Categories
ಕರಾವಳಿ ಮಂಗಳೂರು

ಅರ್ಧ ಗಡ್ಡ, ಮೀಸೆ ಬೋಳಿಸಿಕೊಂಡ ಡೋನ್ ಪ್ರತಾಪ್ ಅಭಿಮಾನಿ!

ಅರ್ಧ ಗಡ್ಡ, ಮೀಸೆ ಬೋಳಿಸಿಕೊಂಡ ಡೋನ್ ಪ್ರತಾಪ್ ಅಭಿಮಾನಿ!
– ಫೋಟೋ ಈಗ ಎಲ್ಲೆಡೆ ವೈರಲ್: ಏನಿದು ಸ್ಟೋರಿ?
– ಬಿಗ್ ಬಾಸ್ ಗೆದ್ದಿದ್ದ ಕಾರ್ತಿಕ್, ರನ್ನರ್ ಆಗಿದ್ದು ಪ್ರತಾಪ್
– ಸಂಗೀತಾ ಶೃಂಗೇರಿಗೆ ಮೂರನೇ ಸ್ಥಾನ!

NAMMUR EXPRESS NEWS
ಮಂಗಳೂರು: ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್‌ನಲ್ಲಿ ಡೋನ್ ಪ್ರತಾಪ್‌ ಗೆದ್ದುಬರುತ್ತಾರೆ; ಸೋತರೆ ಅರ್ಧ ಗಡ್ಡ, ಮೀಸೆ ತೆಗೆಯುವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚಾಲೆಂಜ್ ಹಾಕಿದ್ದ ಯುವಕನೊಬ್ಬ ಈಗ ಡ್ರೋನ್ ಪ್ರತಾಪ್ ಸೋತ ಕಾರಣ ಅರ್ಧ ಗಡ್ಡ, ಮೀಸೆ ಬೋಳಿಸಿಕೊಂಡಿದ್ದಾರೆ. ಡೋನ್ ಪ್ರತಾಪ್ ಅಭಿಮಾನಿಯ ಈ ಫೋಟೋ ಈಗ ಎಲ್ಲೆಡೆ ವೈರಲ್ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಬಂಟ್ರ ಗ್ರಾಮದ ಪಾಲೆತ್ತಡ್ಕ ನಿವಾಸಿ ಝನುಲ್ ಆಬಿದ್ ಗಡ್ಡ ಮೀಸೆ ಒಂದು ಕಡೆ ಬೋಳಿಸಿದ್ದಲ್ಲದೆ ಹಸಿ ಮೆಣಸಿನಕಾಯಿ ತಿನ್ನುವುದಾಗಿ ಮತ್ತೊಂದು ವೀಡಿಯೋ ಹರಿಯಬಿಟ್ಟಿದ್ದರು.ಇದೀಗ ಕಾರ್ತಿಕ್ ವಿನ್ನರ್ ಆಗಿದ್ದು, ಪ್ರತಾಪ್ ರನ್ನರ್ ಅಪ್‌ಗೆ ಸಮಾಧಾನ ಪಟ್ಟುಕೊಂಡಿದ್ದಾರೆ. ಫಲಿತಾಂಶ ಹೊರಬರುತ್ತಲೇ ಆಬಿದ್ ಅರ್ಧ ಗಡ್ಡ ಮೀಸೆ ಬೋಳಿಸಿಕೊಂಡು ಹಸಿ ಮೆಣಸಿನಕಾಯಿ ತಿಂದು ವೀಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾರೆ. ಈಗ ಎಲ್ಲೆಡೆ ಈ ವೀಡಿಯೊ ವೈರಲ್ ಆಗಿದೆ.

ಟ್ರೋಫಿ ಎತ್ತಿ ಹಿಡಿದ ಕಾರ್ತಿಕ್!
– ಡೋನ್ ಪ್ರತಾಪ್ ರನ್ನರ್ ಅಪ್, ಸಂಗೀತಾ ಶೃಂಗೇರಿಗೆ 3ನೇ ಸ್ಥಾನ

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ”ಬಿಗ್‌ಬಾಸ್ ಸೀಸನ್ 10”ಗೆ ಕಿಚ್ಚಸುದೀಪ್ ಅವರ ನಿರೂಪಣೆಯಲ್ಲಿ ರೋಚಕವಾಗಿ ಅಂತಿಮ ಹಣಾಹಣಿ ನಡೆಯಿತು. ಇದರಲ್ಲಿ ಕಾರ್ತಿಕ್ ಮಹೇಶ್, ಸಂಗೀತಾ ಶೃಂಗೇರಿ ಹಾಗೂ ಡೋನ್ ಪ್ರತಾಪ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತು. ಅಂತಿಮವಾಗಿ ಕಾರ್ತಿಕ್ ಮಹೇಶ್ ಬಿಗ್‌ಬಾಸ್ ಸೀಸನ್ 10ನ ಕಿರೀಟ ಮುಡಿಗೇರಿಸಿಕೊಂಡಿದ್ದರು. ಕಾರ್ತಿಕ್ ಬಹುಮಾನವಾಗಿ ₹50 ಲಕ್ಷ ನಗದು, ಮಾರುತಿ ಸುಜುಕಿ ಬ್ರೆಜಾ ಕಾರು ಮತ್ತು ಬೌನ್ಸ್ ಇನ್ನಿನಿಟಿ ಎಲೆಕ್ನಿಕ್ ಸ್ಕೂಟರ್ ಪಡೆದುಕೊಂಡಿದ್ದಾರೆ. ಡೋನ್ ಪ್ರತಾಪ್‌ ಗೆ 10 ಲಕ್ಷ, ಪ್ರೈಝ್ ಮನಿ ಜೊತೆಗೆ ಬೌನ್ಸ್‌ ಇನ್ಸಿನಿಟಿ ಎಲೆಕ್ನಿಕ್ ಸ್ಕೂಟರ್ ಲಭಿಸಿದೆ. 2ನೇ ರನ್ನ‌ರ್ ಅಪ್ ಆದ ಸಂಗೀತಾ 7 ಲಕ್ಷ ಪಡೆದುಕೊಂಡಿದ್ದಾರೆ. ಈ ಬಾರಿಯ ಬಿಗ್‌ಬಾಸ್ ಫಿನಾಲೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. 2023ರ ಅ.8ರಂದು ಆರಂಭವಾದ ಬಿಗ್‌ಬಾಸ್ ಸೀಸನ್-10ರಲ್ಲಿ 17 ಸ್ಪರ್ಧಿಗಳು ಭಾಗವಹಿಸಿದ್ದರು.

ಬಡವರಿಗೆ ಹಣ: ಡೋನ್ ಪ್ರತಾಪ್!

ಡೋನ್ ಪ್ರತಾಪ್ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿರೋದ್ರಿಂದ ಅವರಿಗೆ ಹತ್ತು ಲಕ್ಷ ರೂಪಾಯಿಗಳ ಬಹುಮಾನ ಪಡೆಯಲಿದ್ದಾರೆ. ಬಂದಿರೋ ಹಣ ಬಡವರಿಗೆ ಕೊಡ್ತೀನಿ ಎಲ್ಲರಿಗೂ ಒಳಿತಾಗಲಿ. ರನ್ನರ್ ಆಫ್ ಆಗಿರೋದು ಖುಷಿ ತಂದಿದೆ. ನನಗೆ ಎರಡೂವರೆ ಕೋಟಿಯಷ್ಟು ವೋಟ್ ಬಂದಿದೆ. ಗೆದ್ದಿದ್ದೇನೆ ಅನಿಸುತ್ತಿದೆ. ನನಗೆ ವಿನ್ನರ್ ಆಗಬೇಕು ಎಂಬ ಆಸೆ ಇತ್ತು ಆದ್ರೂ ರನ್ನರ್ ಆಫ್ ಆಗಿರೋದು ಕೂಡ ಬಹಳ ಖುಷಿ ಕೊಟ್ಟಿದೆ. ಬಂದಿರೋ ಹಣವನ್ನು ಬಡವರಿಗೆ ಕೊಡ್ತಿನಿ. ಮಕ್ಕಳ ಆಪರೇಷನ್ ಗೆ ಕೊಡ್ತಿನಿ. ಫುಡ್ ಡೆಲಿವರಿ ಮಾಡೋರು ಯಾರು ಕಷ್ಟದಲ್ಲಿದ್ದಾರೆ ಅಂಥವರಿಗೆ ಬೈಕ್ ಕೊಡಿಸ್ತಿನಿ ಅಂತಾ ಹೇಳಿರುವ ಪ್ರತಾಪ್‌. ನಾನು ಬಿಗ್ ಬಾಸ್ ರನ್ನರ್ ಆಫ್ ಜೊತೆಗೆ ನಿಮ್ಮೆಲ್ಲರ ಮನಸನ್ನು ಗೆದ್ದಿದ್ದೇನೆ ಎಂದು ರನ್ನರ್ ಆಫ್ ಪ್ರೋಣ್ ಖುಷಿ ಹಂಚಿಕೊಂಡಿದ್ದಾರೆ.

ಇದೀಗ ಪ್ರತಾಪ್ ಎಲ್ಲ ಅವಮಾನ, ಟ್ರೋಲ್, ಅಡೆತಡೆಗಳನ್ನ ಘಟಾನುಘಟಿಗಳ ನಡುವೆ ರನ್ನರ್ ಆಫ್ ಆಗಿ ಹೊರಹೊಮ್ಮಿರೋದು ಸಣ್ಣ ಮಾತೇನಲ್ಲ. ಬಿಗ್‌ಬಾಸ್ ರನ್ನರ್ ಆಫ್ ಆಗಿರೋ ಬಗ್ಗೆ ಪ್ರತಾಪ್ ಮಾತನಾಡಿದ್ದಾರೆ. ನನ್ನ ಕನಸು ಮನಸಿನಲ್ಲೂ ರನ್ನರ್ ಆಫ್ ಆಗತ್ತೇನೆಂದು ಎಣಿಸಿರಲಿಲ್ಲ. ಕಿಚ್ಚ ಸುದೀಪ್ ನನ್ನ ಮತ್ತು ಕಾರ್ತಿಕ್ ಹಿಡಿದು ವಿನ್ನರ್ ಯಾರೆಂದು ಘೋಷಿಸುವಾಗಿನ ಕ್ಷಣ ಇದೆಯಲ್ಲ ಅದನ್ನು, ಆಗಿನ ಟೆನ್ನನ್ ಮಾತುಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಇಡೀ ಕರ್ನಾಟಕವೇ ಉಸಿರು ಬಿಗಿಹಿಡಿದು ಕಾಯುತ್ತಿದ್ದ ಗಳಿಗೆ ಅದು. ಸುದೀಪ್ ಅವರು ಕಾರ್ತಿಕ್ ಅವರ ಕೈಯನ್ನು ಎತ್ತಿ ಹಿಡಿದಾಗ ನಾನು ರನ್ನರ್ ಆಫ್ ಎಂಬುದು ಖಚಿತವಾಯ್ತು. ವಿನ್ನರ್ ಆಗಬೇಕೆಂಬ ಆಸೆಯಿತ್ತು. ಆದರೆ ರನ್ನರ್ ಆಫ್‌ ಆಗಿದ್ದಕ್ಕೂ ಖುಷಿ ಇದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.