Categories
ಕರಾವಳಿ

ಮತ್ತೆ ಮಳೆ ಹೆಚ್ಚಳ: ಕರಾವಳಿ 2 ತಾಲೂಕಿಗೆ ರಜೆ!

ಮತ್ತೆ ಮಳೆ ಹೆಚ್ಚಳ: ಕರಾವಳಿ 2 ತಾಲೂಕಿಗೆ ರಜೆ!

ಕರಾವಳಿಯ ಯಾವ ತಾಲೂಕಲ್ಲಿ ಏನೇನ್ ಆಯ್ತು…?

* ಕಾರ್ಕಳ: ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ದನದ ರುಂಡ
* ಉಡುಪಿ: ಬಾಲ ಕೇಂದ್ರದಿಂದ ಇಬ್ಬರು ಮಕ್ಕಳು ನಾಪತ್ತೆ
* ಬಂಟ್ವಾಳ: ಉಳ್ಳಾಲ: ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ನಮ್ಮೂರ ಎಕ್ಸ್ ಪ್ರೆಸ್ ನ್ಯೂಸ್
ಕರಾವಳಿ: ಕರಾವಳಿಯಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದು ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಇದರಿಂದ ಅನೇಕ ಕಡೆ ಭಾರೀ ಹಾನಿ ಸಂಭವಿಸಿದೆ.

ಕಾರ್ಕಳ: ತಾಲೂಕಿನ ಗಣಪತಿ ವರ್ಗದ ನಿರ್ಜನ ಪ್ರದೇಶದ ನದಿಯ ಬದಿಯಲ್ಲಿ ದನದ ರುಂಡವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಲೆಬೆಟ್ಟು ಬೆದ್ರಪಲ್ಕೆಯನ್ನು ಸಂಪರ್ಕಿಸುವ ದುರ್ಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಳಿರು ಎನ್ನುವಲ್ಲಿ ಸ್ಥಳೀಯರ ಗಮನಕ್ಕೆ ಇದು ಬಂದಿದೆ.

ಉಡುಪಿ: ಬೆಂಗಳೂರು ಮೂಲದ ದಿಲೀಪ್ ಮತ್ತು ಧನರಾಜ್ ಎಂಬ ಇಬ್ಬರು ಬಾಲಕರು ಉಡುಪಿಯಲ್ಲಿ ಸರ್ಕಾರಿ ಬಾಲಕ ವೀಕ್ಷಣಾ ಕೇಂದ್ರದಲ್ಲಿದ್ದು, ಅಲ್ಲಿಂದ ನಾಪತ್ತೆಯಾಗಿದ್ದಾರೆ.‌ ಇಬ್ಬರನ್ನು ಜುಲೈ 5 ರಂದು ಸ್ವಾಗತ ಕೇಂದ್ರದ ಮೂಲಕ ಇಲ್ಲಿ ದಾಖಲಿಸಲಾಗಿತ್ತು.‌ ಆದರೆ ಭಾನುವಾರದ ಮಧ್ಯಾಹ್ನ ಇಬ್ಬರೂ ಪರಾರಿಯಾಗಿದ್ದಾರೆ. ಸುಲಭ ಕಾರಿಡಾರ್ ಬಾಗಿಲಿನ ಮೂಲಕ ತಪ್ಪಿಸಿಕೊಂಡಿರಬಹುದು ಎಂದು ಅಲ್ಲಿನ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ವೀಕ್ಷಣಾ ಕೇಂದ್ರದ ಆರೈಕೆದಾರರಾದ ಪ್ರಮೋದ್ ಅವರು ಬಾಲಕರು ನಾಪತ್ತೆಯಾಗಿರುವ ಕುರಿತು ಉಡುಪಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಳೆಯ ಪ್ರಮಾಣ ಮತ್ತೆ ಅಧಿಕವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಬಂಟ್ವಾಳ, ಉಲ್ಲಾಳ ಸೇರಿದಂತೆ ಹಲವಾರು ತಾಲ್ಲೂಕುಗಳ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ಮಂಗಳವಾರದಂದು ರಜೆಯನ್ನು ಆಯಾ ತಾಲ್ಲೂಕಿನ ತಹಶೀಲ್ದಾರರು ಘೋಷಿಸಿದ್ದಾರೆ.‌

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.