ಕರಾವಳಿ ಟಾಪ್ ನ್ಯೂಸ್
ಮಂಗಳೂರು: ಐಶರಾಮಿ ಬಂಗಲೆಯಲ್ಲಿ ಕಾರ್ಯಕ್ರಮ ನಡೆಯುತ್ತಿರುವಾಗ ಅಗ್ನಿ ಅವಘಡ
– ಮೂಡುಬಿದಿರೆ: ಬಾಲಕಿಗೆ ಕಿರುಕುಳ ಪ್ರಕರಣ, ಆರೋಪಿ ಬಂಧನ…!
– ಪುತ್ತೂರು: ದಾರಿ ಕೇಳುವ ನೆಪದಲ್ಲಿ, ಚಿನ್ನ ಎಗರಿಸಿ ಪರಾರಿ!
NAMMUR EXPRESS NEWS
ಮಂಗಳೂರು: ಐಶರಾಮಿ ಬಂಗಲೆಯಲ್ಲಿ ಖಾಸಗಿ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಅಗ್ನಿ ಅವಘಡ ಸಂಭವಿಸಿದ ಘಟನೆ ನಗರದ ಲೇಡಿಹಿಲ್‌ನ ಗಾಂಧಿನಗರ ಬಳಿ ಮಾ.12ರಂದು ಬುಧವಾರ ನಡೆದಿದೆ.
ಬಂಗಲೆಯಲ್ಲಿದ್ದ ಜನ ಅಪಾಯದಿಂದ ಪಾರಾಗಿದ್ದಾರೆ. ಸಮಾರಂಭ ನಡೆಯುತ್ತಿದ್ದಾಗಲೇ ಈ ಅವಘಡ ನಡೆದಿದೆ. ಅಗ್ನಿಶಾಮಕದಳ ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವ ಕೆಲಸ ನಡೆದಿದೆ.
– ಮೂಡುಬಿದಿರೆ: ಬಾಲಕಿಗೆ ಕಿರುಕುಳ ಪ್ರಕರಣ, ಆರೋಪಿ ಬಂಧನ…!
ಮೂಡುಬಿದಿರೆ: ಪಾಲಡ್ಕ ಗ್ರಾಪಂ ಬಾಲಕನಿಗೆ ಕಿರುಕುಳ ನೀಡಿದ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಮಾ. 11ರಂದು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮೂಡುಬಿದಿರೆ ವ್ಯಾಪ್ತಿಯ ಮಾರ್ಪಾಡಿ ಗ್ರಾಮದ ಅಲಂಗಾರು ನಿವಾಸಿ ಪವನ್ ಕುಮಾರ್ ಎಂದು ಗುರುತಿಸಲಾಗಿದೆ.
ಈತ ಮಾ.8ರಂದು ಸಂಜೆ ಪಾಲಡ್ಕ ಗ್ರಾಪಂ ವ್ಯಾಪ್ತಿಯ ಕಡಂದಲೆ ವಿದ್ಯಾಗಿರಿ ಬಳಿ, ಜನತಾ ಟ್ಯೂಷನ್ ಮುಗಿಸಿ ಸೈಕಲ್‌ನಲ್ಲಿ ಮನೆಗೆ ತೆರಳುತ್ತಿದ್ದ ಬಾಲಕಿಯನ್ನು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದು ನಿರ್ಜನ ಪ್ರದೇಶದಲ್ಲಿ ಆಕೆಯನ್ನು ಅಡ್ಡಗಟ್ಟಿ ಕಿರುಕುಳ ನೀಡಿದ್ದ ಎಂದು ದೂರವಾಗಿದೆ.
ಬಾಲಕಿ ಆತನಿಂದ ತಪ್ಪಿಸಿಕೊಂಡು ಮನೆಗೆ ಓಡಿ ಹೋಗಿದ್ದು, ಈ ವೇಳೆ ಆರೋಪಿ ಪವನ್ ಕುಮಾರ್ ಅಲ್ಲಿಂದ ಪರಾರಿಯಾಗಿದ್ದಾನೆ.
ವಿವಿಧ ಮೂಲಗಳ ಕುರಿತು ಮಾಹಿತಿ ಸಂಗ್ರಹಿಸಿದ ಈ ಅಲಂಗಾರು ಬಳಿ ಈತನನ್ನು ಬಂಧಿಸಲಾಗಿದೆ. ಆರೋಪಿ ಪ ಕುಮಾರ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
– ಪುತ್ತೂರು: ದಾರಿ ಕೇಳುವ ನೆಪದಲ್ಲಿ, ಚಿನ್ನ ಎಗರಿಸಿ ಪರಾರಿ!
ಪುತ್ತೂರು: ದಾರಿ ಕೇಳುವ ನೆಪದಲ್ಲಿ ಚಿನ್ನದ ಉಂಗುರ ಎಳೆದು ಪರಾರಿಯಾಗಿರುವ ಘಟನೆ ಪುತ್ತೂರಿನ ರಾಗಿದಕುಮೇರ್ ಬಳಿಯ ಅಂದ್ರಟ್ಟ ಎಂಬಲ್ಲಿ ನಡೆದಿದೆ.
ರಾತ್ರಿ ವೇಳೆ, ಅಪರಿಚಿತ ವ್ಯಕ್ತಿ ದಾರಿ ಕೇಳಿದ್ದಾನೆ. ಆಗ ದಾರಿ ಹೇಳಲು ಬಂದ ಮನೆಯವರ ಕೈಯಲ್ಲಿದ್ದ ಉಂಗುರವನ್ನು ಕಿತ್ತು ಬೈಕ್‌ನಲ್ಲಿ ಬಂದ ವ್ಯಕ್ತಿ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಪುತ್ತೂರು ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.