Categories
ಉಡುಪಿ ಕರಾವಳಿ

ಕರಾವಳಿಯಲ್ಲಿ ದೀಪಾಲಂಕಾರ..!

ಉಡುಪಿ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ
– ಎಲ್ಲರ ಗಮನ ಸೆಳೆದ 15 ಅಡಿ ಉದ್ದದ ಅಯೋಧ್ಯಾ ರಾಮ ಮಂದಿರದ ರಂಗೋಲಿ!
– ಕಲ್ಯಾಣಪುರದಲ್ಲಿ ” ಭಾರತ್ ” ಹೂವಿನ ರಂಗವಲ್ಲಿ

NAMMUR EXPRESS NEWS
ಉಡುಪಿ: ಅಂಬಾಗಿಲು ವೈಶವಾಣಿ ಸಮಾಜದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಪಕ್ಷಿ ಜಾಗರಣೆಯ ಪ್ರಯುಕ್ತ ಆದಿತ್ಯವಾರ ಮುಂಜಾನೆ 5 ಗಂಟೆಗೆ ಸಾವಿರಾರು ಹಣತೆ ದೀಪಗಳಿಂದ ವಿಶ್ವರೂಪ ದರ್ಶನ ನಡೆಯಿತು. ಈ ಸಂದರ್ಭದಲ್ಲಿ 15 ಅಡಿ ಉದ್ದದ ಅಯೋಧ್ಯಾ ರಾಮ ಮಂದಿರದ ಮಾದರಿಯ ರಂಗೋಲಿಯು ಭಕ್ತಾಧಿಗಳ ಗಮನ ಸೆಳೆಯಿತು ಶ್ರೀ ದೇವರಿಗೆ ವಿಶೇಷ ಹೂವಿನ ಅಲಂಕಾರ, ದೀಪಾರಾಧನೆ, ಭಜನಾ ಕಾರ್ಯಕ್ರಮ ನಡೆಯಿತು. ಮಹಾ ಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಯಿತು.ವೈಶವಾಣಿ ಸಮಾಜದ ದೇವಳದ ಆಡಳಿತ ಮಂಡಳಿ ಸದಸ್ಯರು ಯುವಕ ಮಹಿಳಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ದೇವಸ್ಥಾನದಲ್ಲಿ ವಿಶ್ವರೂಪ ದರ್ಶನ
– ಎಲ್ಲರ ಗಮನ ಸೆಳೆದ ಹಣತೆಗಳ ನಡುವೆ ಮೂಡಿ ಬಂದ ” ಭಾರತ್ ” ಹೂವಿನ ರಂಗವಲ್ಲಿ

ಉಡುಪಿ: ಕಲ್ಯಾಣಪುರ ಶ್ರೀವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಆದಿತ್ಯವಾರ ಮುಂಜಾನೆ ವಿಶ್ವರೂಪ ದರ್ಶನ ಜರಗಿತು. ಸಾವಿರಾರು ಹಣತೆ ದೀಪಗಳ ನಡುವೆ ಮೂಡಿಬಂದ “ಭಾರತ್ ” ಹೂವಿನ ರಂಗವಲ್ಲಿ ಭಕ್ತರ ಮನ ಸೆಳೆಯಿತು. ಶ್ರೀ ದೇವರಿಗೆ ವಿಶೇಷ ಹೂವಿನ ಅಲಂಕಾರ ಹಾಗೂ ಮಹಾ ಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಯಿತು
ಆಡಳಿತ ಮೊಕ್ತಸರ ಕೆ. ಅನಂತಪದ್ಮನಾಭ ಕಿಣಿ, ಅರ್ಚಕ ಜಯದೇವ ಭಟ್, ಗಣಪತಿ ಭಟ್ ಹಾಗೂ ಆಡಳಿತ ಮಂಡಳಿಯ ಸದಸ್ಯರು ಮತ್ತು ಜಿ ಎಸ್ ಬಿ ಸಭಾ ಸದಸ್ಯರು ಹಾಗೂ ಸಮಾಜ ಬಾಂಧವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.