ಜನಮನ ಸೆಳೆದ ಸತ್ಯೋದ ಸ್ವಾಮಿ ಕೊರಗಜ್ಜ ಯಕ್ಷಗಾನ!
– ತುಳುನಾಡ ದಿಗ್ಗಜರು , ಹಿರಿಯ ಕಲಾವಿದರಿಂದ ಯಕ್ಷಗಾನ ಪ್ರದರ್ಶನ
ಜ. 22ಕ್ಕೆ ಪರಪು ಗುಳಿಗ ಸ್ಥಾನದಲ್ಲಿ ಶಿಲಾನ್ಯಾಸ ಕಾರ್ಯಕ್ರಮ!
– ದೈವಗಳ ನೂತನ ಶಿಲಾಮಯ ಕಟ್ಟೆ ನಿರ್ಮಾಣದ ಪುಣ್ಯ ಕಾರ್ಯಕ್ರಮದ ಸಲುವಾಗಿ ಆಯೋಜನೆ: ಸರ್ವರಿಗೂ ಸ್ವಾಗತ
NAMMUR EXPRESS NEWS
ಕಾರ್ಕಳ: ಸತ್ಯೋದ ಸ್ವಾಮಿ ಕೊರಗಜ್ಜ ಯಕ್ಷಗಾನ ಪ್ರದರ್ಶನದಲ್ಲಿ ಕೊರಗಜ್ಜ ದೈವದ ಸಂಪೂರ್ಣ ಪ್ರಸಂಗವನ್ನು ಯಕ್ಷಗಾನದ ಮೂಲಕ ತೋರಿಸಲಾಗಿದ್ದು ಕಾರ್ಕಳದಲ್ಲಿ ನಡೆದ ಪ್ರದರ್ಶನ ಗಮನ ಸೆಳೆಯಿತು. ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮೇಳದ ಯಕ್ಷಗಾನ , ಬಾಳ – ಕಳವಾರು ಇವರು ಕಾರ್ಕಳ ತಾಲ್ಲೂಕಿನ ಪರಪು ಗುಳಿಗ ಕಟ್ಟೆಯ ಬಳಿ ವಿಶೇಷ ಆಕರ್ಷಣೆಯೊಂದಿಗೆ ಅದ್ದೂರಿ ದೇವಿ ಪ್ರದರ್ಶನ, ಹಾಗೂ ವಿವಿಧ ವೇಷ ಭೂಷಣಗಳು ಜನರ ಗಮನ ಸೆಳೆಯಿತು. ಜ.18ರಂದು ಸಂಕೋಚ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಯಕ್ಷಗಾನವನ್ನು ಇಷ್ಟ ಪಡುವ ಅಭಿಮಾನಿಗಳು ಕರಾವಳಿ ಭಾಗದಲ್ಲಿ ಹೆಚ್ಚಾಗಿದ್ದು, ಕೊರಗಜ್ಜ ದೈವದ ಮೇ ರಾವಳಿ ಭಾಗದ ಜನರಿಗೆ ಅಪಾರವಾದ ನಂಬಿಕೆಯಿದೆ. ಈ ನಿಮಿತ್ತ ನಡೆದ ಸತ್ಯೋದ ಸ್ವಾಮಿ ಕೊರಗಜ್ಜ ಯಕ್ಷಗಾನ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಯಕ್ಷಗಾನದಲ್ಲಿ ತುಳುನಾಡ ದಿಗ್ಗಜ, ಹಿರಿಯ ಕಲಾವಿದರಾಗಿರುವ ಮನೋಹರ್ ಕುಮಾರ್ ಸತ್ಯೋದ ಸ್ವಾಮಿ ಯಕ್ಷಗಾನದಲ್ಲಿ ಈಶ್ವರ ದೇವರ ಪಾತ್ರ ಮಾಡಿರುತ್ತಾರೆ. ಹಾಗೂ ಅಶ್ವಥ್ ಆಚಾರ್ಯ ಎಂಬವರು ಪಾರ್ವತಿ ಪಾತ್ರ ಮಾಡಿರುತ್ತಾರೆ.
* ಜ. 22ಕ್ಕೆ ಪರಪು ಗುಳಿಗ ಸ್ಥಾನದಲ್ಲಿ ಶಿಲಾನ್ಯಾಸ ಕಾರ್ಯಕ್ರಮ!
ಕಾರ್ಕಳ: ಪರಪು ಗುತ್ತು ಕರೆಯ ಬೊಬ್ಬರ್ಯ, ಪಿಲಿಚಂಡಿ, ಗುಳಿಗ ಹಾಗೂ ನೀಚ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ, ಪರಪು, ಕುಕ್ಕುಂದೂರು ಗ್ರಾಮ, ಕಾರ್ಕಳದಲ್ಲಿ ಜ. 22ಕ್ಕೆ ಬುಧವಾರದಂದು ಬೆಳಿಗ್ಗೆ ಗಂಟೆ 9.30ಕ್ಕೆ ಸರಿಯಾಗಿ ಪರಪು ಗುಳಿಗ ಸ್ಥಾನದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪರಪು ಗುತ್ತು ಕರೆಯ ಪಿಲಿಚಂಡಿ ಬೊಬ್ಬರ್ಯ ನೀಚ ಹಾಗೂ ಗುಳಿಗ ದೈವಗಳಿಗೆ ನೂತನ ಶಿಲಾಮಯ ಕಟ್ಟೆ ನಿರ್ಮಾಣದ ಪುಣ್ಯ ಕಾರ್ಯಕ್ರಮದ ಸಲುವಾಗಿ ಶಿಲಾನ್ಯಾಸ ಕಾರ್ಯಕ್ರಮವು ನಡೆಯಲಿದೆ. ದೈವ ಭಕ್ತ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಜೀರ್ಣೋದ್ದಾರ ಸಮಿತಿ ಮತ್ತು ಪರಪು ಗ್ರಾಮಸ್ಥರು, ಈ ಮೂಲಕ ತಿಳಿಸಿದ್ದಾರೆ.
