ಎಕ್ಸೆಲ್ ವಿದ್ಯಾಸಂಸ್ಥೆಗೆ 5 ವರ್ಷಗಳ ಸಾಧನೆ ಸಂಭ್ರಮ!
– ಪ್ರತಿಷ್ಠಿತ ಎಕ್ಸೆಲ್ ವಿದ್ಯಾಸಂಸ್ಥೆಯ ಪಂಚ ಪರ್ವ ಕಾರ್ಯಕ್ರಮದ ರಂಗು
– ಉಪ ಮುಖ್ಯಮಂತ್ರಿ ಡಿ.ಕೆ.ಶಿ ಭೇಟಿ: ಕಾಲೇಜು ಸಾಧನೆಗೆ ಮೆಚ್ಚುಗೆ
– ಯುವ ಸಮೂಹಕ್ಕೆ ಸುಮಂತ್ ಕುಮಾರ್ ಜೈನ್ಎಂದ ಡಿಕೆಶಿ
NAMMUR EXPRESS NEWS
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಗುರುವಾಯನಕೆರೆಯ ಎಕ್ಸೆಲ್ ಸಮೂಹ ವಿದ್ಯಾ ಸಂಸ್ಥೆಯಲ್ಲಿ ‘ಎಕ್ಸೆಲ್ ಪಂಚಪರ್ವ’ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಸಾರ್ಥಕ ಐದು ವರ್ಷಗಳನ್ನು ಪೂರೈಸಿದ ನಿಮಿತ್ತ ವಿದ್ಯಾಸಂಸ್ಥೆಗೆ ಡಿ.ಕೆ.ಶಿ ಭೇಟಿ ನೀಡಿ ‘ಎಕ್ಸೆಲ್ ಪಂಚಪರ್ವ’ ಕಾರ್ಯಕ್ರಮಕ್ಕೆ ವಿದ್ಯಾ ಗಣಪತಿ ದೇವರ ವಿಗ್ರಹ ಅನಾವರಣಗೊಳಿಸಿ ಚಾಲನೆ ನೀಡಿದರು.
ವಿದ್ಯೆಗೆ ಅಧಿದೇವತೆ ವಿನಾಯಕ, ಸಣ್ಣ ವಯಸ್ಸಿನಲ್ಲೇ ಎಕ್ಸೆಲ್‌ನಂತಹ ಬೃಹತ್ ಸಂಸ್ಥೆ ಕಟ್ಟಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಸುಮಂತ್ ಕುಮಾರ್ ಜೈನ್ ಯುವ ಜನಾಂಗ, ಸಮೂಹಕ್ಕೆ ಪ್ರೇರಣೆಯಾಗಿದ್ದಾರೆ ಎಂದರು.
ಜೆಇಇ, ನೀಟ್‌ನಂತಹ ಪರೀಕ್ಷೆಗಳಲ್ಲಿ ಅತ್ಯುತ್ತಮ ಫಲಿತಾಂಶ ಪಡೆದ ಎಕ್ಸೆಲ್ ಸಂಸ್ಥೆ ಕಡಿಮೆ ಅವಧಿಯಲ್ಲಿ ರಾಜ್ಯಾದ್ಯಂತ ಪ್ರಸಿದ್ದಿಯಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಅಧ್ಯಕ್ಷ ಸುಮಂತ್‌ಕುಮಾರ್ ಅಧ್ಯಕ್ಷತೆ ವಹಿಸಿ, 254 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಗ್ರಾಮೀಣ ಭಾಗದಲ್ಲಿ ಪ್ರಾರಂಭವಾಗಿ ಎಕ್ಸೆಲ್ ಸಂಸ್ಥೆಯಲ್ಲಿ ಮೂರು ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಎಕ್ಸೆಲ್ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ಅಭಯಚಂದ್ರ ಜೈನ್, ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಪ್ರಾಂಶುಪಾಲ ಡಾ.ನವೀನ್ ಮರಿಕೆ, ಪ್ರಭಾರ ಪ್ರಾಂಶುಪಾಲ ಡಾ.ಪ್ರಜ್ವಲ್, ವಿಧಾನಪರಿಷತ್ ಮಾಜಿ ಸದಸ್ಯ ಕೆ.ಹರೀಶ್ ಕುಮಾರ್, ಪ್ರಮುಖರಾದ ಸತೀಶ್ ಕಾಶಿಪಟ್ಟ, ಅಭಿನಂದನ್ ಹರೀಶ್ ಕುಮಾರ್, ನಾಗೇಶ್ ಕುಮಾರ್ ಗೌಡ, ಸಂತೋಷ್ ಕುಮಾರ್ ಕಾರ್ಯಕ್ರಮದಲ್ಲಿ ಸುಮಂತ್ ಕುಮಾರ್ ಜೈನ್, ಶಾಸಕ ಅಶೋಕ್ ಕುಮಾರ್ ರೈ, ಎಂಎಲ್ಸಿ ಮಂಜುನಾಥ ಭಂಡಾರಿ, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಎಂಎಲ್ಲಿ ಕೆ.ಹರೀಶ್ ಕುಮಾರ್ ಉಪಸ್ಥಿತರಿದ್ದರು.
– ನನ್ನ ಬಳಿಯೂ ದಾಖಲಾತಿಗೆ ಕರೆ: ಡಿಕೆಶಿ
ಕಡಿಮೆ ಅವಧಿಯಲ್ಲಿ ಎಕ್ಸೆಲ್ ವಿದ್ಯಾ ಸಂಸ್ಥೆ ಉತ್ತಮ ಸಾಧನೆಗೈದಿದ್ದು, ರಾಜ್ಯದಲ್ಲೆ ಉತ್ತಮ ಫಲಿತಾಂಶ ಕೊಡುತ್ತಿರುವ ಕಾಲೇಜು ಎಂಬ ಹೆಗ್ಗಳಿಕೆಯನ್ನು ಗಳಿಸಿದೆ. ಊರಿನ ಅನೇಕ ವಿದ್ಯಾರ್ಥಿಗಳು ಎಕ್ಸೆಲ್ ಕಾಲೇಜಿನಲ್ಲಿ ದಾಖಲಾತಿಗಾಗಿ ನನ್ನ ಬಳಿ ಬರುತ್ತಿದ್ದು, ನಾನು ಅಧ್ಯಕ್ಷ ಸುಮಂತ್‌ಕುಮಾರ್ ಜೈನ್ ಅವರಿಗೆ ಕರೆಮಾಡಿ ಹಲವು ಬಾರಿ ವಿನಂತಿಸಿದ್ದೇನೆ ಎಂದು ಡಿಕೆಶಿ ಅವರು ಹೇಳಿದರು.
