Categories
ಕರಾವಳಿ

ಬೆಲ್ಟ್ ನಿಂದ ವಿದ್ಯಾರ್ಥಿ ಆತ್ಮಹತ್ಯೆ!

ಕರಾವಳಿ ಟಾಪ್ 5 ನ್ಯೂಸ್

ಬೆಲ್ಟ್ ನಿಂದ ವಿದ್ಯಾರ್ಥಿ ಆತ್ಮಹತ್ಯೆ!
– ಉಡುಪಿಯಲ್ಲಿ ನಡೆದ ಘಟನೆ: ತಾಯಿಗೆ ಶಾಕ್…

* ಕಾಪು: ಜುಗಾರಿ ಆಡುತ್ತಿದ್ದ ಐವರು ಪೊಲೀಸರ ವಶ
* ಬ್ರಹ್ಮಾವರ: ಜಾತಿ ನಿಂದನೆ; ಗ್ರಾಮ ಪಂಚಾಯಿತಿ ಪಿಡಿಒ ಬಂಧನ
* ಮಂಗಳೂರು: ಮಾದಕ ವಸ್ತು ಸೇವಿಸಿ ಸಾರ್ವಜನಿಕರಿಗೆ ಕಿರುಕುಳ!
* ಸುಳ್ಯ: ಅಕ್ರಮ ಗೋಸಾಗಾಟ; ದುಷ್ಕರ್ಮಿಗಳು ಅರೆಸ್ಟ್!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ: ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಸ್ವಸ್ತಿಕ್ ಎನ್ನುವ ಯುವಕ ಬೆಲ್ಟ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಲ್ಪೆಯಲ್ಲಿ ನಡೆದಿದೆ. ಮನೆಯ ಹಾಲಿನ ಕಿಟಕಿಗೆ ನೇಣು ಹಾಕಿಕೊಂಡು, ಸೋಫಾದ ಮೇಲೆ ಒರಗಿ ಬಿದ್ದಿರುವ ಸ್ಥಿತಿಯಲ್ಲಿದ್ದು, ಕೂಡಲೇ ತಾಯಿಯು ನೇಣು ಹಾಕಿಕೊಳ್ಳಲು ಬಳಸಿದ್ದ ಬೆಲ್ಟ್ ಅನ್ನು ಕತ್ತರಿಸಿ, ನೆರೆಮನೆಯವರ ಸಹಾಯದಿಂದ ಗೆರೊಟ್ಟಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಸ್ವಸ್ತಿಕ್ ತಾಯಿಯು ನೋಡುವ ಮೊದಲೇ ಮೃತಪಟ್ಟಿದ್ದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದುಬಂದಿಲ್ಲ. ಆತ್ಮಹತ್ಯೆಗೆ ಸಂಬಂಧಿಸಿದಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಪು: ಜುಗಾರಿ ಆಡುತ್ತಿದ್ದ ಐವರು ಪೊಲೀಸರ ವಶ

ಕಾಪು: ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಹಿನ್ನೆಲೆಯಲ್ಲಿ, ಪೊಲೀಸರು ಅಡ್ಡೆಯ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಉಚ್ಚಿಲದ ಸುಲೇಮಾನ್, ಮಿಥುನ್, ಅತ್ರಾಡಿಯ ಚಂದ್ರಶೇಖರ್, ಅಮಾನುಲ್ಲಾ, ಸುರೇಶ್ ಎನ್ನುವ ಐದು ಮಂದಿಯನ್ನು ಬಂಧಿಸಲಾಗಿದೆ.
ಜೊತೆಗೆ ಏಳು ಸಾವಿರದ ಐನೂರು ರೂಪಾಯಿ ನಗದು ಮತ್ತು ಮೊಬೈಲ್ ಫೋನ್ ಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಹ್ಮಾವರ: ಜಾತಿ ನಿಂದನೆ; ಗ್ರಾಮ ಪಂಚಾಯಿತಿ ಪಿಡಿಒ ಬಂಧನ

ಬ್ರಹ್ಮಾವರ: ಮಹಿಳೆಯೊಬ್ಬರು ಅವೈಜ್ಞಾನಿಕ ರಸ್ತೆ ಕಾಮಗಾರಿಯ ಪರಿಣಾಮದಿಂದಾಗಿ, ಜನರಿಗೆ ಉಂಟಾಗುತ್ತಿರುವ ಸಮಸ್ಯೆಯನ್ನು ಕುರಿತು ಚೇರ್ಕಾಡಿ ಗ್ರಾಮ ಪಂಚಾಯಿತಿಯ ಪಿಡಿಒ ಆದ ಸುಭಾಷ್ ಎನ್ನುವವರಿಗೆ ಅರ್ಜಿಯನ್ನು ಸಲ್ಲಿಸಿದ್ದರು. ಅಲ್ಲದೆ ವನಿತಾ ಅವರ ಹೈನುಗಾರಿಕೆ ಘಟಕಕ್ಕೂ ಸಹ ನೀರು ನುಗ್ಗಿ ಅಪಾರ ನಷ್ಟ ಉಂಟಾಗಿತ್ತು. ಆದರೆ ಸುಭಾಷ್ ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆಯನ್ನು ತೋರದಿದ್ದಾಗ, ಸ್ವತಃ ವನಿತಾ ಅವರೇ ಇದನ್ನು ಕುರಿತು ವಿಚಾರಿಸಲು ಹೋದಾಗ, ಪಿಡಿಒ ಸುಭಾಷ್ ಅವರು ಸಿಟ್ಟುಗೊಂಡಿದ್ದಷ್ಟೇ ಅಲ್ಲದೆ, ವನಿತಾ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿನಿಂದನೆಯನ್ನು ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ಇದಕ್ಕಾಗಿ ವನಿತಾ ಅವರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣವು ವಿಚಾರಣೆ ಹಂತದಲ್ಲಿದೆ.

ಮಂಗಳೂರು: ಮಾದಕ ವಸ್ತು ಸೇವಿಸಿ ಸಾರ್ವಜನಿಕರಿಗೆ ಕಿರುಕುಳ!

ಮಂಗಳೂರು: ಮಹೇಶ್ ಸಾಲಿಯಾನ್ ಎಂಬ ವ್ಯಕ್ತಿಯು ಆಟೋರಿಕ್ಷಾ ನಿಲ್ಲಿಸಿ, ಸಾರ್ವಜನಿಕರಿಗೆ ವಿನಾಕಾರಣ ಬೈಯುತ್ತಿದ್ದ ಆಧಾರದ ಮೇಲೆ, ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆತನನ್ನು ಬಂಧಿಸಿದ್ದಾರೆ. ಈ ರೀತಿ ವರ್ತಿಸಲು ಕಾರಣವೇನೆಂದು ತನಿಖೆ ನಡೆಸಿದಾಗ, ಮಹೇಶ್ ಗಾಂಜಾ ಸೇವನೆ ಮಾಡಿರುವ ಸಂಗತಿ ತಿಳಿದುಬಂದಿದೆ. ಅದರ ಅಮಲಿನಿಂದಾಗಿ ಈ ರೀತಿ ವರ್ತಿಸುತ್ತಿದ್ದಾನೆ ಎನ್ನುವ ಅನುಮಾನ ಪೊಲೀಸರಲ್ಲಿ ಮೂಡಿದೆ. ಮಹೇಶ್ ನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಪೊಲೀಸರ ಸಂದೇಹ ನಿಜವಾಗಿದೆ. ಮಾದಕ ವಸ್ತು ಸೇವನೆ ಮತ್ತು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಮೇರೆಗೆ ಕಂಕನಾಡಿ ಪೊಲೀಸರು ಆತನ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡು, ಸೆರೆಯಲ್ಲಿರಿಸಿದ್ದಾರೆ.

ಸುಳ್ಯ: ಅಕ್ರಮ ಗೋಸಾಗಾಟ; ದುಷ್ಕರ್ಮಿಗಳು ಅರೆಸ್ಟ್!

ಸುಳ್ಯ: ಸುಬ್ರಹ್ಮಣ್ಯದ ಸಮೀಪ ಪಂಜಾ, ಬೆಳ್ಳಾರೆ ಮತ್ತು ನೆಟ್ಟಾರು ಸಮೀಪ ಐದು ಎಮ್ಮೆಗಳನ್ನು ಪಿಕಪ್ ವೊಂದರಲ್ಲಿ ಹಾಕಿಕೊಂಡು, ಈಶ್ವರಮಂಗಲಕ್ಕೆ ಅಕ್ರಮವಾಗಿ ಸಾಗಾಟ ಮಾಡಲು ತಯಾರಿ ನಡೆಸಿರುವ ಮಾಹಿತಿ ತಿಳಿದುಬಂದ ಹಿನ್ನೆಲೆಯಲ್ಲಿ, ಬೆಳ್ಳಾರೆ ಎಸ್ಐ ಸಂತೋಷ್ ಅವರ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ, ಕಾಸರಗೋಡಿನ ದೆಲಂಪಾಡಿ ಮುಜಾಮಿನ್, ಅಬ್ದುಲ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.‌ ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.