Categories
ಕರಾವಳಿ

ಪ್ರಮುಖ ಸುದ್ದಿ ಕರಾವಳಿ

ಪ್ರಮುಖ ಸುದ್ದಿ ಕರಾವಳಿ

* ಸುಳ್ಯ: ನೇರ ದೂರವಾಣಿಯ ಮೂಲಕ ಸಮಸ್ಯೆ ಆಲಿಸಲು ಮನವಿ
* ಬಂಟ್ವಾಳ: ರಾಷ್ಟ್ರೀಯ ಲೋಕ ಅದಾಲತ್ ಗೆ ಪೂರ್ವಭಾವಿ ಸಭೆ
* ಮಂಗಳೂರು: ನೂತನ ವಿದ್ಯುತ್ ಉಪಕೇಂದ್ರ ಸ್ಥಾಪನೆ ಶೀಘ್ರ
* ಉಳ್ಳಾಲ: ಆಗಸ್ಟ್ 13 ರಿಂದ 17ರ ವರೆಗೆ ಮಳೆ ಸಾಧ್ಯತೆ
* ಕುಂದಾಪುರ: ಮೀನು ಹಿಡಿಯಲು ಹೋದ ವ್ಯಕ್ತಿ ಸಾವು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಸುಳ್ಯ: ಪ್ರತಿ ಮೂರು ತಿಂಗಳಿಗೊಮ್ಮೆ, ಸಂಬಂಧಿಸಿದ ಎಲ್ಲಾ ಇಲಾಖೆಯ ವ್ಯಕ್ತಿಗಳು ಸ್ಥಳೀಯ ವಾಹಿನಿಯ ಮೂಲಕ, ಜನರೊಂದಿಗೆ ನೇರವಾಗಿ ದೂರವಾಣಿಯಲ್ಲಿ ಮಾತನಾಡಿ, ಸಮಸ್ಯೆಗಳನ್ನು ಆಲಿಸುವಂತೆ ಮಾಡಿ ಎಂದು ಸುದ್ಧಿ ಸಂಸ್ಥೆಯ ಮೂಲಕ ಶಾಸಕಿ ಭಾಗೀರಥಿ ಅವರಿಗೆ ಮನವಿಯನ್ನು ಸಲ್ಲಿಸಲಾಗಿದೆ. ಇದರಿಂದ ಸ್ಥಳೀಯರಿಗೆ ಎದುರಾಗುತ್ತಿರುವ ಸಮಸ್ಯೆಗಳೇನು? ಅದಕ್ಕೆ ಯಾವ ರೀತಿಯ ಪರಿಹಾರವನ್ನು ದೊರಕಿಸಲು ಸಾಧ್ಯ ಎಂಬುದರ ಮಾಹಿತಿ ಇಲಾಖೆಯವರಿಗೆ ದೊರೆಯುತ್ತದೆ. ಇದರಿಂದ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಲಾಗಿದೆ.

* ಬಂಟ್ವಾಳ: ರಾಷ್ಟ್ರೀಯ ಲೋಕ ಅದಾಲತ್ ಗೆ ಪೂರ್ವಭಾವಿ ಸಭೆ

ಬಂಟ್ವಾಳ: ಸೆಪ್ಟೆಂಬರ್ 13ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದ ಸಿದ್ಧತೆಗಾಗಿ, ಸೋಮವಾರದಂದು ಬಂಟ್ವಾಳದ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಅನಿಲ್ ಪ್ರಕಾಶ್ ಎಂಪಿ, ಕೃಷ್ಣಮೂರ್ತಿ ಎನ್, ರಾಜೇಂದ್ರ ಪ್ರಸಾದ್ ಕೆ ಎಸ್ ಅವರು ಹಾಜರಿದ್ದರು. ಸಭೆಯಲ್ಲಿ ಹಲವಾರು ವಿಚಾರಗಳ ಕುರಿತು ಚರ್ಚೆ ನಡೆಸಲಾಗಿದ್ದು, ಪ್ರಧಾನವಾಗಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಉಳಿದಿರುವ ಪ್ರಕರಣಗಳಲ್ಲಿ ಮಾತುಕತೆಯ ಮೂಲಕ ಇತ್ಯರ್ಥವಾಗುವಂತಹ ಪ್ರಕರಣಗಳು ಇದ್ದಲ್ಲಿ, ಅವುಗಳನ್ನು ಅಂತಿಮಗೊಳಿಸುವುದು, ಬಂಟ್ವಾಳ ನ್ಯಾಯಾಲಯದ ಸಂಕೀರ್ಣದಲ್ಲಿರುವ ಮತ್ತು ಎಲ್ಲಾ ನ್ಯಾಯಾಲಯಗಳಲ್ಲಿ ವಿಚಾರಣೆಯ ಹಂತದಲ್ಲಿರುವ, ರಾಜಿಯ ಮೂಲಕ ಅಂತಿಮಗೊಳಿಸಲು ಸಾಧ್ಯವಾಗುವಂತಹ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು, ದಾವಾ ಪ್ರಕರಣಗಳನ್ನು ರಾಜಿಸಂಧಾನದ ಮೂಲಕ ಇತ್ಯರ್ಥಗೊಳಿಸುವ ಕುರಿತು ನಿರ್ಧಾರ ಕೈಗೊಳ್ಳಲಾಯಿತು. ಸೆಪ್ಟೆಂಬರ್ 13 ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮವನ್ನು ಬಂಟ್ವಾಳದ ನ್ಯಾಯಾಲಯಗಳಲ್ಲಿ ಏರ್ಪಡಿಸಲಾಗಿದೆ ಎಂದು ತಿಳಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳಿಗೆ ಇತ್ಯರ್ಥಪಡಿಸುವಂತಹ ವ್ಯಾಜ್ಯಗಳನ್ನು ಅದಲತ್ ಗಮನಕ್ಕೆ ತರುವಂತೆ ಮಾಹಿತಿ ನೀಡಿದ್ದಾರೆ. ಇವುಗಳೊಂದಿಗೆ ಬ್ಯಾಂಕ್ ವಸೂಲಾತಿ ಪ್ರಕರಣಗಳು, ವಿದ್ಯುತ್ ಮತ್ತು ನೀರಿನ ಶುಲ್ಕಗಳಿಗೆ ಸಂಬಂಧಿಸಿದ ವಿವಾದಗಳು, ಕಾರ್ಮಿಕ ವಿವಾದಗಳನ್ನು ಸಹ ಸರಳ ರೀತಿಯಲ್ಲಿ ಇತ್ಯರ್ಥ ಪಡಿಸಬಹುದಾಗಿದೆ ಎಂದು ಆಯಾ ಇಲಾಖೆಗಳಿಗೆ ತಿಳಿಯಪಡಿಸಲಾಗಿದೆ.

* ಮಂಗಳೂರು: ನೂತನ ವಿದ್ಯುತ್ ಉಪ ಕೇಂದ್ರ ಸ್ಥಾಪನೆ ಶೀಘ್ರ

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಕುಡುಪುವಿನಲ್ಲಿ 2018ರಲ್ಲೇ ವಿದ್ಯುತ್ ಉಪಕೇಂದ್ರವೊಂದನ್ನು ಸ್ಥಾಪಿಸಬೇಕೆಂದು ತೀರ್ಮಾನಿಸಲಾಗಿದ್ದು, ಅದು ಇಂದಿಗೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಸೋಮವಾರದಂದು ಪ್ರಶ್ನೋತ್ತರ ಸಂದರ್ಭದಲ್ಲಿ ಕಾಂಗ್ರೆಸ್ ನ ಐವನ್ ಡಿಸೋಜಾ ಅವರು ಬೇಸರವನ್ನು ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಅವರು ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಯಾವುದೇ ರೀತಿಯ ಸಮಸ್ಯೆ ತಲೆದೋರಿಲ್ಲ. ಆದರೆ, ಉಪಕೇಂದ್ರ ಸ್ಥಾಪನೆಯೇ ದೊಡ್ಡ ಸಮಸ್ಯೆಯಾಗಿ ನಿಂತಿದೆ.‌ ಏಕೆಂದರೆ ಉಪಕೇಂದ್ರವನ್ನು ನಿರ್ಮಾಣ ಮಾಡಲು ಯಾವುದೇ ಸೂಕ್ತ ಜಾಗ ಲಭಿಸುತ್ತಿಲ್ಲ, ಒಂದು ವೇಳೆ ಸಿಕ್ಕಿದರು ಅದು ದುಪ್ಪಟ್ಟು ಹಣವನ್ನು ಹೊಂದಿದೆ. ಹೀಗಾಗಿ ನಿರ್ಮಾಣ ಕಾರ್ಯವು ಪ್ರಾರಂಭಿಸಲು ಈ ರೀತಿಯ ಅನೇಕ ಅಡಚಣೆಗಳು ಉಂಟಾಗಿರುವ ಹಿನ್ನೆಲೆಯಲ್ಲಿ ಉಪಕೇಂದ್ರ ಸ್ಥಾಪನೆಗೆ ತಡವಾಗುತ್ತಿದೆ.‌ ಆದರೂ ಮಂಗಳೂರು ತಾಲ್ಲೂಕಿನ ಕುಡುಪುವಿನಲ್ಲಿ 2ಗಿ 20 ವಿಎ, 110/ 11 ಕಿಲೋ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಉಪಕೇಂದ್ರವನ್ನು ಆದಷ್ಟು ಬೇಗ ಸ್ಥಾಪನೆಯಾಗಲಿದೆ ಎಂಬ ಭರವಸೆಯನ್ನು ನೀಡಿದರು

* ಉಳ್ಳಾಲ: ಆಗಸ್ಟ್ 13 ರಿಂದ 17ರ ವರೆಗೆ ಮಳೆ ಸಾಧ್ಯತೆ

ಉಳ್ಳಾಲ: ಉಳ್ಳಾಲ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಸೋಮವಾರದಂದು ಸಾಧಾರಣ ಮಳೆಯಾಗಿದ್ದು, ಹವಾಮಾನ ಇಲಾಖೆಯ ಪ್ರಕಾರ ಆಗಸ್ಟ್ 13 ರಿಂದ 17ರವರೆಗೆ ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.‌ ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಎಲ್ಲೋ ಅಲರ್ಟ್ ಅನ್ನು ಘೋಷಿಸಲಾಗಿದೆ.

* ಕುಂದಾಪುರ: ಮೀನು ಹಿಡಿಯಲು ಹೋದ ವ್ಯಕ್ತಿ ಸಾವು

ಕುಂದಾಪುರ: ಮೀನು ಹಿಡಿಯಲು ಹೋದ ವ್ಯಕ್ತಿಯೊಬ್ಬ ಎರಡು ದಿನಗಳಿಂದ ನಾಪತ್ತೆಯಾಗಿದ್ದು, ಸೋಮವಾರದಂದು ಆತನ ಮೃತದೇಹ ಸೀತಾ ನದಿಯ ಹೊಸ ಸೇತುವೆಯ ಬಳಿ ಕಂಡುಬಂದಿದೆ. ಬಲೆ ಬೀಸಿ ಮೀನು ಹಿಡಿಯುವಾಗ, ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.‌ ಮೃತನನ್ನು ಕೋಡಿ ಕನ್ಯಾಣ್ ನಿವಾಸಿ ಸುರೇಶ್ ವಡ್ದರ್ಸೆ ಎಂದು ಹೇಳಲಾಗಿದ್ದು, ಆಕಸ್ಮಿಕ ಸಾವಿಗೆ ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.