Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಮಹಿಳೆ ಬಲಿ ಪಡೆದ ಕ್ಯಾಂಡಲ್!
– ಕುಂದಾಪುರ: ಬೆಂಕಿ, ಚಿಕಿತ್ಸೆ ಫಲಕಾರಿಯಾಗದೆ ಸಾವು
– ಬೆಳ್ತಂಗಡಿ: ಹೆದ್ದಾರಿ ಕಾಮಗಾರಿಯ ಟಿಪ್ಪರ್ ಪಲ್ಟಿ
– ಮಂಗಳೂರು: ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ
– ಮಂಗಳೂರು: ಗುಂಡು ಹಾರಿಸಿಕೊಂಡು ಆತ್ಮಹತ್ಯೆ

NAMMUR EXPRESS NEWS
ಕುಂದಾಪುರ: ಬೆಂಕಿ ಆಕಸ್ಮಿಕದಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಮೊಂತಿ ಪಿರೇರಾ(76) ಎಂದು ಗುರುತಿಸಲಾಗಿದೆ. ಅ.8ರಂದು ರಾತ್ರಿ ಮನೆಯಲ್ಲಿ ಕರೆಂಟ್ ಹೋದ ಕಾರಣ ಮೇಣದ ಬತ್ತಿ ಹಚ್ಚಿ ಟೇಬಲ್ ಮೇಲಿಟ್ಟು ಮೊಂತಿ ಪಿರೇರಾ ಊಟ ಮಾಡುತ್ತಿದ್ದರು. ಈ ವೇಳೆ ಮೇಣದ ಬತ್ತಿಯು ಆಕಸ್ಮಿಕವಾಗಿ ಮೈಮೇಲೆ ಬಿದ್ದು ಮೊಂತಿ ಪಿರೇರಾ ಧರಿಸಿದ ನೈಟಿಗೆ `ಬೆಂಕಿ ತಗುಲಿ ಸುಟ್ಟ ಗಾಯವಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಇವರು, ಅ.22ರಂದು ನಸುಕಿನ ವೇಳೆ ಮಂಗಳೂರು ವೆಬ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಟಿಪ್ಪರ್ ಪಲ್ಟಿ

ಬೆಳ್ತಂಗಡಿ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಸೋಮಂತಡ್ಕದ ಅರಣ್ಯ ಇಲಾಖೆಯ ವಸತಿಗೃಹಗಳ ಸಮೀಪ, ರಸ್ತೆ ಬದಿ ಟಿಪ್ಪರ್ ವಾಹನ ರವಿಚಾರ ಹಳ್ಳಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು ಈ ವೇಳೆ ಮಣ್ಣು ಸಾಗಾಟ ನಡೆಸುತ್ತಿದ್ದ ಟಿಪ್ಪರ್, ಮಣ್ಣನ್ನು ರಸ್ತೆ ಬದಿ ಸುರಿಯುತ್ತಿದ್ದಾಗ ಮಣ್ಣು ಒಂದೇ ಬದಿಗೆ ಸರಿದ ಕಾರಣ ರಸ್ತೆ ಬದಿಯ ಚರಂಡಿಗೆ ಜಾರಿ ಪಲ್ಟಿಯಾಯಿತು. ಬಳಿಕ ಕ್ರೇನ್ ಮೂಲಕ ವಾಹನವನ್ನು ಸ್ಥಳಾಂತರಿಸಲಾಯಿತು.

ಮಂಗಳೂರು: ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ

ಮಂಗಳೂರು : ದುಬೈನಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಶನಿವಾರ ವಶಪಡಿಸಿಕೊಂಡಿದ್ದಾರೆ. ದುಬೈನಿಂದ ಇಂಡಿಗೋ ವಿಮಾನದಲ್ಲಿ ಬಂದಿದ್ದ ಪ್ರಯಾಣಿಕನಿಂದ 6,47,350 ರೂ. ಮೌಲ್ಯದ 107 ಗ್ರಾಂ ಪೇಸ್ಟ್ ರೂಪದ ಚಿನ್ನವನ್ನು ಡಬಲ್ ಲೇಯರ್ ಬಿಸ್ಕಿಟ್‌ಗಳ ಒಳಗೆ ಮತ್ತು ಚಾಕಲೇಟ್ ತುಂಬಿಸಿದ್ದ ರಟ್ಟಿನ ಬಾಕ್‌ಸ್‌ನ ಪದರಗಳ ಒಳಗಿಟ್ಟು ಸಾಗಿಸುತ್ತಿದ್ದ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣು

ಮಂಗಳೂರು : ಪಣಂಬೂರು ಎನ್.ಎಂ.ಪಿ.ಎ ಬಂದರಿನಲ್ಲಿ ಭದ್ರತೆ ನೋಡಿಕೊಳ್ಳುವ ಸಿಐಎಸ್ ಎಫ್ ವಿಭಾಗದಲ್ಲಿ ಪಿಎಸ್ ಐ ಆಗಿದ್ದ ಜಾಕೀರ್ ಹುಸೇನ್ (58) ತನ್ನ ಸರ್ವಿಸ್ ರಿವಾಲ್ವರ್ ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಾಕೀರ್ ಹುಸೇನ್ ಮೂಲತಃ ರಾಯಚೂರು ಜಿಲ್ಲೆಯ ನಿವಾಸಿಯಾಗಿದ್ದು, ಎನ್ ಎಂಪಿಟಿ ಮೈನ್ ಗೇಟ್ ನಲ್ಲಿ ನೈಟ್ ಶಿಫ್ಟ್ ನಲ್ಲಿ ನಿಯೋಜಿತರಾಗಿದ್ದರು. ಬೆಳಗ್ಗೆ 6.30ಕ್ಕೆ ತನ್ನ ನೈಟ್ ಶಿಫ್ಟ್ ಮುಗಿಸಿ ಬೇರೊಬ್ಬರಿಗೆ ಕೆಲಸ ವಹಿಸಿ ವಾಶ್ ರೂಮ್ ತೆರಳಿದ್ದರು.ಅಲ್ಲಿ ಇರುವಾಗಲೇ ತನ್ನ ಸರ್ವಿಸ್ ರಿವಾಲ್ವರ್ ನಲ್ಲಿ ತಲೆಗೆ ಗುರಿ ಇರಿಸಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಣಂಬೂರು ಠಾಣೆಯಲ್ಲಿ ಕೇಸು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.