Categories
ತೀರ್ಥಹಳ್ಳಿ

ಮಹಿಷಿ ಮಠದಲ್ಲಿ ರಾತ್ರಿ ದರೋಡೆ..!

ಮಹಿಷಿ ಮಠದಲ್ಲಿ ರಾತ್ರಿ ದರೋಡೆ..!
– 15ಕ್ಕೂ ಹೆಚ್ಚು ಮುಸುಕುಧಾರಿಗಳಿಂದ ಅರ್ಚಕರಿಗೆ ಬೆದರಿಸಿ ಕಳ್ಳತನ 
– 70 ಸಾವಿರ ಹಣ ದೋಚಿ ಪರಾರಿ: ಸಿಸಿಟಿವಿ ಕೂಡ ಕಳ್ಳತನ!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಮಹಿಷಿ ಉತ್ತರಾಧಿಮಠದ ಶಾಖೆಯಲ್ಲಿ ಶನಿವಾರ ರಾತ್ರಿ ದರೋಡೆ ಕೋರರು ದರೋಡೆ ಮಾಡಿರುವ ಘಟನೆ ನಡೆದಿದೆ.
15ಕ್ಕೂ ಹೆಚ್ಚು ಮಂದಿ ಮಾರಕಾಸ್ತ್ರ ತೋರಿಸಿ ಬೆದರಿಸಿ 70 ಸಾವಿರ ಕ್ಕೂ ಹೆಚ್ಚು ಹಣವನ್ನು ದರೋಡೆ ಮಾಡಿ ಪರಾರಿ ಆಗಿದ್ದಾರೆ. ಮುಸುಕುಧಾರಿಗಳು ಅರ್ಚಕರಿಗೆ ಬೆದರಿಸಿ ದರೋಡೆ ಮಾಡಿದ್ದಾರೆ. ಮಾಳೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಿಸಿಟಿವಿ ಕೂಡ ಕಳ್ಳತನ!
ಮಠಕ್ಕೆ ಅಳವಡಿಸಿದ್ದ ಸಿಸಿಟಿವಿ ಕೂಡ ಕಳ್ಳತನ ಆಗಿದೆ. ಕಳ್ಳರು ಹಣ ದೋಚುವಾಗ ಮಠಕ್ಕೆ ಹಾಕಿದ್ದ ಸಿಸಿಟಿವಿ, ಡಿವಿ ಆರ್ ಕೂಡ ಕಳ್ಳತನ ಮಾಡಿದ್ದಾರೆ. ಮಾಳೂರು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು ಸ್ಥಳಕ್ಕೆ ಶಿವಮೊಗ್ಗ ಎಸ್ಪಿ ಕೂಡ ಭೇಟಿ ನೀಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.