Categories
ಕರಾವಳಿ ಬೆಂಗಳೂರು ಮಂಗಳೂರು ರಾಜ್ಯ

ಆರ್.ಸಿ.ಬಿ ಜತೆ ಹ್ಯಾಂಗ್ಯೋ ಐಸ್‌ಕ್ರೀಂ.!

ಆರ್.ಸಿ.ಬಿ ಜತೆ ಹ್ಯಾಂಗ್ಯೋ ಐಸ್‌ಕ್ರೀಂ.!
– ದೇಶದ ಟಾಪ್ ಬ್ರಾಂಡ್ ಗಳಲ್ಲಿ ಹ್ಯಾಂಗ್ಯೋ ಐಸ್‌ಕ್ರೀಂ
– ಕರಾವಳಿಯ ಬ್ರಾಂಡ್ ಈಗ ದೇಶದಲ್ಲಿ ಸದ್ದು

NAMMUR EXPRESS NEWS
ಮಂಗಳೂರು: ಕರಾವಳಿಯ ಐಸ್ ಕ್ರೀಮ್ ಬ್ರಾಂಡ್ ಹ್ಯಾಂಗ್ಯೋ ಐಸ್‌ಕ್ರೀಂ ಈಗ ದೇಶದಲ್ಲಿ ಸದ್ದು ಮಾಡಲು ಶುರು ಮಾಡಿದೆ. ಬೆಂಗಳೂರು ರಾಯಲ್ ಚಾಲೆಂಜರ್ಸ್‌ನ ಅಧಿಕೃತ ಐಸ್‌ಕ್ರೀಮ್ ಪಾಲುದಾರನಾಗಿ ಕರಾವಳಿಯ ಹ್ಯಾಂಗ್ಯೋ ಐಸ್‌ಕ್ರೀಂ ಸೇರ್ಪಡೆಯಾಗಿದೆ. ಐಪಿಎಲ್ ಸೀಸನ್ 2024ಕ್ಕೆ ರಾಯಲ್ ಚಾಲೆಂಜರ್ಸ್ ಜತೆಯಲ್ಲಿ ಹ್ಯಾಂಗ್ಯೋ ಐಸ್‌ಕ್ರೀಮ್ ಹೊಸ ಹೆಜ್ಜೆ ಇಟ್ಟಿದೆ. ಬೆಂಗಳೂರಿನಲ್ಲಿ ಈ ಕುರಿತ ಒಡಂಬಡಿಕೆಯೊಂದಕ್ಕೆ ಎರಡೂ ಸಂಸ್ಥೆಗಳ ಮುಖ್ಯಸ್ಥರು ಸಹಿ ಹಾಕಿದ್ದಾರೆ. ಕರ್ನಾಟಕ ಕರಾವಳಿಯ ಐಸ್‌ಕ್ರೀಮ್ ಅದ್ಭುತವು ಕ್ರಿಕೆಟ್ ಮ್ಯಾಜಿಕ್ ತಂಡದೊಂದಿಗೆ ಸೇರಿಕೊಂಡಿದ್ದು, ಇದು ಮೈದಾನದ ಒಳ-ಹೊರಗೆ ಹೊಸ ಉತ್ಸಾಹ, ಸಂತಸವನ್ನು ಪಸರಿಸಲಿದೆ ಎಂದು ಸಂಸ್ಥೆಯ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ.

ಆರ್‌ಸಿಬಿ ಜತೆ ರೋಮಾಂಚಕ ಪಯಣ ಆರಂಭಿಸುತ್ತಿದ್ದು, ಇದು ಉದ್ಯಮದಲ್ಲಿ ಹೊಸ ಭಾಷ್ಯ ಬರೆಯಲಿದೆ. ಕ್ರಿಕೆಟ್ ಸ್ಪೋಟಕ ಆಟದೊಂದಿಗೆ ಹ್ಯಾಂಗ್ಯೋ ಐಸ್ ಕ್ರೀಮ್‌ನ ಆಹ್ಲಾದಕರ ಸಂಭ್ರಮದ ವಾತಾವರಣಕ್ಕೆ ಕಾರಣವಾಗಲಿದೆ ಎಂದು ಹ್ಯಾಂಗ್ಯೋ ಐಸ್‌ಕ್ರೀಮ್ ಕಂಪೆನಿ ಪ್ರಕಟಣೆ ತಿಳಿಸಿದೆ. ಈ ಒಡಂಬಡಿಕೆ ವೇಳೆ ಹ್ಯಾಂಗ್ಯೋ ಬಿಸಿನೆಸ್ ಡೆವಲಪ್‌ಮೆಂಟ್ ಮುಖ್ಯಸ್ಥ ಸಂಕೀರ್ಣ ಪ್ರದೀಪ್ ಪೈ, ನೀಮಾ ಪೈ, ಶ್ರೀನಿವಾಸ್ ಜೆ. ಪೈ ಹಾಗೂ ಶ್ರೀಕೃಷ್ಣ ಜೆ. ಪೈ ಉಪಸ್ಥಿತರಿದ್ದರು.

ಐಸ್ ಕ್ರೀಮ್ ಕ್ಷೇತ್ರದಲ್ಲಿ ಹೊಸ ಸಾಧನೆ: ಲಕ್ಷ ಲಕ್ಷ ಮಂದಿಗೆ ಉದ್ಯೋಗ!

ಟಾಪ್ ಬ್ರಾಂಡ್ ಗಳಲ್ಲಿ ಹ್ಯಾಂಗ್ಯೋ ಐಸ್‌ಕ್ರೀಮ್ ಪ್ರಸ್ತುತ ಐಸ್‌ಕ್ರೀಮ್‌ನ ಅಗ್ರ ಬ್ರಾಂಡ್ ಗಳಲ್ಲಿ ಒಂದಾಗಿದೆ. ಅದು 3 ದಶಲಕ್ಷ ಗ್ರಾಹಕರನ್ನು ಸಂತೃಪ್ತಗೊಳಿಸಿದೆ. ದಿನಕ್ಕೆ 1.2 ಲಕ್ಷ ಲೀ.ಗಳಷ್ಟು ಉತ್ಪಾದನ ಸಾಮರ್ಥ್ಯವನ್ನು ಹೊಂದಿದೆ. 30 ಸಾವಿರ ರಿಟೇಲ್ ಶಾಪ್‌, 330 ಚಾನೆಲ್ ಪಾಲುದಾರರು ಮತ್ತು ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗದಾತನಾಗಿ ಯಶಸ್ಸು ಕಂಡಿದೆ. ಸಣ್ಣ ಪಟ್ಟಣವೊಂದರಲ್ಲಿ ನೆಚ್ಚಿನ ಐಸ್‌ಕ್ರೀಮ್ ತಾಣವಾಗಿ ಹುಟ್ಟಿಕೊಂಡು, ಮತ್ತಷ್ಟು ಸಾಧನೆ ಕಡೆ ಹೆಜ್ಜೆ ಇಟ್ಟಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.