ತೀರ್ಥಹಳ್ಳಿ ಟಾಪ್ 3 ನ್ಯೂಸ್
ಕಾಲುಸಂಕ ಹಾಗೂ ಅಭಿವೃದ್ಧಿ ಕೆಲಸಕ್ಕಾಗಿ ಮನವಿ ಪತ್ರ
– ಸಹಕಾರಿ ನಾಯಕ ಮಂಜುನಾಥ ಗೌಡ ಅವರಿಗೆ ನಾಗೇಶ್ ನೇತೃತ್ವದಲ್ಲಿ ಮನವಿ
– ಮೇಗರವಳ್ಳಿ ಆಸ್ಪತ್ರೆಯಲ್ಲಿ ಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ
– ತೀರ್ಥಹಳ್ಳಿ ಕೆಲ ಸರ್ಕಾರಿ ಅಧಿಕಾರಿಗಳ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರಿಂದ ಸಚಿವರಿಗೆ ದೂರು
NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಡಾ.ಆರ್.ಎಂ.ಮಂಜುನಾಥ ಗೌಡ ಅವರಿಗೆ ಶನಿವಾರ ಬೆಳಿಗ್ಗೆ ಗ್ರಾಮ ಪಂಚಾಯತಿಯ ಕೊದೂರು ಮತ್ತು ಕಂತಗದ್ದೆ ಗ್ರಾಮದ ರೈತರಿಗೂ ಮತ್ತು ಶಾಲಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಾಲುಸಂಕ ಹಾಗೂ ಮೇಳಿಗೆ ಗ್ರಾಮ ಪಂಚಾಯತಿ ಅನೇಕ ಅಭಿವೃದ್ಧಿ ಕೆಲಸಕ್ಕೆ ಮನವಿ ಸಲ್ಲಿಸಲಾಯಿತು.
ಕಾಂಗ್ರೆಸ್ ಮುಖಂಡರು ತೀರ್ಥಹಳ್ಳಿ ಡಿಕೆಶಿ ಅಭಿಮಾನಿ ಬಳಗದ ಅಧ್ಯಕ್ಷರಾದ ನಾಗೇಶ್ ಕಂತಗದ್ದೆ, ಯುವ ಮುಖಂಡರುಗಳಾದ ಕೊಳುವಾಡಿ ಸನತ್ ಗೌಡ, ಸುಧಾಕರ್, ಸಂತೋಷ್, ರಾಘವೇಂದ್ರ ಅವರು ಉಪಸ್ಥಿತಿ ಇದ್ದರು.
ಮೇಗರವಳ್ಳಿ ಆಸ್ಪತ್ರೆಯಲ್ಲಿ ಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ
ತೀರ್ಥಹಳ್ಳಿ: ಯಾವುದೇ ಪ್ರತಿಫಲಾಕ್ಷೆಗಳಿಲ್ಲದೆ ಕೆಲವು ಹೆಚ್ಚುವರಿ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಇಲಾಖೆಯ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಸಹಕರಿಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ಪ್ರಾ ಆ ಕೇಂದ್ರ ಮೇಗರವಳ್ಳಿಯಲ್ಲಿ ಆತ್ಮೀಯವಾಗಿ ಗೌರವಿಸಿ ಅಭಿನಂದಿಸಲಾಯಿತು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ,ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ ಮಾತನಾಡಿ,ವ್ಯಕ್ತಿಗಳಲ್ಲಿನ ಸಕಾರಾತ್ಮಕ ಅಂಶಗಳನ್ನು ಗಮನಿಸಿದಾಗ ಸಮಾಜದ ನಡುವಿನ ಸಾಕಷ್ಟು ಒಳ್ಳೆಯತನಗಳು ಗೋಚರಿಸುತ್ತವೆ.ತಪ್ಪು ಹುಡುಕುವುದನ್ನು ಯಾರು ಬೇಕಾದರೂ ಮಾಡಬಹುದು. ಆದರೆ ಮುಖ್ಯವಾಗಿ ಬೇಕಿರುವುದು ತಪ್ಪುಗಳಾಗದಂತೆ ಉತ್ತಮವಾಗಿ ಕರ್ತವ್ಯ ನಿರ್ವಹಿಸುವಂತೆ ಪ್ರೇರೇಪಿಸುವ ಕಾರ್ಯ. ಸಿಬ್ಬಂದಿ ಕೊರತೆಯ ನಡುವೆ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಮ್ಮ ಕ್ಷೇತ್ರ ಸಿಬ್ಬಂದಿಗಳಿಗೆ ಎಲ್ಲಾ ಆಶಾ ಕಾರ್ಯಕರ್ತೆಯರು ಉತ್ತಮ ಸಹಕಾರ ನೀಡುತಿದ್ದಾರೆ ಎಂದರು.
ಹಿರಿಯ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮ, ವೈದ್ದಾಧಿಕಾರಿ ಡಾ.ರಂಜಿತ ಎನ್ ಎಸ್,ಸನ್ಮಾನಿತರ ಪರವಾಗಿ ಆಶಾ ಕಾರ್ಯಕರ್ತೆ ರೇಖಾ ಮಾತನಾಡಿ ಎಂದರು.
ಆಶಾ ಕಾರ್ಯಕರ್ತೆಯರಾದ ರೇಖಾ, ಗೀತಾ, ಲಕ್ಷ್ಮಿ,ರೇಖಾ ಹೆಚ್ ವಿ ಯವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.ಈ ಬಾರಿಯ ತಾಲ್ಲೂಕು ಮಟ್ಟದ ಲಲಿತಮ್ಮ ಪ್ರಶಸ್ತಿ ಪುರಸ್ಕೃತೆ ಪ್ರಾ ಆ ಸುರಕ್ಷಾಧಿಕಾರಿ ನಾಗರತ್ನರವರನ್ನು ಅಭಿನಂದಿಸಲಾಯಿತು. ಶುಶ್ರೂಷಣಾಧಿಕಾರಿ ನಿರ್ಮಲ ಎಂ ಎನ್ ,ಪ್ರ ದ ಸಹಾಯಕ ನವೀನ್ ಕುಮಾರ್, ಪಾರ್ಮಸಿ ಅಧಿಕಾರಿ ಸನ್ನಿಧಿ, ಪ್ರಾ ಆ ಸುರಕ್ಷಾಧಿಕಾರಿ ವೀಣಾ ಎಂ ಪಿ, ಆರೋಗ್ಯ ನಿರೀಕ್ಷಣಾಧಿಕಾರಿ ಹನುಮಂತ ರೆಡ್ಡಿ ,ಡಿ ದರ್ಜೆ ನೌಕರರಾದ ಗಣೇಶ ಪಾರ್ವತಿ ಪ್ರಾ ಆ ಕೇಂದ್ರ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು ಮತ್ತಿತರರು ಇದ್ದರು.
ತೀರ್ಥಹಳ್ಳಿ ಕೆಲ ಸರ್ಕಾರಿ ಅಧಿಕಾರಿಗಳ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರಿಂದ ಸಚಿವರಿಗೆ ದೂರು
ತೀರ್ಥಹಳ್ಳಿ: ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ಹಿರಿಯ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಇಲಾಖಾ ಸಚಿವರುಗಳಿಗೆ ಅವಮಾನಿಸುವ ರೀತಿ ಉದ್ಧಟತನ ಪ್ರದರ್ಶಿಸುತ್ತಿದ್ದಾರೆ ಎಂಬುದಾಗಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಮಾ. 23ರಂದು ಸಚಿವ ಮಧು ಬಂಗಾರಪ್ಪ ತೀರ್ಥಹಳ್ಳಿಗೆ ಭೇಟಿ ನೀಡುವ ಸಮಯದಲ್ಲಿ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸಲು ತೀರ್ಮಾನಿಸಿದ್ದಾರೆ.
ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಅನುಷ್ಟಾನದ ಸಂದರ್ಭ ಸಿಎಂ, ಡಿಸಿಎಂ, ಇಲಾಖಾ ಸಚಿವರ ಹೆಸರು, ಭಾವಚಿತ್ರ ಕ್ಕೆ ಬಿಟ್ಟು ತಮ್ಮ ಪೊಲಿಟಿಕಲ್ ಬಾಸ್ಗಳು, ಬಿಜೆಪಿ ಶಾಸಕರ ಭಾವಚಿತ್ರ ಮಾತ್ರ ಪ್ರದರ್ಶಿಸಿ ಪ್ಲೆಕ್ಸ್, ಬ್ಯಾನರ್ ಹಾಕಲಾಗುತ್ತಿದೆ. ಇದು ಅಧಿಕಾರಿಗಳ ಅತಿರೇಖದ ವರ್ತನೆ ಎಂದು ಕಾಂಗ್ರೆಸ್ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
