Categories
ತೀರ್ಥಹಳ್ಳಿ

ಹರಿಯಾಣದಲ್ಲಿ ಗಮನ ಸೆಳೆದ ಅಸಾದಿ ಭಾಷಣ!

ಹರಿಯಾಣದಲ್ಲಿ ಗಮನ ಸೆಳೆದ ಅಸಾದಿ ಭಾಷಣ!
– ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಸಾಧನೆಯನ್ನು ರಾಷ್ಟ್ರೀಯ ಮಟ್ಟದ ಸಭೆಯಲ್ಲಿ ಮಂಡಿಸಿದ ಅಸಾದಿ
– ಲೋಕಸಭೆ ಸ್ಪೀಕರ್ ಶ್ರೀ ಓಂ ಬಿರ್ಲಾ, ಹರಿಯಾಣ ವಿಧಾನ ಸಭೆ ಸ್ಪೀಕರ್ ಜೊತೆಯಲ್ಲಿ ರೆಹಮತ್ ಉಲ್ಲಾ ಅಸಾದಿ

NAMMUR EXPRESS NEWS
ತೀರ್ಥಹಳ್ಳಿ: ಜುಲೈ 3 ಮತ್ತು 4ರಂದು ಹರಿಯಾಣ ರಾಜ್ಯದ ಗುರ್‌ಗಾವ್‌ನಲ್ಲಿ ಅಖಿಲ ಭಾರತ ಮಟ್ಟದ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದ್ದು
ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರೆಹಮತ್ ಉಲ್ಲಾ ಅಸಾದಿ ಗಮನ ಸೆಳೆದಿದ್ದಾರೆ.
21ನೇ ಶತಮಾನದಲ್ಲಿ ವಿಕಸಿತ ಭಾರತ 2047 ಆಗಲು ನಗರ ಸ್ಥಳೀಯ ಸಂಸ್ಥೆಗಳು ವಸ್ತು ವಾಸ್ತುಶಿಲ್ಪಿಯಂತೆ ಪ್ರಮುಖ ಪಾತ್ರವಹಿಸಿ ಸಹಾಯ ಮಾಡುವ ಬಗ್ಗೆ ಗೋಷ್ಠಿಯ ಈ ಸಮ್ಮೇಳನದಲ್ಲಿ ದೇಶದ ವಿವಿಧ ಭಾಗಗಳಿಂದ ಸ್ಥಳೀಯ ಸಂಸ್ಥೆಯ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು. ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಹರಿಯಾಣ ವಿಧಾನ ಸಭೆಯ ಸಭಾಪತಿಗಳು, ಉಪಸಭಾಪತಿಗಳು ಪಾಲ್ಗೊಂಡಿದ್ದರು. ಸಮ್ಮೇಳನದಲ್ಲಿ 700ಕ್ಕೂ ಅಧಿಕ ಚುನಾಯಿತ ಪ್ರತಿನಿಧಿಗಳ ಪೈಕಿ 15 ಮಂದಿಗೆ ತಮ್ಮ ಅಭಿಪ್ರಾಯ ಗಳನ್ನು ಮಂಡಿಸಲು ಅವಕಾಶ ಕಲ್ಪಿಸಲಾಗಿತ್ತು. ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ ರೆಹಮತ್ ಉಲ್ಲಾ ಅಸಾದಿ ಅವರಿಗೂ ಓಂ ಬಿರ್ಲಾರ ಸಮ್ಮುಖದಲ್ಲಿ ನಗರಾಡಳಿತ ಸಂಸ್ಥೆಗಳ ಸಮಸ್ಯೆ, ಆಗಬೇಕಾದ ಸುಧಾರಣೆಗಳ ಕುರಿತು ಮಾತನಾಡಲು ಅವಕಾಶ ಲಭಿಸಿತ್ತು. 10 ನಿಮಿಷ ಹಿಂದಿಯಲ್ಲಿ ತಮ್ಮ ವಿಚಾರಗಳನ್ನು ಅಸಾದಿ ಮಂಡಿಸಿದರು. ಅವರ ಮಾತುಗಾರಿಕೆ, ವಿಚಾರ ಪಕ್ವತೆ ಓಂ ಬಿರ್ಲಾ ಆದಿಯಾಗಿ ಸಮ್ಮೇಳನದಲ್ಲಿದ್ದವರ ಗಮನ ಸೆಳೆದು ಪ್ರಶಂಸೆಗೆ ಪಾತ್ರವಾಯಿತು. ಅಧಿಕಾರ ಷಾಹಿ ಮತ್ತು ರಾಜಕಾರಣಿಗಳ ಹಸ್ತಕ್ಷೇಪ,ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯ ಮೂಲ ಆಶಯಕ್ಕೆ ಧಕ್ಕೆ ತರುತ್ತಿದೆ. ಅನುದಾನಗಳ ಕೊರತೆಯಿಂದ ನಗರಾಡಳಿತ ಸಂಸ್ಥೆಗಳು ಸೊರಗುತ್ತಿವೆ. ನಗರಾಡಳಿತ ಸಂಸ್ಥೆಗಳು ಯಾವ ರೀತಿ ಸಂಪನ್ಮೂಲ ಕ್ರೋಢೀಕರಿಸಬಹುದು ಎಂಬ ಇತ್ಯಾದಿ ವಿಚಾರಗಳ ಕುರಿತು ಅಸಾದಿ ಪರಿಣಾಮಕಾರಿಯಾಗಿ ಮಾತನಾಡಿದರು. ಹರಿಯಾಣ ಹಿಂದಿನ ವಿಧಾನ ಸಭೆ ಹಾಗೂ ಈಗಿನ ವಿಧಾನ ಸಭೆಗಳಿಗೆ ಓಂ ಬಿರ್ಲಾರ ಜೊತೆಯಲ್ಲಿ ಚುನಾಯಿತ ಪ್ರತಿನಿಧಿಗಳು ಭೇಟಿ ನೀಡಿದರು.

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.