Categories
ಕರಾವಳಿ

ಕುಚ್ಚಲಕ್ಕಿಯಲ್ಲಿದೆ ಕರಾವಳಿಯ ಘಮಲು!

ಕುಚ್ಚಲಕ್ಕಿಯಲ್ಲಿದೆ ಕರಾವಳಿಯ ಘಮಲು!
* ಕರಾವಳಿಯ ಜನರಿಗೆ ಕುಚ್ಚಲಕ್ಕಿಯ ಊಟ ಅಂದ್ರೆ ಪಂಚಪ್ರಾಣ
• ಆರೋಗ್ಯ ವೃದ್ಧಿಗೂ ಸೈ… ರುಚಿಗೂ ಜೈ…!

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಜನರಿಗೆ ಕುಚಲಕ್ಕಿಯ ಊಟ ಅಂದ್ರೆ ಪಂಚಪ್ರಾಣ. ಕುಚ್ಚಲಕ್ಕಿಯ ಬಿಸಿ ಬಿಸಿ ಗಂಜಿಯ ಜೊತೆ ಕುಡು ಚಟ್ನ (ಹುರುಳಿ) ಇದ್ದರೆ ಅದೇ ಕರಾವಳಿಗರಿಗೆ ಪರಮಾನ್ನ. ಕರಾವಳಿಯಲ್ಲೂ ಅಧುನಿಕತೆ ಹಾಸು ಹೊಕ್ಕಂತೆ ಅನೇಕ ಕುಟುಂಬಗಳು ಬೆಳಗ್ಗಿನ ಚಹದ ಜೊತೆ ಉಪಾಹಾರ ಸವಿದರೂ, ಕರಾವಳಿಯ ಹಳ್ಳಿ ಮನೆಗಳಲ್ಲಿ ಬೆಳಗ್ಗೆ ಉಪಹಾರ ಬದಲು ಕುಚ್ಚಲಕ್ಕಿಯ ಗಂಜಿ, ತಂಗಳನ್ನ ಸೇವಿಸುವ ಪದ್ಧತಿ ಇನ್ನೂ ಮುಂದುವರಿದಿದೆ.

ಕುಚ್ಚಲಕ್ಕಿ ಗಂಜಿ ಸೇವಿದರೆ ದೇಹಕ್ಕೆ ತ್ರಾಣ ನೀಡುತ್ತದೆ, ಮನಸ್ಸು, ದೇಹ ಉಲ್ಲಾಸಮಯವಾಗಿದ್ದು ದಿನದ ಕೆಲಸವೂ ಸರಾಗವಾಗಿ ಸಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ತುಳುನಾಡಿನಲ್ಲಿ ಉರ್ಪೆಲ್ ಅರಿ ಎಂದೇ ಜನಜನಿತವಾಗಿವ ಇದನ್ನು ಉರ್ಪೆಲ್, ಉರ್ಪೆಲರಿ ಎಂದೇ ಕರೆಯುತ್ತಾರೆ. ಬಾರ್ ನ್ ಬೆಯಿಪಾದ್
ಉಣಗಾದ್ (ನುಂಗಾದ್) ಉಚ್ಚೇರ್‌ಡ್ ಎಡ್‌ದ್ ಮತ್ತೆ’ದಿನ ಅರಿ ಅಂದರೆ ಭತ್ತವನ್ನು ಬೇಯಿಸಿ ಒಣಗಿಸಿ ಒನಕೆಯಲ್ಲಿ ಕುಟ್ಟಿ ಮಾಡುವ ಕೆಂಪು ಬಣ್ಣದ ಅರಿ, ಕಜೆ ಅರಿ ಎಂದೇ ಕರೆಯುತ್ತಾರೆ. ಉರ್ಪೆಲರಿತ ನುಪ್ಪು ಜೀವೊಗು ಎಡ್ಡೆ, ತಂಪು!” (ಕುಚ್ಚಲಕ್ಕಿಯ ಊಟ ಜೀವಕ್ಕೆ ತಂಪು) ಎಂಬ ತುಳುವರ ಈ ನುಡಿಗಟ್ಟಿನಂತೆ ಕುಚ್ಚಲಕ್ಕಿ ಆರೋಗ್ಯಕ್ಕೂ ಅಷ್ಟೇ ಉತ್ತಮ. ಮೂರು ಹೊತ್ತು ಕುಚ್ಚಲಕ್ಕಿ ಅನ್ನ, ತಂಳನ, ಗಂಜಿ ಇದು ತುಳುನಾಡಿನ ಆಹಾರ ಸಂಸ್ಕೃತಿಯಲ್ಲಿ ಅಗ್ರಸ್ಥಾನದಲ್ಲಿರುವ ಕುಚ್ಚಲಕ್ಕಿಗೆ ದೇವತಾ ಕಾರ್ಯದಲ್ಲಿಯೂ ವಿಶೇಷ ಸ್ಥಾನಮಾನವಿದೆ. ಭೂತಾರಾಧನೆಯಲ್ಲಿ ಬರುವ ಅಗೆಲ್‌ಗೆ ‌ ಕುಚ್ಚಲಕ್ಕಿ ಅನ್ನಕ್ಕೆ (ಉರ್ಪೆಲರಿತ ನುಪ್ಪು) ಪ್ರಾಧಾನ್ಯತೆ. ಇಷ್ಟು ಮಾತ್ರವಲ್ಲ ಕರಾವಳಿಯ ಅನೇಕ ಶುಭ ಕಾರ್ಯಗಳಲ್ಲೂ ಕುಚಲಕ್ಕಿಯನ್ನೇ ಬಳಸಲಾಗುತ್ತದೆ. ಮುಗುಲರಿ (ಮೆತ್ತಗಾಗುವವರೆಗೆ ಬೆಂದ ಅನ್ನ) ತಿನ್ನುವವರು ರಟ್ಟೆ (ತೋಳಿನಲ್ಲಿ)ಯಲ್ಲಿ ಬಲ ಇದ್ದವರು ಅಂದರೆ ಯುವಕರಾದರೇ, ವಯೋವೃದ್ಧರು, ಮಕ್ಕಳಿಗೆ ಖಾಯಿಲೆಗೆ ತುತ್ತಾದವರು ಮೆತ್ತಗೆ
ಬೇಯಿಸಿದ ಕುಚ್ಚಲಕ್ಕಿ ಗಂಜಿಯನ್ನು ನೆಚ್ಚಿಕೊಳ್ಳುತ್ತಾರೆ.

ಎಲ್ಲಾ ಆಹಾರಕ್ಕೂ ಸೈ.. ರುಚಿಗೂ ಸೈ….!

ಹಳೆಯ ಸಂಪ್ರಾದಾಯದಂತೆ ಗದ್ದೆಯಲ್ಲಿ ಉತ್ತಿ-ಬೆಳೆದು ಒನಕೆಯಲ್ಲಿ ಕುಟ್ಟಿ ಮಾಡಿದ ಅಕ್ಕಿ ಮಣಿನ ಮಡಿಕೆಯಲಿ ಬೇಯಿಸಿದ ಕುಚಲಕ್ಕಿಯ ಅನ್ನ / ಗಂಜಿಗೆ ವಿಶೇಷ ಘಮಲು ಒಂದೆಡೆಯಾದರೆ ಅದರೆ ಸವಿಯನ್ನು ಉಂಡವನೇ ಬಲ್ಲ. ಅಷ್ಟು ರುಚಿಕರ ಆರೋಗ್ಯಕರ. ತರಕಾರಿ ಅಥವಾ ಮಾಂಸಹಾರವೇ ಇರಲಿ ಕುಚಲಕ್ಕಿಯ ಊಟ ಎಲ್ಲದಕ್ಕೂ ನೆಚ್ಚಿಕೊಳ್ಳುತ್ತದೆ.

ಕುಸಬಲಕ್ಕಿ ಪೌಷ್ಟಿಕಾಂಶಗಳ ಆಗರ

ಕುಚ್ಚಲಕ್ಕಿ ಕೇವಲ ಅನ್ನಕ್ಕಾಗಿ ಬಳಸದೇ ಅಡೈಗ್, ಅಂದರೆ ವಿವಿಧ ರೀತಿಯ ಅಡಿಗೆಗೂ ಬಳಸಿಕೊಳ್ಳಲಾಗುತ್ತದೆ. ರೊಟ್ಟಿ, ಪುಂಡಿ, ಒತ್ತುಶ್ಯಾವಿಗೆ, ಗಟ್ಟಿ, ದೋಸೆ, ಲಡ್ಡು ಹೀಗೆ ಹಲವು ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಇನ್ನು ಕುಸಬಲಕ್ಕಿ ಪೌಷ್ಟಿಕಾಂಶಗಳ ಆಗರ. ಕುಚ್ಚಲಕ್ಕಿಯ ಗಂಜಿನೀರು ನಮ್ಮ ದೇಹಕ್ಕೆ ಎನರ್ಜಿ ಡ್ರಿಂಕ್‌ನಂತೆ ಶಕ್ತಿ ಒದಗಿಸುವ ಜೊತೆಗೆ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ನೀಡುತ್ತದೆ. ಮಾತ್ರವಲ್ಲದೇ ದೇಹಕ್ಕೆ ಅತ್ಯಗತ್ಯವಾದ ಖನಿಜಾಂಶ ಗಳಾದ ಮ್ಯಾಂಗನೀಸ್, ಐರನ್, ಝಿಂಕ್, ಫಾಸ್ಪರಸ್, ಕ್ಯಾಲ್ಸಿಯಂ, ಸೆಲೆನಿಯಮ್, ಮೆಗ್ನೆಷಿಯಂ ಹಾಗೂ ಪೊಟ್ಯಾಷಿಂ ಇದರಲ್ಲಿವೆ. ವಿಟಮಿನ್ 21, 22, 23, 26 ಕುಚ್ಚಲಕ್ಕಿಯಲ್ಲಿವೆ. ಇದು ಪ್ರೋಟೀನ್, ಫೈಬರ್ ಹಾಗೂ ಫ್ಯಾಟಿ ಆಸಿಡ್‌ಗಳ ಆಗರವೂ ಆಗಿದೆ.

ಕುಚ್ಚಲಕ್ಕಿ ಶೇಖರಣೆಯೇ ಒಂದೊಳ್ಳೆ ವಿದ್ಯೆ!

ಪ್ಲಾಸ್ಟಿಕ್ ಬ್ಯಾಗ್ ಗಳು, ಗೋಣೀಚೀಲಗಳ ಅವಿಷ್ಕಾರವಾಗುವ ಮೊದಲು ಕುಚ್ಚಲಕ್ಕಿಯನ್ನು ಅಕ್ಕಿಮುಡಿ(ಅರಿತ್ತ ಮುಡಿ)ಯಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ (ಮೂರು ಕಳಸೆ) ಹಾಳಾಗಾದಂತೆ ಶೇಖರಿಸಲಾಗುತ್ತಿತ್ತು. ಇದು ಬೈಹುಲ್ಲಿನಲ್ಲಿ ಕಟ್ಟುವ ವಿಶಿಷ್ಟ ಕಲೆ ಹಾಗೂ ಪರಿಸರ ಸ್ನೇಹಿ ವಿಧಾನ. ಈ ವಿದ್ಯೆ ತಿಳಿದಿರುವವರು ಈಗ ಬಲು ಅಪರೂಪ. ಇಂದಿಗೂ ತುಳುನಾಡಿನ ಮನೆಗಳಲ್ಲಿ ಗೃಹಪ್ರವೇಶದ ಸಂದರ್ಭ ಅಕ್ಕಿಮುಡಿಯನ್ನು ಮನೆಯೊಳಗೆ ಒಯ್ಯುವ ಸಂಪ್ರದಾಯವಿದೆ. ಕುಚ್ಚಲಕ್ಕಿಯ ಭತ್ತವನ್ನು ಸಿರಿತುಪ್ಪ ಎಂದು ಕರೆಯುವ ಕಣಜದಲ್ಲಿ ಸಂಗ್ರಹಿಸಿಡುತ್ತಿದ್ದರು. ಆದರೆ ಆಧುನಿಕತೆಯ ಭರಾಟೆಯಲ್ಲಿ ಈ ಸಂಸ್ಕೃತಿಗಳೆಲ್ಲವೂ ‌ ಅಳಿವಿಂಚಿ ನಲ್ಲಿದೆ ಎಂಬುವುದು ವಿಪರ್ಯಾಸ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.