎಂಬಾತ ಮಾ.14ರಂದು ಠಾಣೆಗೆ ತೆರಳಿ ಯಡ್ತರೆ ಗ್ರಾಮದ ಮದ್ದೋಡಿ ಗೇರು ಹಾಡಿ ಯಲ್ಲಿ ತಲೆ ಇಲ್ಲದ ಮನುಷ್ಯನ ದೇಹ ಬಿದ್ದಿದೆ ಎಂದು ಮಾಹಿತಿ ನೀಡಿದ್ದ. ತಕ್ಷಣ ಪೊಲೀಸರು ಆತನ ಜತೆಯಲ್ಲಿ ಹೋಗಿ ಸಾರ್ವಜನಿಕರ ಸಹಕಾರದೊಂದಿಗೆ ಗೇರು  ಹಾಡಿಯಲ್ಲಿ ಹಾಗೂ ಸುತ್ತಮುತ್ತ ದಿನವಿಡೀ ಹುಡುಕಿದರೂ ಎಲ್ಲಿಯೂ ಮೃತದೇಹ ಪತ್ತೆಯಾಗಿರಲಿಲ್ಲ.

ಆತನು ಬೇರೆ ಬೇರೆ ಕಡೆಯಲ್ಲಿ ಕರೆದುಕೊಂಡು ಹೋಗಿ ಅಲ್ಲಿ ಇದೆ, ಇಲ್ಲಿ ಇದೆ ಎಂದು ಹೇಳಿದ್ದು ಎಲ್ಲಿ ಹುಡುಕಿದರೂ ಮೃತ ದೇಹ ಕಾಣಿಸಲಿಲ್ಲ. ಮರು ದಿನವೂ ಹುಡುಕಿದ ಪೊಲೀಸರು ಸುಸ್ತಾಗಿದ್ದರು. ಕೊನೆಗೆ ತಲೆ ಇಲ್ಲದ ಮನುಷ್ಯನ ಮೃತದೇಹ ಇಲ್ಲದಿದ್ದರೂ ಮೃತದೇಹ ಇರುವುದಾಗಿ ಸುಳ್ಳು ಮಾಹಿತಿ ನೀಡಿ ಹುಡುಕುವಂತೆ ಮಾಡಿರುವ ಹಾಗೂ ಆ ಮೂಲಕ ಪರಿಸರದ ಸಾರ್ವಜನಿಕರು ಗಲಿಬಿಲಿ ಆಗುವಂತೆ ಮಾಡಿದ ಪಕೀರಪ್ಪ ಯಲ್ಲಪ್ಪ ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.