Categories
ಕರಾವಳಿ

ಕರಾವಳಿಯಲ್ಲಿ ರಣ ಭೀಕರ ಮಳೆ!

ಕರಾವಳಿಯಲ್ಲಿ ರಣ ಭೀಕರ ಮಳೆ!
– ಶಾಲಾ ಕಾಲೇಜುಗಳಿಗೆ ಹಲವೆಡೆ ರಜೆ ಘೋಷಣೆ
– ಎಲ್ಲೆಡೆ ಜನಜೀವನ ಅಸ್ತವ್ಯಸ್ತ
– ಹೆಬ್ರಿ: ರೌಡಿಶೀಟರ್ ಸೆರೆ
* ಕಡಬ: ಆಟೋ ಚಾಲಕನ ಮೇಲೆ ಹಲ್ಲೆ
* ಪುತ್ತೂರು: ಮೂರ್ಛೆ ಸಂಭವಿಸಿ, ಕಣಿವೆಗೆ ಬಿದ್ದು ವ್ಯಕ್ತಿ ಸಾವು!
– ಹೋರಾಟ ಸಮಿತಿಯ ಅಧ್ಯಕ್ಷ ಸತೀಶ್ ಪೂಜಾರಿ ನಿಧನ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ತಾಲೂಕಲ್ಲಿ ಭಾರೀ ಮಳೆ ಆಗುತ್ತಿದ್ದು, ಭಾರೀ ಅನಾಹುತ ಸೃಷ್ಟಿ ಮಾಡಿದೆ.
ಎರಡು ಜಿಲ್ಲೆಯಲ್ಲಿ ಅನೇಕ ತಾಲೂಕು ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಳೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಸ್ಥಳೀಯ ಆಡಳಿತದ ಸಿಬ್ಬಂದಿಗಳು ಅಲರ್ಟ್ ಆಗಿದ್ದಾರೆ.

ಹೆಬ್ರಿ: ನಾಲ್ವರು ರೌಡಿಶೀಟರ್ ಗಳಾದ ಶ್ರೀಕಾಂತ್ ಕುಲಾಲ್, ಸದಾನಂದ ಪೂಜಾರಿ, ಸಂತೋಷ ನಾಯ್ಕ ಮತ್ತು ರಾಜೇಶ್ ನಾಯ್ಕ ರನ್ನು ಪೊಲೀಸರು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ರೌಡಿಶೀಟರ್ ಗಳ ನಡುವೆಯೇ ಅವಾಚ್ಯ ಶಬ್ದಗಳ ನಿಂದನೆ, ಜಾತಿ ನಿಂದನೆಯ ಹಿನ್ನೆಲೆಯಲ್ಲಿ ಕಲಹ ಏರ್ಪಟ್ಟು, ಪ್ರಕರಣವು ಹೆಬ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

* ಕಡಬ: ಕುಟ್ರಪ್ಪಾಡಿ ನಿವಾಸಿ ಜಗನ್ನಾಥ ಶೆಟ್ಟಿ ಎಂಬ ಆಟೋ ಚಾಲಕನ ಮೇಲೆ ಮ್ಯಾಥ್ಯೂ ಎನ್ನುವವರು ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಜಗನ್ನಾಥ ಅವರು ಸ್ವಂತ ಆಟೋ ಹೊಂದಿದ್ದು, ಊರಿನಲ್ಲಿ ಬಾಡಿಗೆ ಮಾಡಿಕೊಂಡಿದ್ದರು. ಇವರ ಪತ್ನಿ ಕಡಬದ ಮುಳಿಮಜಲು ಎಂಬಲ್ಲಿ ಸಣ್ಣ ಗೂಡಂಗಡಿಯೊಂದನ್ನು ಇಟ್ಟುಕೊಂಡು, ಪತಿಗೆ ಆರ್ಥಿಕ ಸಹಕಾರ ನೀಡುತ್ತಿದ್ದರು. ಜಗನ್ನಾಥ ಅವರು ಬಾಡಿಗೆ ಮುಗಿಸಿ, ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗಲು ಅಂಗಡಿಯ ಬಳಿಗೆ ಬಂದ ಸಂದರ್ಭದಲ್ಲಿ, ಪಕ್ಕದ ಅಂಗಡಿಯಲ್ಲಿದ್ದ ಮ್ಯಾಥ್ಯೂ ರಸ್ತೆಯ ವಿಚಾರಕ್ಕೆ ಸಂಬಂಧಿಸಿದಂತೆ ತಕರಾರು ತೆಗೆದು, ಜಗನ್ನಾಥ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಬಳಿಕ ಇಬ್ಬರ ನಡುವೆ ಕಲಹ ಏರ್ಪಟ್ಟು, ಮ್ಯಾಥ್ಯೂ ಜಗನ್ನಾಥ್ ಅವರಿಗೆ ರಸ್ತೆಯಲ್ಲಿ ಬಿದ್ದಿದ್ದ ಕಲ್ಲೊಂದನ್ನು ತೆಗೆದುಕೊಂಡು ಹೊಡೆದು, ಘಾಸಿಗೊಳಿಸಿದ್ದಾರೆ. ತಕ್ಷಣ ಜಗನ್ನಾಥ ಅವರ ಪತ್ನಿಯು ಗಂಡನನ್ನು ಉಪಚರಿಸಿ, ಆಸ್ಪತ್ರೆಗೆ ಕರೆದೊಯ್ದು ಒಳರೋಗಿ ವಿಭಾಗಕ್ಕೆ ದಾಖಲಿಸಿದರು. ಜಗನ್ನಾಥ ಶೆಟ್ಟಿ ಅವರು ನೀಡಿದ ದೂರಿನ ಆಧಾರದ ಮೇಲೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು: ಕೌಕ್ರಾಡಿ ಗ್ರಾಮದ ನಿವಾಸಿ ವೀಜೇಶ್ ಎಂಬ ವ್ಯಕ್ತಿಯು ಮೂರ್ಛೆ ರೋಗಿಯಾಗಿದ್ದು, ತನ್ನ ಸ್ವಂತ ಮನೆಯಲ್ಲಿ ಮ್ಯಾಥ್ಯೂ ಮತ್ತು ಜೋಸೆಫ್ ಎಂಬ ಇಬ್ಬರು ವ್ಯಕ್ತಿಗಳೊಂದಿಗೆ ವಾಸವಾಗಿದ್ದರು. ಬೆಳಗಿನ ಜಾವ ತಮ್ಮ ತೋಟಕ್ಕೆ ಹೋದ ಸಂದರ್ಭದಲ್ಲಿ ಮೂರ್ಛೆ ಸಂಭವಿಸಿ, ತಡೆದುಕೊಳ್ಳಲು ಸಾಧ್ಯವಾಗದೆ ಕಾಲು ಜಾರಿ ಕಣಿವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಮಣ್ಣುಗುಂಡಿಯಲ್ಲಿ ನಡೆದಿದೆ.‌ ನೆಲ್ಯಾಡಿ ಹೊರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.‌ ವೀಜೇಶ್ ಅವರ ಸಾವಿನ ವಿಚಾರಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

• ಬ್ರಹ್ಮಾವರ: ಹೋರಾಟ ಸಮಿತಿಯ ಅಧ್ಯಕ್ಷ ಸತೀಶ್ ಪೂಜಾರಿ ನಿಧನ

ಬ್ರಹ್ಮಾವರ: ಕಳೆದ ಮೂರು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಬಾರ್ಕೂರು ನಿವಾಸಿ, ಬ್ರಹ್ಮಾವರ ತಾಲ್ಲೂಕು ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ಪೂಜಾರಿ ಅವರು ಬುಧವಾರದಂದು ವಿಧಿವಶರಾಗಿದ್ದಾರೆ.‌ ಸಮಾಜ ಸೇವಕರಾಗಿ, ಹಲವಾರು ಹೋರಾಟಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಸದಾ ಚಟುವಟಿಕೆಯಿಂದ ಮತ್ತು ಹಸನ್ಮುಖಿಯಾಗಿ ಇರುತ್ತಿದ್ದ ಸತೀಶ್ ಪೂಜಾರಿ ಅವರ ಅಗಲಿಕೆಗೆ ಗಣ್ಯರು ಸಂತಾಪ ಸೂಚಿಸಿದ್ದಾರೆ.‌

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.