Categories
ಕರಾವಳಿ

ಉಡುಪಿ: ಯುವಕನ ಜೀವ ಬಲಿ ಪಡೆದ ಕುಡಿತ!

ಕರಾವಳಿ ನ್ಯೂಸ್: ಕರಾವಳಿಯ ಇನ್ನಷ್ಟು ವಿಶೇಷ ಸುದ್ದಿಗಳಿಗಾಗಿ ನಮ್ಮೂರ್ ಎಕ್ಸ್ ಪ್ರೆಸ್ ನೋಡ್ತಾ ಇರಿ..!

– ಉಡುಪಿ: ಯುವಕನ ಜೀವ ಬಲಿ ಪಡೆದ ಕುಡಿತ!
– ಮಂಗಳೂರು: ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ..?
– ಕುಂದಾಪುರ: ಬಿಯರ್ ಬಾಟಲಿಯಿಂದ ಹಲ್ಲೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ: ಯುವಕನ ಜೀವ ಬಲಿ ಪಡೆದ ಕುಡಿತ. ಹೌದು. ಕುಡಿತದ ಚಟಕ್ಕೆ ದಾಸನಾಗಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯ ನಿಟ್ಟೂರಿನಲ್ಲಿ ನಡೆದಿದೆ.
ನಿಟ್ಟೂರಿನ ದೀಕ್ಷಿತ್ ಎಂಬ ಇಪ್ಪತ್ತಾರು ವರ್ಷದ ಯುವಕ ಮದ್ಯವ್ಯಸನಕ್ಕೆ ಒಳಗಾಗಿ, ಆತ್ಮಹತ್ಯೆ ಮಾಡಿಕೊಂಡವನು. ಹತ್ತನೇ ತರಗತಿಯ ಬಳಿಕ ವಿದ್ಯಾಭ್ಯಾಸವನ್ನು ತೊರೆದು, ಪೇಂಟಿಂಗ್ ಕೆಲಸದಲ್ಲಿ ತೊಡಗಿಕೊಂಡಿದ್ದ ದೀಕ್ಷಿತ್ ಕಳೆದ ಮೂರು ವರ್ಷಗಳಿಂದ ಕುಡಿತದ ದಾಸನಾಗಿದ್ದ.‌ ಇತ್ತೀಚೆಗೆ ಕೆಲವು ನಾಲ್ಕು ತಿಂಗಳುಗಳಿಂದ ಈ ವ್ಯಸನವನ್ನು ಬಿಟ್ಟಿದ್ದರೂ ಸಹ ಪುನಃ ಚಟಕ್ಕೆ ಒಳಗಾಗಿದ್ದ. ಕುಡಿತದ ಅಮಲಿನಲ್ಲಿ ಮನೆಯಲ್ಲಿ ಪ್ರತಿದಿನ ಜಗಳವಾಡುತ್ತಿದ್ದ ಎನ್ನಲಾಗಿದೆ. ಅದೇ ರೀತಿ ರಾತ್ರಿಯ ವೇಳೆ ವಿನಾಕಾರಣ ಮನೆಯವರೊಂದಿಗೆ ಜಗಳ ಮಾಡಿಕೊಂಡು, ತನ್ನ ಕೋಣೆಗೆ ತೆರಳಿದ್ದಾನೆ.‌ಮಧ್ಯರಾತ್ರಿ ಒಂದು ಗಂಟೆಯ ಸುಮಾರಿಗೆ ಮನೆಯಿಂದ ಹೊರಬಂದ ದೀಕ್ಷಿತ್, ಮನೆಯ ಪಕ್ಕದಲ್ಲೇ ಇರುವ ಜಾಗದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸಂಗತಿ ತಿಳಿದು ಬಂದಿದೆ.

* ಮಂಗಳೂರು: ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ..?

ಮಂಗಳೂರು: ರಕ್ಷಣೆ ನೀಡುವ ಪೊಲೀಸ್ ಸಿಬ್ಬಂದಿಯೇ‌ ಮಹಿಳೆಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಕಾವೂರಿನಲ್ಲಿ ನಡೆದಿದೆ. “ಕಾವೂರಿನ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಚಂದ್ರ ನಾಯಕ ಎನ್ನುವವರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ” ಎಂದು ಮಹಿಳೆಯು ನೀಡಿದ ದೂರಿನ ಆಧಾರದ ಮೇಲೆ ಕಂಕನಾಡಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಚಂದ್ರನಾಯಕನ ಕುರಿತು ತನಿಖೆ ನಡೆಯುತ್ತಿದ್ದು, ಇನ್ನಷ್ಟೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟ ಮಾಹಿತಿ ದೊರೆಯಬೇಕಿದೆ.

ಕುಂದಾಪುರ: ಬಿಯರ್ ಬಾಟಲಿಯಿಂದ ಹಲ್ಲೆ

ಕುಂದಾಪುರ: ಮನೋಜ್ ಎಂಬ ವ್ಯಕ್ತಿಯು ಹಳೆಯ ದ್ವೇಷವನ್ನು ನೆನಪಿಸಿಕೊಂಡು, ಮಣೂರಿನ ಪಡುಕೆರೆಯ ನಿವಾಸಿಯಾದ ಭರತ್ ನ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ ಘಟನೆ ಕೋಟದ ತೆಕ್ಕಟೆಯಲ್ಲಿ ನಡೆದಿದೆ. ಮನೋಜನು ಭರತ್ ನ ಮನೆಗೆ ಬಂದು ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಬಿಯರ್ ಬಾಟಲಿಯ ಗಾಜಿನಿಂದ ಭರತ್ ನ ತಲೆಗೆ ಹೊಡೆದು ಘಾಸಿಗೊಳಿಸಿದ್ದಾನೆ. ಪ್ರಜ್ಞೆ ತಪ್ಪಿ ಬಿದ್ದ ಭರತ್ ನನ್ನು ಕೂಡಲೇ
ಕುಂದಾಪುರದ ಆಸ್ಪತ್ರೆಗೆ ಕರೆದುಯ್ದು, ಪ್ರಥಮ ಚಿಕಿತ್ಸೆ ಮಾಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು.‌ ಕೋಟ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.