Categories
ಕರಾವಳಿ ಮಾಹಿತಿ ಸುದ್ದಿ

ಮಾನವೀಯತೆಯ ಹರಿಕಾರ ಡಾ.ಜಿ.ಶಂಕರ್

ಮಾನವೀಯತೆಯ ಹರಿಕಾರ ಡಾ.ಜಿ.ಶಂಕರ್
– ಸಾವಿರಾರು ಜನರ ಬದುಕಿಗೆ ಡಾ.ಜಿ.ಶಂಕರ್ ದಾರಿದೀಪ
– ಕರಾವಳಿ ಸೇರಿ ರಾಜ್ಯದ ಅನೇಕ ಕಡೆ ಸಹಾಯ ಹಸ್ತ
– ಕೊಡುಗೈ ದಾನಿಯಾಗಿರುವ ಉದ್ಯಮಿ,
ನಾಡೋಜ ಡಾ.ಜಿ. ಶಂಕರ್

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿ ಜಿ. ಶಂಕರ್ ಅವರು ಮೊಗವೀರ ಸಮುದಾಯದ ಜತೆಗೆ ಸಮಾಜದ ನಡುವೆ ಬಹು ದೊಡ್ಡ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. 1955ರ ಅ.5ರಂದು ಉಡುಪಿ ಜಿಲ್ಲೆಯ ಸಾಸ್ತಾನ ಬಳಿಯ ಗುಂಡ್ಮಿಯಲ್ಲಿ ಜನಿಸಿರುವ ಜಿ. ಶಂಕರ್ ಅವರು ಪ್ರಸ್ತುತ ಕ್ಲಾಸ್ ಒನ್ ಗುತ್ತಿಗೆದಾರರಾಗಿ ಸಾಕಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದಾರೆ. ಕೈಗಾರಿಕೋದ್ಯಮಿಯಾಗಿ ಎತ್ತರಕ್ಕೆ ಬೆಳೆದು ನಿಂತಿರುವ ಶಂಕರ್ ಅವರು ಮತ್ತೊಂದು ಕಡೆಯಿಂದ ಸಮಾಜದ ಏಳಿಗೆಗಾಗಿ ಅಷ್ಟೇ ದೊಡ್ಡ ಮಟ್ಟದಲ್ಲಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಮೂಲಕ ಸಾವಿರಾರು ಬಡವರಿಗೆ ಆರೋಗ್ಯ, ಶಿಕ್ಷಣ, ವಸತಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಬಡವರ ಬಂಧು ಎನ್ನುವ ಸಂಪ್ರೀತಿಗೂ ಪಾತ್ರರಾಗಿದ್ದಾರೆ.

– ಸೇವೆಗೆ ಗೌರವ ಡಾಕ್ಟರೇಟ್, ರಾಜ್ಯೋತ್ಸವ ಪ್ರಶಸ್ತಿ

ಮಂಗಳೂರು ವಿವಿಯು ಅವರ ಗಮನಾರ್ಹ ಸಮಾಜ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಹಾಗೂ ಸಮಾಜಮುಖಿ ಕೆಲಸ-ಕಾರ್ಯಗಳಿಗಾಗಿ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ಕೊಡುಗೈ ದಾನಿಯಾಗಿರುವ ಶಂಕರ್ ಅವರು ಉಡುಪಿಯಲ್ಲಿ ಶಾಮಿಲಿ ಎನ್ನುವ ಬೃಹತ್ ಸಭಾಂಗಣವನ್ನು ಹೊಂದಿದ್ದಾರೆ. ಅವರು ಜಾತಿ, ಮತ ಬೇಧವಿಲ್ಲದೆ ಎಲ್ಲ ಬಡವರ ಸ್ವಾಸ್ಥ್ಯಕ್ಕಾಗಿ ಜಿ. ಶಂಕರ್ ಆರೋಗ್ಯ ಸುರಕ್ಷಾ ಕಾರ್ಡ್ ಎಂಬ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಈ ಯೋಜನೆಯಡಿ ಮಣಿಪಾಲ ಆಸ್ಪತ್ರೆಗಳಲ್ಲಿ ಶೇ.70ರಷ್ಟು ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸಣ್ಣ ಸಮುದಾಯಕ್ಕೆ ಶಂಕರ್ ಆಸರೆ

ಡಾ. ಜಿ. ಶಂಕರ್ ಅವರು ಕಳೆದ ಸುಮಾರು ಎರಡು ದಶಕಗಳಿಂದ ಎಲ್ಲ ಸಮುದಾಯದ ಬಡ ವರ್ಗದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ ಎಸ್.ಎಸ್.ಎಲ್.ಸಿ ಯಿಂದ ಹಿಡಿದು ಎಂಎಸ್ಸಿ, ಎಂಜಿನಿಯರಿಂಗ್, ಎಂ.ಬಿ.ಬಿ. ಎಸ್ವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ದೊಡ್ಡ ಮೊತ್ತದ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದಾರೆ. ಹೀಗೆ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರಗಳಲ್ಲಿ ಒಬ್ಬ ಸಹೃದಯ ದಾನಿಯಾಗಿದ್ದಾರೆ.

ರಕ್ತದಾನಕ್ಕೆ ಪ್ರೇರಣಾಶಕ್ತಿ

ಉಡುಪಿ ಜಿಲ್ಲೆಯನ್ನು ರಕ್ತದಾನಿಗಳ ಜಿಲ್ಲೆಯನ್ನಾಗಿಸುವಲ್ಲಿ ಜಿ. ಶಂಕರ್ ಅವರ ಪ್ರೇರಣೆ, ಉತ್ತೇಜನ ಬಹಳ ದೊಡ್ಡ ಮಟ್ಟದಲ್ಲಿದೆ. ಉಚ್ಚಿಲ ದೇವಸ್ಥಾನದ ಪುನರ್ ನಿರ್ಮಾಣದ ರುವಾರಿ ಆಗಿರುವ ಅವರು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕರಾಗಿ ತಮ್ಮ ಹುಟ್ಟುಹಬ್ಬವನ್ನು ಕೂಡ ಪ್ರತಿವರ್ಷ ಬಡವರಿಗೆ ದಾನ-ಧರ್ಮ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸುತ್ತಾರೆ. ಕುಂದಾಪುರದ ಸರ್ಕಾರ ಆಸ್ಪತ್ರೆಯನ್ನು ಕೂಡ ಈ ಹಿಂದೆ ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಶಾಲೆ, ಕಾಲೇಜುಗಳ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.