ಕಾಶಿ ಯಾತ್ರೆ ವೇಳೆ ತೀರ್ಥಹಳ್ಳಿ ರೈತನಿಗೆ ಹೃದಯಾಘಾತ!
– ತೀರ್ಥಹಳ್ಳಿ ತಾಲೂಕು ಬೆಕ್ಷೆಯ ಕೇಶವ ವಿಧಿವಶ
– ಇಂದು ಸಂಜೆ ಅಂತ್ಯಕ್ರಿಯೆ: ಸಂತಾಪ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ರೈತರೊಬ್ಬರು ಕಾಶಿ ಯಾತ್ರೆ ವೇಳೆ ಮೃತಪಟ್ಟ ಘಟನೆ ಭಾನುವಾರ ಕಾಶಿಯಲ್ಲಿ ನಡೆದಿದೆ.
ತೀರ್ಥಹಳ್ಳಿ ತಾಲೂಕು ಕುಡುಮಲ್ಲಿಗೆ ಗ್ರಾಮದ ಬೆಕ್ಷೆಯ ಕೇಶವ ಮೃತ ವ್ಯಕ್ತಿ. ಇವರು ಸಾಂಪ್ರದಾಯಿಕ ಕೃಷಿಕರಾಗಿದ್ದು, ಇತ್ತೀಚೆಗೆ ದಂಪತಿ,ಸಂಬಂಧಿಕರ ಜೊತೆ ತೀರ್ಥಯಾತ್ರೆ ಕೈಗೊಂಡಿದ್ದು, ಕಾಶಿ ಯಾತ್ರಾಸ್ಥಳ ಪ್ರವೇಶಿಸಿದ ವೇಳೆ ದುರದೃಷ್ಟಕರವಾಗಿ ಹೃದಯಾಘಾತಕ್ಕೊಳಗಾಗಿದ್ದಾರೆ. ಮೃತರ ಶವಸಂಸ್ಕಾರ ಮಂಗಳವಾರ ಸಂಜೆ 6ಕ್ಕೆ ಕೃಷಿಕರ ಸ್ವಂತ ಊರಾದ ಬೆಕ್ಷೆ, ಕುಡುಮಲ್ಲಿಗೆ, ತೀರ್ಥಹಳ್ಳಿಯಲ್ಲಿ ಬಂದು-ಮಿತ್ರರ ಸಮಕ್ಷಮ ನೆರವೇರಲಿದೆ.
ಪತ್ನಿ ಶ್ರೀಮತಿ ಅನಸೂಯಮ್ಮ, ಮಗ ಬಿ.ಕೆ. ಮಲ್ಲಿಕಾರ್ಜುನ, ಮಗಳು ಶ್ರೀಮತಿ ಬಿ.ಕೆ. ಕೌಸ್ತುಭ, ಅಳಿಯ, ಸೊಸೆ, ಮೊಮ್ಮಕ್ಕಳು, ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ. ಹಳೆಯ ಕಾಲದ ಕೃಷಿಯಾದಾರಿತ ಸಾಂಪ್ರದಾಯಿಕ ಶೈಲಿಯ ಕೃಷಿಗೆ ಒತ್ತುಕೊಟ್ಟು ಅದರಲ್ಲಿಯೇ ಪ್ರಗತಿ ಸಾಧಿಸಿ ಮಾದರಿಯ ರೈತರಾಗಿದ್ದ ಕೇಶವ ಅವರಿಗೆ ನಿಧನಕ್ಕೆ ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ. ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದು ನಮ್ಮೂರ್ ಎಕ್ಸ್ ಪ್ರೆಸ್ ಪ್ರಾರ್ಥಿಸುತ್ತದೆ.
