Categories
ಕರಾವಳಿ

ಮೂಡುಬಿದಿರೆ: ಹಿಂದೂ ಮುಖಂಡನ ಮನೆಯಿಂದಲೇ ದನ ಕಳ್ಳತನ!

ಕರಾವಳಿ ಟಾಪ್ ನ್ಯೂಸ್!

ಮೂಡುಬಿದಿರೆ: ಹಿಂದೂ ಮುಖಂಡನ ಮನೆಯಿಂದಲೇ ದನ ಕಳ್ಳತನ!

– ವಿಟ್ಲ: ಪಾಳುಬಾವಿಯಲ್ಲಿ ಕೊಳೆತ ವ್ಯಕ್ತಿಯೋರ್ವರ ಮೃತದೇಹ ಪತ್ತೆ
– ಪುತ್ತೂರು: ಟೆಲಿಗ್ರಾಮ್ ಟಾಸ್ಕ್ ಕಂಪ್ಲೀಟ್ ಮಾಡಲು ಹೋಗಿ 9.97 ಲಕ್ಷ ರೂ ಕಳಕೊಂಡ ಯುವತಿ!

NAMMUR EXPRESS NEWS
ಮೂಡಬಿದಿರೆ: ಬೆಳುವಾಯಿ ಹಿಂದೂ ಮುಖಂಡರಾದ ಸೋಮನಾಥ್ ಕೋಟ್ಯಾನ್ ರವರ ಮನೆಯ ಹಟ್ಟಿಯಿಂದಲೇ ದನ ಕಳ್ಳತನ ಮಾಡಿದ ಪ್ರಕರಣ ನಡೆದಿದೆ.
ಇದೊಂದು ಗಂಭೀರ ಪ್ರಕರಣವಾಗಿದ್ದು ಇದನ್ನು ಹಿಂದೂ ಜಾಗರಣ ವೇದಿಕೆ ಮೂಡಬಿದ್ರೆ ತಾಲೂಕು ತೀವ್ರವಾಗಿ ಖಂಡಿಸಿದೆ.
ಕಳೆದ ಕೆಲವು ತಿಂಗಳುಗಳಿಂದ ದನ ಕಳ್ಳತನದ ಪ್ರಕರಣಗಳು ಹೆಚ್ಚಾಗಿದ್ದು ಈ ಬಗ್ಗೆ ಸಂಬಂಧಪಟ್ಟ ಪೊಲೀಸ್ ಇಲಾಖೆ ಕೂಡಲೇ ದನ ಕಳ್ಳರನ್ನು ಹಿಡಿಯಬೇಕು ಹಾಗೂ ಅವರ ಮೇಲೆ ದರೋಡೆ ಪ್ರಕರಣ ದಾಖಲಿಸಬೇಕು ಇಲ್ಲವಾದಲ್ಲಿ ಸಮಾಜವೇ ಇದಕ್ಕೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡಲಿದೆ, ಲಭ್ಯವಿರುವ ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಕೋಮು ಗಲಭೆಗಳು ನಡೆದರೆ ನೇರ ಸಂಬಂಧಪಟ್ಟ ಪೊಲೀಸ್ ಇಲಾಖೆ ಅಧಿಕಾರಿಗಳು ಕಾರಣವಾಗಿದ್ದಾರೆ, ಎಂದು ಜಿಲ್ಲಾ ಸಹ ಸಂಯೋಜಕ ಸಮಿತ್ ರಾಜ್ ದರೆಗುಡ್ಡೆ ಎಚ್ಚರಿಕೆ ನೀಡಿದ್ದಾರೆ.

– ವಿಟ್ಲ: ಪಾಳುಬಾವಿಯಲ್ಲಿ ಕೊಳೆತ ವ್ಯಕ್ತಿಯೋರ್ವರ ಮೃತದೇಹ ಪತ್ತೆ

ವಿಟ್ಲ: ಖಾಸಗಿ ಬಸ್ ನಿಲ್ದಾಣದ ಬಳಿಯ ಪಟ್ಟಣ ಪಂಚಾಯತ್ ಹಿಂಭಾಗದಲ್ಲಿರುವ ವ್ಯಕ್ತಿ ಯೋರ್ವರ ಜಮೀನಿನಲ್ಲಿರುವ ಪಾಳು ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾದ ಘಟನೆ ಮಾ.21ರಂದು ನಡೆದಿದೆ.
ಕೆರೆಯೊಳಗಿಂದ ದುರ್ನಾತ ಬಂದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವರು ವಿಟ್ಲ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಹೆಚ್.ಇ.ನಾಗರಾಜ್ ರವರ ನೇತೃತ್ವದ ಪೊಲೀಸರ ತಂಡ ಆಗಮಿಸಿ ಮಾಹಿತಿ ಸಂಗ್ರಹಿಸಿದೆ. ಮೃತದೇಹ ಸಂಪೂರ್ಣ ಕೊಳೆತು ಹೋಗಿದ್ದು, ಗುರುತು ಪತ್ತೆಹಚ್ಚಲು ಅಸಾಧ್ಯವಾದ ಸ್ಥಿತಿ ತಲುಪಿದೆ.

– ಪುತ್ತೂರು: ಟೆಲಿಗ್ರಾಮ್ ಟಾಸ್ಕ್ ಕಂಪ್ಲೀಟ್ ಮಾಡಲು ಹೋಗಿ 9.97 ಲಕ್ಷ ರೂ ಕಳಕೊಂಡ ಯುವತಿ!

ಪುತ್ತೂರು: ಗೋಳಿತ್ತೊಟ್ಟಿನ ಯುವತಿ ಟೆಲಿಗ್ರಾಮಿನಲ್ಲಿ ಟಾಸ್ಕ್ ಕಂಪ್ಲೀಟ್ ಮಾಡಲು ಹೋಗಿ 9.97 ಲಕ್ಷ ರೂ. ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.
ಈ ಬಗ್ಗೆ ಯುವತಿ ನೀಡಿದ ದೂರಿನಂತೆ ಮಂಗಳೂರಿನ ಸಿಇಎನ್ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿಗೆ ಫೆ. 15ರಂದು ಟೆಲಿಗ್ರಾಮ್ ನಲ್ಲಿ ಟಾಸ್ಕ್ ಕಂಪ್ಲೀಟ್ ಮಾಡಿದರೆ ಹಣ ನೀಡುವುದಾಗಿ ತಿಳಿಸಿದ್ದರು. ಯುವತಿಯ ಬ್ಯಾಂಕ್ ಖಾತೆ ವಿವರ ತೆಗೆದುಕೊಂಡು ಟಾಸ್ಕ್ ಕಂಪ್ಲೀಟ್ ಮಾಡಿದ್ದಕ್ಕೆ 150 ರೂ., 250 ರೂ. ಕಳುಹಿಸಿದ್ದರು. ಯುವತಿ ಆರು ಟಾಸ್ಕ್ ಕಂಪ್ಲೀಟ್ ಮಾಡಿದ ನಂತರ ಹಣ ಡೆಪಾಸಿಟ್ ಮಾಡಲು ತಿಳಿಸಿದ್ದು ಅದರಂತೆ ಯುವತಿ 1 ಸಾವಿರ ರೂ. ಕಳುಹಿಸಿದ್ದಕ್ಕೆ 1300 ರೂ., 2000 ರೂ. ಕಳುಹಿಸಿದ್ದಕ್ಕೆ 2600 ರೂ., ಹೀಗೆ ಹಂತ ಹಂತವಾಗಿ ಒಟ್ಟು 9,97,450 ಅಪರಿಚಿತ ವ್ಯಕ್ತಿಯ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿದ್ದು ಸದ್ರಿ ಹಣವನ್ನು ಮರುಪಾವತಿಸುವಂತೆ ಕೇಳಿದಾಗ ನೆಫ್ಟ್ ಮಾಡಲು ಅಸಾಧ್ಯವಾಗಿದ್ದು ಇನ್ನು ಹೆಚ್ಚಿನ ಹಣ ಹಾಕಿದರೆ ಮರುಪಾವತಿಸುವುದಾಗಿ ತಿಳಿಸಿದ್ದಾರೆ.ಅಷ್ಟರಲ್ಲಿ ತಾನು ವಂಚಕರ ಬಲೆಗೆ ಬಿದ್ದ ವಿಚಾರ ತಿಳಿದ ಯುವತಿ ಠಾಣೆಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.