Categories
ತೀರ್ಥಹಳ್ಳಿ

ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಬಿಜೆಪಿ ಕೈಗೆ ಬರುತ್ತಾ..?

ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಬಿಜೆಪಿ ಕೈಗೆ ಬರುತ್ತಾ..?
– ಕಾಂಗ್ರೆಸ್ ಸದಸ್ಯರ ನಡುವೆ ಭಿನ್ನಮತ ಬಿಜೆಪಿಗೆ ಲಾಭ ಆಗುತ್ತಾ?
– ತೀರ್ಥಹಳ್ಳಿ ಗದ್ದುಗೆ ಹಿಡಿಯಲು ಬೇಕು 1 ನಂಬರ್!
– ಜಯಪ್ರಕಾಶ್ ಶೆಟ್ಟಿ ಮನೆಗೆ ಆರಗ ಭೇಟಿ ಕುತೂಹಲ!?

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯತ್ ರಾಜಕೀಯ ದಿನದಿಂದ ದಿನಕ್ಕೆ ನಾಟಕೀಯ ತಿರುವು ಪಡೆದುಕೊಳ್ಳುತ್ತಿದೆ. ಒಂದು ಕಡೆ ಕಾಂಗ್ರೆಸ್ ಸದಸ್ಯರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಈ ನಡುವೆ ಕಾಂಗ್ರೆಸ್ ಸದಸ್ಯರು, ಕಾಂಗ್ರೆಸ್ ಹಿರಿಯ ಮುಖಂಡರು ಆದ ಜಯಪ್ರಕಾಶ್ ಶೆಟ್ಟಿ ಅವರ ಮನೆಗೆ ಶಾಸಕರಾದ ಆರಗ ಜ್ಞಾನೇಂದ್ರ ಭೇಟಿ ನೀಡಿರುವುದು ಹಲವು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಹಲವು ವರ್ಷಗಳ ಬಳಿಕ ಕಾಂಗ್ರೆಸ್ ಪಾಲಾಗಿತ್ತು. ಇದರಲ್ಲಿ ಕಿಮ್ಮನೆ ಮತ್ತು ಮಂಜುನಾಥ ಗೌಡರ ನಾಯಕತ್ವ ಹೊಸ ಅಧ್ಯಾಯ ಸೃಷ್ಟಿ ಮಾಡಿತ್ತು. ಇದೀಗ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಭಾರೀ ಕುತೂಹಲ ಮೂಡಿಸಿವೆ.

ತೀರ್ಥಹಳ್ಳಿ ಗದ್ದುಗೆ ಹಿಡಿಯಲು ಬೇಕು 1 ನಂಬರ್!

ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಲ್ಲಿ ಈಗ ಕಾಂಗ್ರೆಸ್ 9 ಸದಸ್ಯರನ್ನು ಹೊಂದಿದೆ. ಬಿಜೆಪಿ 6 ಸದಸ್ಯರ ಜತೆಗೆ ಶಾಸಕರು, ಸಂಸದರು ಸೇರಿ 8 ಸದಸ್ಯರಿದ್ದಾರೆ. ಇದೀಗ ಒಂದು ಸೀಟಿನ ಅವಶ್ಯಕತೆ ಇದೆ. ಹೀಗಾಗಿ ಬಿಜೆಪಿ ಕೂಡ ಈಗ ಪ್ಲಾನ್ ಮಾಡುತ್ತಿದೆ. ಇದಕ್ಕೆ ಪೂರಕವಾಗಿ ಇತ್ತೀಚಿಗೆ ಬೈಕ್ ಅಲ್ಲಿ ಬಿದ್ದು ವಿಶ್ರಾಂತಿ ಅಲ್ಲಿರುವ ಜಯಪ್ರಕಾಶ್ ಶೆಟ್ಟಿ ಅವರ ಮನೆಗೆ ಶಾಸಕರು ಭೇಟಿ ನೀಡಿರುವುದು ಹಲವು ಅನುಮಾನ ಸೃಷ್ಟಿ ಮಾಡಿದೆ. ಬಂಟ್ಸ್ ಸಮುದಾಯದ ಜಯಪ್ರಕಾಶ್ ಶೆಟ್ಟಿ ಅವರ ಮನೆ ಭೇಟಿ ವೇಳೆ ಶಾಸಕರ ಜತೆ ಬಿಜೆಪಿಯ ಟ್ರಬಲ್ ಶೂಟರ್ ಹಾಗೂ ಹಿರಿಯ ಸಹಕಾರಿ ನಾಗರಾಜ್ ಶೆಟ್ಟಿ ಇರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಏನೇ ಇರಲಿ, ಯಾರೇ ಆಡಳಿತ ಹಿಡಿಲಿಯಲಿ ತೀರ್ಥಹಳ್ಳಿ ಅಭಿವೃದ್ಧಿ ಮಾಡಲಿ… ಜನರಿಗೆ ಅನುಕೂಲ ಅಗಲಿ ಇದಷ್ಟೇ ನಮ್ಮ ಕಳಕಳಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.