Categories
ಕರಾವಳಿ

ಬ್ರಹ್ಮಾವರದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ..!

ಟಾಪ್ ನ್ಯೂಸ್ ಕರಾವಳಿ

ಬ್ರಹ್ಮಾವರದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ..!

* ಮಂಗಳೂರು: ಬ್ರೇಕ್ ವಾಟರ್ ಕಲ್ಲುಗಳು ಸಮುದ್ರ ಪಾಲು
* ಪುತ್ತೂರು: ಕುಕ್ಕೆ ಸುಬ್ರಮಣ್ಯದವರೆಗೆ ರೈಲು: ಆದಾಯ ಹೆಚ್ಚಳ
* ಕಾರ್ಕಳ: ಪುರಸಭೆ ಕಚೇರಿಗೆ ಲೋಕಾಯುಕ್ತ ದಾಳಿ!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬ್ರಹ್ಮಾವರ: ದಿನೇ ದಿನೇ ಕರಾವಳಿಯಲ್ಲಿ ಆತ್ಮಹತ್ಯೆ ಹೆಚ್ಚುತ್ತಿದೆ. ಈ ನಡುವೆ ಬಿಎಸ್ಸಿ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವರು ಮಾನಸಿಕ ಖಿನ್ನತೆಗೊಳಗಾಗಿ ನೇಣಿಗೆ ಶರಣಾದ ಘಟನೆ ಬ್ರಹ್ಮಾವರದ ಚೇರ್ಕಾಡಿ ಎಂಬಲ್ಲಿ ನಡೆದಿದೆ.
ಚೇರ್ಕಾಡಿಯ ರಶ್ಮಿತಾ(20) ಬಿಎಸ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ ಸುಮಾರು ಆರು ತಿಂಗಳಿನಿಂದ ಮನೆಯಲ್ಲೇ ಇದ್ದರು.ಕಳೆದ ಎರಡೂವರೆ ತಿಂಗಳಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಚಿಕಿತ್ಸೆ ಕೂಡಾ ಪಡೆಯುತ್ತಿದ್ದರು. ಇದ್ದಕಿದ್ದಂತೆ ದುಡುಕಿನ ನಿರ್ಧಾರ ತೆಗೆದುಕೊಂಡು ಸಾವಿಗೀಡಾಗಿದ್ದಾರೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಬ್ರೇಕ್ ವಾಟರ್ ಕಲ್ಲುಗಳು ಸಮುದ್ರ ಪಾಲು!

ಮಂಗಳೂರು: ಬಂದರು ಯೋಜನೆಯು ವಿಳಂಬವಾದ ಹಿನ್ನೆಲೆಯಲ್ಲಿ ಬ್ರೇಕ್ ವಾಟರ್ ನ ಕಲ್ಲುಗಳು ಸಮುದ್ರದ ಪಾಲಾಗುವ ಸ್ಥಿತಿಯಲ್ಲಿದೆ. ಕಳೆದ ವರ್ಷ ಮಳೆಗಾಲಕ್ಕೆ ಇದೇ ರೀತಿ ಸಮಸ್ಯೆ ಎದುರಾಗಿತ್ತು. ಈ ಬಾರಿ ಅವಧಿಗೂ ಮೊದಲೇ ಮಳೆ ಆರಂಭವಾಗಿರುವುದರಿಂದ ದಕ್ಷಿಣ ಭಾಗದಲ್ಲಿ ಟೆಟ್ರಾಪಾಡ್ ಅಳವಡಿಸದ ಕಡೆಗಳಲ್ಲಿ ಕಲ್ಲುಗಳು ನಿಧಾನವಾಗಿ ಸಮುದ್ರದ ಪಾಲಾಗುತ್ತಿರುವುದು ಕಂಡುಬಂದಿದೆ. ಎರಡು ದಿನಗಳ ಮಳೆಯ ತೀವ್ರತೆಯಿಂದಾಗಿ, ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿರುವ ಕಾರಣ ಸಮಸ್ಯೆ ನಿಧಾನವಾಗಿ ತಲೆದೋರುತ್ತಿದೆ. ಇದೇ ರೀತಿ ಮಳೆ ಮುಂದುವರಿದು, ಅಲೆಗಳ ಹೊಡೆತ ಹೆಚ್ಚಾದಲ್ಲಿ ಬ್ರೇಕ್ ವಾಟರ್ ಸರಿಪಡಿಸದಿದ್ದಲ್ಲಿ ತೊಂದರೆ ಮತ್ತಷ್ಟು ಅಧಿಕ ಪ್ರಮಾಣದಲ್ಲಿ ಸಂಭವಿಸಲಿದೆ ಎನ್ನಲಾಗಿದೆ.

ಕುಕ್ಕೆ ಸುಬ್ರಮಣ್ಯದವರೆಗೆ ರೈಲು: ಆದಾಯ ಹೆಚ್ಚಳ

ಪುತ್ತೂರು: ಮಂಗಳೂರು ಕೇಂದ್ರದಿಂದ ಕಬಕ ಪುತ್ತೂರು ನಡುವೆ ಸಂಚರಿಸುತ್ತಿದ್ದ ರೈಲನ್ನು ಏಪ್ರಿಲ್ ನಿಂದ ಸುಬ್ರಹ್ಮಣ್ಯದವರೆಗೆ ವಿಸ್ತರಿಸಿರುವುದರಿಂದ, ಮೂರು ತಿಂಗಳ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಪ್ರಯಾಣಿಕರು ಇದನ್ನು ಸದ್ಬಳಕೆ ಮಾಡಿಕೊಂಡಿದ್ದಾರ ಫಲವಾಗಿ ರೈಲ್ವೆ ಇಲಾಖೆಯ ಆದಾಯದಲ್ಲಿ ಹೆಚ್ಚಳವಾಗಿದೆ. ಪುತ್ತೂರು ಸುಬ್ರಹ್ಮಣ್ಯ ರೈಲು ಬಳಕೆದಾರರ ಸಮಿತಿಯ ಶಂಕರ ಕಲ್ಮಡ್ಕ ಅವರು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಆದಾಯಕ್ಕೆ ಸಂಬಂಧಿಸಿದಂತೆ ಪ್ರಶ್ನೆಯೊಂದನ್ನು ಕೇಳಿದ್ದಕ್ಕೆ ನೈರುತ್ಯ ರೈಲ್ವೆ ವಲಯದ ಮೈಸೂರು ವಿಭಾಗವು ಜನವರಿಯಿಂದ ಮಾರ್ಚ್ ವರೆಗೂ ಇದ್ದ ರೈಲ್ವೆ ಆದಾಯಕ್ಕೂ, ನಂತರದ ಮೂರು ತಿಂಗಳಿನ ಆದಾಯವನ್ನು ಹೋಲಿಸಿ ನೋಡಿದಾಗ ಮೊದಲಿಗಿಂತ ಹೆಚ್ಚಾಗಿರುವುದು ಕಂಡುಬಂದಿದೆ ಎಂಬ ಮಾಹಿತಿಯನ್ನು ಸ್ಪಷ್ಟಪಡಿಸಿದರು.

ಕಾರ್ಕಳ: ಪುರಸಭೆ ಕಚೇರಿಗೆ ಲೋಕಾಯುಕ್ತ ದಾಳಿ!

ಕಾರ್ಕಳ: ಕಾರ್ಕಳದ ಪುರಸಭೆ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಈ ವೇಳೆ ಮಹತ್ವದ ದಾಖಲೆ ಕಲೆ ಹಾಕಿದ್ದಾರೆ.
ದಾಳಿ ವೇಳೆ ಕಡತಗಳನ್ನು ಪರೀಕ್ಷಿಸಿ, ಖಾತೆಯ ವರ್ಗಾವಣೆ, ಜನನ ಮತ್ತು ಮರಣ ಪ್ರಮಾಣ ಪತ್ರ, ಪರವಾನಗಿ ವಿಚಾರಗಳಿಗೆ ಸಂಬಂಧಿಸಿದಂತೆ ವಿಳಂಬವಾಗುತ್ತಿರುವ ಕುರಿತು ಸಾರ್ವಜನಿಕರು ದೂರು ನೀಡಿದ್ದರು. ಈ ರೀತಿ ತಡವಾಗುತ್ತಿರಲು ಕಾರಣ ಏನೆಂಬುದನ್ನು ಕೇಳಿ, ಮಾಹಿತಿಯನ್ನು ಪಡೆದುಕೊಂಡರು. ಅಲ್ಲದೆ ದೂರಿನ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಪುರಸಭೆ ಕಚೇರಿಯ ಎಲ್ಲಾ ವಿಭಾಗಗಳ ಪ್ರತಿಯೊಂದು ಕಡತಗಳನ್ನು ಸಮಗ್ರವಾಗಿ ಪರಿಶೀಲಿಸಿದರು.
ದಾಳಿ ವೇಳೆ ಹತ್ತು ತಿಂಗಳಿನಿಂದ ಬಾಕಿ ಇದ್ದ ಕಡತಗಳು ಸಿಕ್ಕಿವೆ. ಇಡೀ ಆಡಳಿತಕ್ಕೆ ಅಧಿಕಾರಿಗಳು ಶಾಕ್ ನೀಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.