Categories
ತೀರ್ಥಹಳ್ಳಿ

ಕೋಣಂದೂರಿನಲ್ಲಿ ಸೀನಿಯರ್ ಚೇಂಬರ್ ಶುರು!

ಕೋಣಂದೂರಿನಲ್ಲಿ ಸೀನಿಯರ್ ಚೇಂಬರ್ ಶುರು!
– ಇಂಟರ್ನ್ಯಾಷನಲ್ ಘಟಕ ತೀರ್ಥಹಳ್ಳಿ ಘಟಕದಿಂದ ಸ್ಥಾಪನೆ
– ಸಮಾಜಮುಖಿ ಕೆಲಸಕ್ಕೆ ಸೀನಿಯರ್ ಟೀಮ್ ಎಂಟ್ರಿ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕ್ ಕೋಣಂದೂರಿನಲ್ಲಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಇದರ ನೂತನ ಘಟಕವನ್ನು ಸೀನಿಯರ್ ಕೆ ಪಿ ಎಸ್ ಸ್ವಾಮಿ, ಅಧ್ಯಕ್ಷರು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ತೀರ್ಥಹಳ್ಳಿ ಇವರು ವಿಶ್ವನಾಥ್ ಡಿ ಪಿ ಇವರಿಗೆ ಅಧ್ಯಕ್ಷರಾಗಿ ಪ್ರಮಾಣ ವಚನ ಬೋಧಿಸಿದರು. ನ್ಯಾಷನಲ್ ಹೈಸ್ಕೂಲ್ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸೀನಿಯರ್ ನವೀನ್ ಅಮೀನ್, ರಾಷ್ಟ್ರೀಯ ಉಪಾಧ್ಯಕ್ಷ ಇವರು 30 ಜನ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಸೀನಿಯರ್ ವರ್ಗೀಸ್ ವೈದ್ಯನ್ , ರಾಷ್ಟ್ರೀಯ ಅಧ್ಯಕ್ಷರು ಸನ್ನದು ಮತ್ತು ಪಿನ್ ಕೊಡುವುದರ ಮೂಲಕ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕೋಣಂದೂರು ಘಟಕವನ್ನು ಸ್ಥಾಪಿಸಿದರು.

ಸಹನೆ ಇರುವ ವ್ಯಕ್ತಿ ನಾಯಕನಾಗಬೇಕು,ಸಮಾಜದ ಹಿಂದುಳಿದ ಪ್ರಜೆಗಳಿಗೆ ಸಹಾಯ ಮಾಡುವುದರ ಮೂಲಕ ಸೀನಿಯರ್ ಚೇಂಬರ್ ಸಂಸ್ಥೆ ಬೆಳವಣಿಗೆಗೆ ಹೊಂದಲಿ ಎಂದು ಜಿ ಎಸ್ ನಾರಾಯಣರಾವ್, ಅಧ್ಯಕ್ಷರು, ಎನ್ ಇ ಎಸ್ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಹಾರೈಸಿದರು. ಸೀನಿಯರ್ ಡಾ.ಅರವಿಂದ ರಾವ್ ಕೇದಿಗೆ, ನಿಕಟಪೂರ್ವ ರಾಷ್ಟ್ರೀಯ ಅಧ್ಯಕ್ಷರು, ಸೀನಿಯರ್ ಚಿತ್ರಕುಮಾರ್, ಸೀನಿಯರ್ ಜಯೇಶ್ ಮಾಕಾರ್, ರಾಷ್ಟ್ರೀಯ ನಿರ್ದೇಶಕರು ಘಟಕ ಸ್ಥಾಪನೆ ಬಗ್ಗೆ ಮಾಹಿತಿ ನೀಡಿದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಕೆ ಪಿ ಎಸ್ ಸ್ವಾಮಿ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ವಿಶ್ವನಾಥ್ ದೇಮ್ಲಾಪುರ, ಇವರು ಎಲ್ಲರ ಸಹಕಾರದಿಂದ ಸಂಸ್ಥೆಯನ್ನು ಮುನ್ನೆಡೆಸುವ ಇಚ್ಛೆ ವ್ಯಕ್ತಪಡಿಸಿದ್ದರು. ಸೀನಿಯರ್ ಸೂರ್ಯನಾರಾಯಣ ಇವರು ವೇದಿಕೆಗೆ ಗಣ್ಯರನ್ನು ಸ್ವಾಗತಿಸಿದರು. ಸೀನಿಯರ್ ಟಿ ಎನ್ ಜಗದೀಶ್ , ಸರ್ಜಾ ಕೃಷ್ಣಮೂರ್ತಿ, ಬಿಸಿಲುಮನೆ ಮಂಜುನಾಥ್,ಅಮರೇಂದ್ರ ಜೋಯಿಸ್, ಮಂಜುನಾಥ್,ಮುರಗರಾಜ್ ಅತಿಥಿಗಳನ್ನು ಪರಿಚಯಿಸಿದರು. ಸೀನಿಯರ್ ಹೆಚ್ ಕೆ ನಾಗಭೂಷಣ, ಖಜಾಂಚಿ ಉಪಸ್ಥಿತರಿದ್ದರು. ಸೀನಿಯರ್ ಪ್ರಕಾಶ್ ಬಿ ಕೋಲಿಗೆ ಎಲ್ಲರಿಗೂ ವಂದಿಸಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.