Categories
ಕರಾವಳಿ

ಮಂಗಳೂರು: ಸೊಂಟದ ಕೀಲು ಬದಲಾವಣೆ ಯಶಸ್ವಿ ಶಸ್ತ್ರ ಚಿಕಿತ್ಸೆ

ಕರಾವಳಿ ಟಾಪ್ ನ್ಯೂಸ್

• ಮಂಗಳೂರು: ಸೊಂಟದ ಕೀಲು ಬದಲಾವಣೆ ಯಶಸ್ವಿ ಶಸ್ತ್ರ ಚಿಕಿತ್ಸೆ
• ಬೈಂದೂರು: ಮಳೆಯ ತೀವ್ರತೆಗೆ ಗುಡ್ಡದ ಮಣ್ಣು ಕುಸಿತ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಂಗಳೂರು: ಕೆಎಂಸಿ ಆಸ್ಪತ್ರೆಯ ಅರ್ಥೊಪೆಡಿಕ್ ವಿಭಾಗವು ಹೊಸ ಮೈಲಿಗಲ್ಲೊಂದನ್ನು ಸೃಷ್ಟಿಸಿದೆ. 85 ವರ್ಷದ ಮಹಿಳೆಯು ಸೊಂಟದ ಕೀಲು ಮುರಿದು, ಯಮಯಾತನೆಯನ್ನು ಅನುಭವಿಸುತ್ತಿದ್ದರು. ಎದ್ದು ಓಡಾಡವಷ್ಟು ಸಾಮರ್ಥ್ಯ ಕೂಡ ಅವರಲ್ಲಿ ಇರಲಿಲ್ಲ. ಹೀಗಾಗಿ ಮಹಿಳೆಯು ತಪಾಸಣೆಗೆ ಒಳಪಟ್ಟರು. ಆಗ ಆರ್ಥೋಪೆಡಿಕ್ ವಿಭಾಗದ ತಜ್ಞ ವೈದ್ಯರು ಮಹಿಳೆಯ ವಯಸ್ಸು ಮತ್ತು ಸಮಸ್ಯೆಯನ್ನು ಪರಿಗಣಿಸಿ, ರೀಕ್ಲೇಮ್ ರಿವಿಶನ್ ಹಿಪ್ ಸಿಸ್ಟಮ್ ಶಸ್ತ್ರಚಿಕಿತ್ಸೆಯನ್ನು ಮಾಡಲು ನಿರ್ಧರಿಸಿದರು. ಈ ರೀತಿಯ ಶಸ್ತ್ರಚಿಕಿತ್ಸೆಯಲ್ಲಿ ಮುರಿದಿರುವ ಮೂಳೆಯ ಭಾಗವನ್ನು, ಬೈಪಾಸ್ ಮೂಲಕ ಕೃತಕ ಕೀಲು ಮಾದರಿಯ ವಿಶೇಷವಾದ ಇಂಪ್ಲಾಂಟ್ ಅನ್ನು ಅಳವಡಿಸಲಾಗುತ್ತದೆ. ವಯಸ್ಸಾದ ಮಹಿಳೆಗೆ ಇಂತಹ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಮಾಡುವಲ್ಲಿ, ಕೆಎಂಸಿ ಆಸ್ಪತ್ರೆಯ ಡಾ/ ವಿಕ್ರಮ್ ಜಿ.ಕೆ. ಭಟ್, ಡಾ/ಸುಧೀಂದ್ರ ಕೆ ಮತ್ತು ಅರವಳಿಕೆ ತಜ್ಞರಾದ ಶಿಲ್ಪಾ ಜಿ.ಕೆ. ಭಟ್ ಅವರು ಯಶಸ್ವಿಯಾಗಿದ್ದಾರೆ. ಇದು ಮಂಗಳೂರಿನಲ್ಲಿ ಮೊದಲ ಬಾರಿಗೆ ನಡೆದಿರುವುದು ಎಂದು ಹೇಳಲಾಗಿದೆ.

• ಬೈಂದೂರು: ಮಳೆಯ ತೀವ್ರತೆಗೆ ಗುಡ್ಡದ ಮಣ್ಣು ಕುಸಿತ

ಬೈಂದೂರು: ಮಂಗಳವಾರದಂದು ಸಂಭವಿಸಿದ ಮಳೆಯ ಅಬ್ಬರದ ಪರಿಣಾಮವಾಗಿ ರಾಷ್ಟ್ರೀಯ ಹೆದ್ದಾರಿಯ ಒತ್ತಿನೆಣೆ ಗುಡ್ಡದ ಮಣ್ಣು ಕುಸಿದಿದೆ. ಸ್ವಲ್ಪ ಪ್ರಮಾಣದ ಮಣ್ಣು ಬಿದ್ದಿದ್ದರಿಂದ, ಯಾವುದೇ ರೀತಿಯ ಅಡಚಣೆಯುಂಟಾಗಲಿಲ್ಲ.‌ ಅಲ್ಲದೆ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಐಆರ್ ಬಿ ಸಂಸ್ಥೆಯ ಸಿಬ್ಬಂದಿಗಳು ಯಂತ್ರದ ಸಹಾಯದಿಂದ ಮಣ್ಣನ್ನು ತೆರವುಗೊಳಿಸಿ ಸಂಚಾರಕ್ಕೆ ಹಾದಿಯನ್ನು ಸುಗಮಗೊಳಿಸಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.