Categories
ತೀರ್ಥಹಳ್ಳಿ

ರಾಷ್ಟ್ರ ಮಟ್ಟದಲ್ಲಿ ಗುಡ್ಡೆಕೇರಿ ಶಾಲೆಗೆ ಗೌರವ!

ರಾಷ್ಟ್ರ ಮಟ್ಟದಲ್ಲಿ ಗುಡ್ಡೆಕೇರಿ ಶಾಲೆಗೆ ಗೌರವ!
– ರಾಜ್ಯ, ಶಿವಮೊಗ್ಗ ಜಿಲ್ಲೆಯನ್ನು ಪ್ರತಿನಿಧಿಸಿದ ಸರ್ಕಾರಿ ಶಾಲೆ
– ರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಸಮಾವೇಶಕ್ಕೆ ಮಂಜು ಬಾಬು

NAMMUR EXPRESS NEWS
ತೀರ್ಥಹಳ್ಳಿ: ರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಸಮಾವೇಶಕ್ಕೆ ಕರ್ನಾಟಕಕದಿಂದ ತೀರ್ಥಹಳ್ಳಿ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ಮುಖ್ಯ ಶಿಕ್ಷಕ ಮಂಜು ಬಾಬು ಹೆಚ್ ಪಿ ಆಯ್ಕೆ ಆಗಿದ್ದು ದೆಹಲಿಯಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಶಾಲೆಯನ್ನು ಪ್ರತಿನಿಧಿಸಿದ್ದಾರೆ. ಕೇಂದ್ರ ಸರ್ಕಾರದ NCERT ಯ NCSL & NIEPA ಜಂಟಿಯಾಗಿ, ಜನವರಿ 29.30.31 ರಂದು ನವದೆಹಲಿಯ ವಿಶ್ವ ಯುವ ಕೇಂದ್ರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ ಕರ್ನಾಟಕದಿಂದ‌ ಏಕೈಕ ಆಯ್ಕೆಯಾಗಿ ಭಾಗವಹಿಸಿರುವ ತೀರ್ಥಹಳ್ಳಿ ತಾಲೂಕು ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ ಹಾಗೂ ಶಾಲೆಯ ಸಮಗ್ರ ಅಭಿವೃದ್ಧಿಯ ವರದಿಯನ್ನು ಮಂಡಿಸಲಿದ್ದಾರೆ.

ಜತೆಗೆ ಸರ್ಕಾರಿ ಶಾಲೆಯ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಿದ್ದಾರೆ. ಶಾಲೆಯ ಅದ್ಬುತ ಶಿಕ್ಷಕರ ಬಳಗದ ಜೊತೆಗೆ ದುಡಿಯುತ್ತಿರುವ, 2022ರ ಪ್ರಜಾವಾಣಿ ಸಾಧಕ ಪ್ರಶಸ್ತಿ ಪುರಸ್ಕೃತರು ಹಾಗೂ ಮುಖ್ಯ ಶಿಕ್ಷಕರಾದ ಮಂಜುಬಾಬು ಹೆಚ್ ಪಿ ಅವರಿಗೆ, ತೀರ್ಥಹಳ್ಳಿ ತಾಲೂಕಿನ,‌ಶಿವಮೊಗ್ಗ ಜಿಲ್ಲೆಯನ್ನು ಹೆಸರನ್ನು ಮತ್ತೊಮ್ಮೆ ಎತ್ತಿ ಹಿಡಿದ ಇಡೀ ಮಂಜು ಬಾಬು ಹೆಚ್ ಪಿ ಹಾಗೂ ಇಡೀ ಶಾಲಾ‌ ಬಳಗಕ್ಕೆ ಅಭಿನಂದನೆಯನ್ನು ಸಲ್ಲಿಸೋಣ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.