Categories
ಕರಾವಳಿ

ವಿಷಾನಿಲ ಸೋರಿಕೆ: ಇಬ್ಬರ ದುರ್ಮರಣ

ಟಾಪ್ ನ್ಯೂಸ್ ಕರಾವಳಿ

ವಿಷಾನಿಲ ಸೋರಿಕೆ: ಇಬ್ಬರ ದುರ್ಮರಣ
– ಕಾಡಿನ ಗುಹೆಯೊಂದರಲ್ಲಿದ್ದ ರಷ್ಯಾದ ಮಹಿಳೆ ಮತ್ತು ಮಕ್ಕಳ ರಕ್ಷಣೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಸುರತ್ಕಲ್: ತೈಲ ಶುದ್ಧೀಕರಣ ಘಟಕದ ಆಯಿಲ್ ಮೂವ್ ಮೆಂಟ್ ವಿಭಾಗದಲ್ಲಿ ಸಮಸ್ಯೆ ಕಂಡುಬಂದಿದ್ದನ್ನು ಪರಿಶೀಲಿಸಲು ಅದರ ಸಿಬ್ಬಂದಿಗಳಾದ ದೀಪ ಚಂದ್ರ ಭಾರ್ತಿಯಾ ಮತ್ತು ಬಿಜಿಲ್ ಪ್ರಸಾದ್ ಎನ್ನುವವರು ಟ್ಯಾಂಕ್ ನ ಮೇಲ್ಛಾವಣಿಗೆ ಹೋದ ಸಂದರ್ಭದಲ್ಲಿ ವಿಷಾನಿಲ ಸೋರಿಕೆಯಾಗಿ ಇಬ್ಬರೂ ದುರಂತಕ್ಕೀಡಾಗಿದ್ದಾರೆ. ಭಾರ್ತಿಯ ಮತ್ತು ಬಿಜಿಲ್ ಮೊದಲಿಗೆ ಸ್ಥಳದಲ್ಲೇ ಉಸಿರಾಟದ ಸಮಸ್ಯೆಯಿಂದ ಅಸ್ವಸ್ಥಗೊಂಡರು. ಕೂಡಲೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ ವಿಷಾನಿಲದ ಪರಿಣಾಮವಾಗಿ ಇಬ್ಬರೂ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಸುರತ್ಕಲ್ ನ ಎಂ. ಆರ್. ಪಿ. ಎಲ್ ನಲ್ಲಿ ಈ ದುರಂತ ಸಂಭವಿಸಿದೆ.

ಕಾಡಿನ ಗುಹೆಯೊಂದರಲ್ಲಿದ್ದ ರಷ್ಯಾದ ಮಹಿಳೆ ಮತ್ತು ಮಕ್ಕಳ ರಕ್ಷಣೆ

ಗೋಕರ್ಣ: ರಷ್ಯಾ ಮೂಲದ ನೀನಾ ಕುಟೀನ ಎಂಬ ನಲವತ್ತು ವರ್ಷದ ಮಹಿಳೆ ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿ ಹೊಂದಿದ್ದು, ಭಾರತದಲ್ಲಿ ನೆಲೆಸಲು ತನ್ನ ಇಬ್ಬರು ಮಕ್ಕಳೊಂದಿಗೆ ಆಗಮಿಸಿ, ಗೋಕರ್ಣದ ರಾಮತೀರ್ಥ ಎಂಬ ಗುಡ್ಡದ ಮೇಲಿನ ಕಾಡಿನ ಗುಹೆಯೊಂದರಲ್ಲಿ ವಾಸವಾಗಿದ್ದರು. ಪ್ರವಾಸಿಗಳ ರಕ್ಷಣೆಯ ವಿಚಾರವಾಗಿ ಪೊಲೀಸರು ತಿರುಗಾಡುತ್ತಿದ್ದಾಗ , ಗುಡ್ಡದ ಮೇಲೆ ಯಾರೋ ಅಪರಿಚಿತರು ಇರುವಂತೆ ಸಂಶಯಗೊಂಡು ಹೋಗಿ ನೋಡಿದಾಗ, ನೀನಾ ಕುಟೀನಾ ತನ್ನ ಆರು ವರ್ಷದ ಮಗಳು ಪ್ರೇಮಾ ಮತ್ತು ನಾಲ್ಕು ವರ್ಷದ ಅಮಾ ಜೊತೆ ಗುಹೆಯೊಂದರಲ್ಲಿ ‌ನೆಲೆಸಿರುವುದು ಶನಿವಾರ ಬೆಳಕಿಗೆ ಬಂದಿದೆ. ನೀನಾ ಕುಟೀನ ಮತ್ತು ಆಕೆಯ ಮಕ್ಕಳ ವೀಸಾ ಹಾಗೂ ಪಾಸ್ ಪೋರ್ಟ್ ನ ಅವಧಿ 2017ರಲ್ಲೇ ಮುಗಿದಿರುವುದು ಪೊಲೀಸರ ಗಮನಕ್ಕೆ ಬಂದಿದೆ. ನೀನಾಳಿಗೆ ಮನದಟ್ಟು ಮಾಡಿಸಿ, ಹಾವು ಮತ್ತು ವಿಷ ಜಂತುಗಳೇ ಅಧಿಕವಾಗಿರುವ ಆ ಜಾಗದಿಂದ ಆಕೆಯ ಮಕ್ಕಳೊಂದಿಗೆ ರಕ್ಷಿಸಿ ಸ್ಥಳಾಂತರಿಸಲಾಗಿದೆ.‌ ಸಧ್ಯಕ್ಕೆ ನೀನಾ ಕುಟೀನ ಮತ್ತು ಆಕೆಯ ಮಕ್ಕಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹಿಳಾ ಸ್ವೀಕಾರ ಕೇಂದ್ರದಲ್ಲಿ ಇದ್ದು, ಹದಿನಾಲ್ಕರ ಸೋಮವಾರದಂದು ಮಹಿಳಾ ಪೊಲೀಸ್ ಅಧಿಕಾರಿಗಳ ರಕ್ಷಣೆಯಲ್ಲಿ ಬೆಂಗಳೂರಿನ ಎಫ್ ಆರ್ ಆರ್ ಒ ಕಛೇರಿಗೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.