Categories
ಕರಾವಳಿ

ಮಂಗಳೂರು: ಜೈಲಿನಲ್ಲಿ ಖೈದಿಗಳ ಹೊಡೆದಾಟ!

ಟಾಪ್ ನ್ಯೂಸ್ ಕರಾವಳಿ

* ಮಂಗಳೂರು: ಜೈಲಿನಲ್ಲಿ ಖೈದಿಗಳ ಹೊಡೆದಾಟ!
* ಪುತ್ತೂರು: ಬಿಜೆಪಿ ಮುಖಂಡನ ಪುತ್ರನಿಂದ ಅತ್ಯಾಚಾರ?!
* ಉಪ್ಪಿನಂಗಡಿ: ಮಣ್ಣಿನಲ್ಲಿ ಹೂತು ಹೋದ ಮಹಿಳೆಯರು!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

ಮಂಗಳೂರು: ಸೆರೆಮನೆಯಲ್ಲಿ ಖೈದಿಗಳು ಪರಸ್ಪರ ಹೊಡೆದಾಡಿಕೊಂಡ ಘಟನೆ ಕೊಡಿಯಾಲ್ ಬೈಲ್ ನ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ. ಕೇಶವ ಮತ್ತು ಉಳ್ಳಾಲದ ರೌಡಿ ಮುಖ್ತಾರ್ ಮತ್ತು ಇತರ ಖೈದಿಗಳ ನಡುವೆ ಹೊಡೆದಾಟ ನಡೆದಿದ್ದು, ಮುಖ್ತಾರ್ ಮತ್ತು ಇನ್ನೊಬ್ಬ ಖೈದಿ ಸೇರಿಕೊಂಡು ಕೇಶವನ ಮೇಲೆ ದಾಳಿ ನಡೆಸಿದ್ದಾರೆ.‌ ಗಾಯಗೊಂಡ ಕೇಶವನನ್ನು ಪೊಲೀಸರು ವೆನ್ಲಾಕ್ ಆಸ್ಪತ್ರೆಗೆ ಸೇರಿಸಿದ್ದಾರೆ. ಕೇಶವ 2023 ರಲ್ಲಿ ಸಂಭವಿಸಿದ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಪಟ್ಟಿದ್ದು, ಮುಖ್ತಾರ್ 2022 ರಿಂದ ಹದಿನೈದು ಪ್ರಕರಣಗಳಲ್ಲಿ ಆರೋಪಿಯಾಗಿದ್ದು ಸೆರೆಮನೆ ವಾಸ ಅನುಭವಿಸುತ್ತಿದ್ದಾನೆ ಎನ್ನಲಾಗಿದೆ. ಈ ಹಿಂದೆ ಕೂಡ ಹಲವು ಬಾರಿ ಖೈದಿಗಳ ನಡುವೆ ಘರ್ಷಣೆ ಸಂಭವಿಸಿತ್ತು. ಕಾರಾಗೃಹದಲ್ಲಿ ನಡೆದ ಘಟನೆ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಡಿಯಾಲ್ ಬೈಲ್ ಕೇಂದ್ರ ಕಾರಾಗೃಹಕ್ಕೆ ಎಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪುತ್ತೂರು: ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿರುವ ಯುವತಿಯನ್ನು ಆಕೆಯ ಸಹಪಾಠಿಯೋರ್ವ ಪ್ರೀತಿಸಿ, ಮದುವೆಯಾಗುವ ಭರವಸೆ ನೀಡುವ ಮೂಲಕ 2024 ರಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಗೆ ಕರೆದುಕೊಂಡು ಹೋಗಿ ದೈಹಿಕ ಸಂಪರ್ಕ ಹೊಂದಿ, ಅವಳು ಗರ್ಭವತಿಯಾದ ಸಂಗತಿ ತಿಳಿದು ಮದುವೆಯಾಗಲು ನಿರಾಕರಿಸಿ, ನಾಪತ್ತೆಯಾಗಿದ್ದಾನೆ. ಪ್ರೌಢಶಾಲೆಯಿಂದಲೂ ಪ್ರೀತಿಸುತ್ತಿದ್ದು, ಜನವರಿ ತಿಂಗಳಲ್ಲಿ ಮತ್ತೆ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿ ಈಗ ಯುವತಿಯನ್ನು ಈ ಸ್ಥಿತಿಗೆ ತಂದಿದ್ದಾನೆ ಎನ್ನಲಾಗಿದೆ. ಯುವತಿಯು ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಿದ್ದು, ಪುತ್ತೂರು ಬಿಜೆಪಿ ಮುಖಂಡನ ಪುತ್ರನ ಪತ್ತೆಹಚ್ಚುವಲ್ಲಿ ಪೊಲೀಸರು ಕಾರ್ಯನಿರತರಾಗಿದ್ದಾರೆ.

ಉಪ್ಪಿನಂಗಡಿ: ಎರಡು ರಸ್ತೆಗಳ ನಡುವೆ ವಿಭಜಕವನ್ನು ರಚಿಸಲು, ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಹಿನ್ನೆಲೆಯಲ್ಲಿ ಹಾಕಿರುವ ಮಣ್ಣಿನಲ್ಲಿ ಸತತ ಎರಡು ದಿನಗಳ ಕಾಲ ಮಹಿಳೆಯರು ಹೂತು ಹೋಗಿ ತಕ್ಷಣ ದೊರೆತ ರಕ್ಷಣೆಯಿಂದಾಗಿ, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಶಿಕ್ಷಕಿಯೊಬ್ಬರು ಶಾಲೆಗೆ ಬೇಗ ತಲುಪುವ ಸಲುವಾಗಿ, ಬಸ್ ನಿಲ್ದಾಣ ತಲುಪುವ ಮೊದಲು ಶಾಲೆಗೆ ಹತ್ತಿರದ ದಾರಿಯಾದ ಹೆದ್ದಾರಿಯಲ್ಲಿ ಇಳಿದು ಮತ್ತೊಂದು ಭಾಗಕ್ಕೆ ಹೋಗುವಾಗ ವಿಭಾಜಕವನ್ನು ದಾಟುವ ಅನಿವಾರ್ಯತೆ ಎದುರಾಗಿದೆ.‌ ಆಗ ಮಣ್ಣಿನಲ್ಲಿ ಕಾಲಿರಿಸಿದೊಡನೆ ಸೊಂಟ ಮಟ್ಟದ ತನಕ ಹೂತು ಹೋಗಿದ್ದು, ಕೂಡಲೆ ಜೆಸಿಬಿ ಯಂತ್ರದ ಸಹಾಯದಿಂದ ಅವರನ್ನು ಮೇಲೆತ್ತಿ ರಕ್ಷಿಸಲಾಯಿತು. ವಿಭಾಜಕ ಸ್ಥಳ ಆಳವಾಗಿದ್ದು, ಮಳೆಯ ರಭಸದಿಂದ ಮಣ್ಣು ಸಡಿಲಗೊಂಡಿರುವುದು ಇದಕ್ಕೆ ಕಾರಣವಾಗಿದೆ. ಮರುದಿನ ಕೂಡ ಮತ್ತೋರ್ವ ಮಹಿಳೆ ಇಂತಹ ಅಪಾಯಕ್ಕೆ ಒಳಗಾಗಿದ್ದಾರೆ. ಹೀಗೆ ಸತತ ಎರಡು ದಿನಗಳ ಕಾಲ ಈ ರೀತಿಯ ಅಪಾಯಕಾರಿ ಘಟನೆ ಸಂಭವಿಸಿದ್ದು ಜನರಲ್ಲಿ ಭಯ ಆವರಿಸಿಕೊಂಡಿದೆ. ಇನ್ನು ಶಾಲಾ ಮಕ್ಕಳಿಗೆ ಇಂತಹ ಪರಿಸ್ಥಿತಿ ಎದುರಾದರೆ ಗತಿಯೇನು ಎಂದು ತಲ್ಲಣಿಸಿದ್ದಾರೆ. ಇದರೊಂದಿಗೆ ಅಪಾಯವನ್ನು ತಡೆಗಟ್ಟಲು ಬೇಕಾದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಊರಿನ ನಾಗರಿಕರು ಮತ್ತು ಅಪಾಯವನ್ನು ಎದುರಿಸಿದ ಮಹಿಳೆಯರು ಮಾಧ್ಯಮಗಳ ಮೂಲಕ ಸಂಬಂಧಿತ ವ್ಯಕ್ತಿಗಳು ಗಮನಹರಿಸುವಂತೆ ಮಾಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.