ಮಂಜೇಶ್ವರ: ತಾಯಿಯನ್ನೆ ಬೆಂಕಿ ಹಚ್ಚಿ ಕೊಲೆಗೈದ ಆರೋಪಿ ಬಂಧನ
NAMMUR EXPRESS NEWS
ಮಂಜೇಶ್ವರ: ಮನೆಯಲ್ಲಿ ಮಲಗಿದ್ದ ತಾಯಿಗೆ ಬೆಂಕಿ ಹಚ್ಚಿ ಆಕೆಯನ್ನು ಕೊಲೆಗೈದು, ನೆರೆಮನೆಯ ಮಹಿಳೆಯನ್ನು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬೈಂದೂರಿನಲ್ಲಿ ಬಂಧಿಸಿದ್ದಾರೆ.
ವರ್ಕಾಡಿ ನಲ್ಲಂಗಿ ನಿವಾಸಿ ದಿವಂಗತ ಲೂಯಿಸ್ ಮೊತೆರೋ ಅವರ ಪುತ್ರ ಮೆಲ್ವಿನ್ ಮೊಂತೆರೊ (33) ಬಂಧಿತ ಆರೋಪಿ.
ಈ ಘಟನೆ ಜೂನ್ 26ರ ಗುರುವಾರ ಮುಂಜಾನೆ ನಡೆದಿದ್ದು, ಪುತ್ರ ಮೇಲ್ವಿನ್ ಮೊಂತೇರೋ (33) ಈ ಕೃತ್ಯವೆಸಗಿ ಪರಾರಿಯಾಗಿದ್ದ. ತಡರಾತ್ರಿ ತಾಯಿಗೆ ಬೆಂ*ಕಿ ಹಚ್ಚಿದ ಬಳಿಕ, ನೆರೆಮನೆಯ ಮಹಿಳೆಯನ್ನು ತಾಯಿಗೆ ಹುಷಾರಿಲ್ಲವೆಂದು ಮನೆಗೆ ಕರೆದ ಬಳಿಕ ಆಕೆಗೂ ಬೆಂ*ಕಿ ಹಚ್ಚಿದ್ದಾನೆ. ತಾಯಿಯ ಮೃ*ತದೇಹ ಮನೆಯ ಹಿಂಭಾಗದ ಪೊದೆಗಳ ಎಡೆಯಲ್ಲಿ ಪತ್ತೆಯಾಗಿತ್ತು.
ಮನೆಯಲ್ಲಿ ತಾಯಿ ಮತ್ತು ಮಗ ಮಾತ್ರವೇ ವಾಸಿಸುತ್ತಿದ್ದು. ಇನ್ನೋರ್ವ ಮಗ ಅಲ್ವಿನ್ ಮೊಂತೇರೋ ಕೊಲ್ಲಿ ರಾಷ್ಟ್ರದಲ್ಲಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿ ಮೇಲ್ವಿನ್ ಕಟ್ಟಡ ಕಾರ್ಮಿಕನಾಗಿದ್ದು, ಕೊಲೆ ಕೃತ್ಯಕ್ಕೆ ಕಾರಣವೇನೆಂಬುದು ಪೊಲೀಸರ ವಿಚಾರಣೆಯ ನಂತರ ತಿಳಿದುಬರಬೇಕಾಗಿದೆ.