ಹುಲಿವೇಷ ಸ್ಪರ್ಧೆಗೆ ಕ್ಷಣಗಣನೆ..!
– ಅ.24 ರಂದು ರಾತ್ರಿ 8 ಗಂಟೆಗೆ ಹುಲಿ ವೇಷ ಸ್ಪರ್ಧೆ
– ಆರ್. ಮದನ್ ಗೌಡ ಅವರ ಪ್ರಾಯೋಜಕತ್ವ ಕಾರ್ಯಕ್ರಮ
NAMMUR EXPRESS NEWS
ತೀರ್ಥಹಳ್ಳಿ: ವಿಜಯದಶಮಿಯ ರಾತ್ರಿ ತೀರ್ಥಹಳ್ಳಿ, ಕುಶಾವತಿ ಪಾರ್ಕಿನಲ್ಲಿ ತೀರ್ಥಹಳ್ಳಿಯ ಪ್ರಸಿದ್ಧ ಯುವ ನಾಯಕ ಆರ್. ಮದನ್ ಅವರ ನೇತೃತ್ವದಲ್ಲಿ ಆರ್. ಮದನ್ ಅಭಿಮಾನಿ ಬಳಗ ಹಾಗೂ ದಸರಾ ಸಮಿತಿ ವತಿಯಿಂದ ಹುಲಿ ವೇಷ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ. ಈ ಸ್ಪರ್ಧೆ ಈಗಾಗಲೇ ಕಳೆದ ದಶಕಗಳಿಂದ ನಡೆದುಕೊಂಡು ಬಂದಿದ್ದು, ಅತ್ಯುತ್ತಮ ಆಯೋಜನೆ ಮಾಡಲಾಗುತ್ತಿದೆ. ಇಲ್ಲಿ ಹುಲಿ ವೇಷ ಸ್ಪರ್ಧೆಯಲ್ಲಿ ವಿವಿಧ ಹುಲಿ ವೇಷಧಾರಿಗಳು ತಮ್ಮ ಅತ್ಯದ್ಭುತ ಪ್ರತಿಭೆಯನ್ನು ಪ್ರದರ್ಶನ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸರ್ವರನ್ನು ಮದನ್ ಅವರು ಸ್ವಾಗತಿಸಿದ್ದಾರೆ. ಸರ್ವರನ್ನು ಸ್ವಾಗತಿಸಲಾಗಿದೆ ಹಾಗೂ ಹುಲಿವೇಷಧಾರಿಗಳಿಗೆ ವಿಶೇಷವಾದ ಬಹುಮಾನಗಳನ್ನು ನೀಡಲಾಗುತ್ತಿದೆ.
ದಿನಾಂಕ ಮತ್ತು ಸ್ಥಳ
ದಿನಾಂಕ :24-10-2023. ರಾತ್ರಿ 8-00 ಗಂಟೆಗೆ
ಸ್ಥಳ : ನೆಹರೂ ಉದ್ಯಾನವನ, ಕುಶಾವತಿ, ತೀರ್ಥಹಳ್ಳಿ
ಬಹುಮಾನ ಮತ್ತು ಪ್ರೋತ್ಸಾಹ ಧನ
ಪ್ರಥಮ ಬಹುಮಾನ : ನಗದು 20,000/-
ದ್ವಿತೀಯ ಬಹುಮಾನ:12,500/-
ತೃತಿಯ ಬಹುಮಾನ :7,500/-
ವೇಷ ಹಾಕುವ ಪ್ರತಿಯೊಬ್ಬ ಕಲಾವಿದರಿಗೂ ತಲಾ ರೂ 5000/- ಪ್ರೋತ್ಸಾಹ
ಮೊದಲ 10 ಮಂದಿ ಹುಲಿ ವೇಷಧಾರಿಗಳಿಗೆ ಬಣ್ಣದ ಸಂಪೂರ್ಣ ಖರ್ಚು ನೀಡಲಾಗುವುದು
ಹುಲಿವೇಷದ ತಾಸ ವಾದ್ಯದವರಿಗೆ ಪ್ರತಿಯೊಬ್ಬರಿಗೂ ರೂ 1000/- ಪ್ರೋತ್ಸಾಹ ಧನ ನೀಡಲಾಗುವುದು.
ಅಕ್ಟೋಬರ್ 24ರಂದು ಸಂಜೆ 7-50 ಗಂಟೆಗೆ ಕಡ್ಡಾಯವಾಗಿ ಸ್ಪರ್ಧಾ ಸ್ಥಳದಲ್ಲಿ ಹಾಜರಿರಬೇಕು.
ಸಮಸ್ತ ಜನತೆಗೆ ಸುಸ್ವಾಗತ ಹಾಗೂ ದಸರಾ ಶುಭಾಶಯಗಳು
ಅರ್. ಮದನ್, ಯುವ ಉದ್ಯಮಿ, ನಾಯಕರು
ತೀರ್ಥಹಳ್ಳಿ