ಕರಾವಳಿ ಟಾಪ್ ನ್ಯೂಸ್
ಉಡುಪಿ: ರೀಲ್ಸ್ ಚಟಕ್ಕೆ ಪತ್ನಿ ಕೊಂದ ಪತಿ!
ಕಾರ್ಕಳ: ವರ್ಕ್ ಫ್ರಮ್ ಹೋಮ್: ಹಣ ಕಳೆದುಕೊಂಡ ಯುವತಿ ಮಣಿಪಾಲ: ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆ ಹತ್ಯೆ?!
ಮಂಗಳೂರು: ಚಾಕಲೇಟ್ ರೂಪದಲ್ಲಿ ಗಾಂಜಾ ಮಾರಾಟ..!
ಉಡುಪಿ: ಬ್ರಹ್ಮಾವರ ತಾಲ್ಲೂಕಿನ ಹಿಲಿಯಾಣ ಗ್ರಾಮದ ರೇಖಾ ಎನ್ನುವವರು ತನ್ನ ಅತಿಯಾದ ಮೊಬೈಲ್ ಬಳಕೆಯ ಕಾರಣದಿಂದ ಪತಿಯ ಕೋಪಕ್ಕೆ ತುತ್ತಾಗಿ ಹತ್ಯೆಗೊಳಗಾಗಿದ್ದಾರೆ. ಪತಿ ಗಣೇಶ್ ಪೂಜಾರಿ ಪೈಂಟಿಂಗ್ ಕೆಲಸದಲ್ಲಿದ್ದು, ಕುಡಿತದ ದಾಸನಾಗಿದ್ದ. ರೇಖಾ ಮೊಬೈಲ್ ನಲ್ಲಿಯೇ ಹೆಚ್ಚು ಸಮಯ ಕಳೆಯುತ್ತಾಳೆ ಎಂದು ಪ್ರತಿದಿನ ಆಕೆಯೊಂದಿಗೆ ಜಗಳವಾಡುತ್ತಿದ್ದ. ಗಲಾಟೆ ಅದು ತಾರಕಕ್ಕೇರಿ, ಪತ್ನಿ ರೇಖಾಳನ್ನು ಕೊಲೆಗೈದಿದ್ದಾನೆ.ರೇಖಾ ಕುಟುಂಬದ ನಿರ್ವಹಣೆಗಾಗಿ ಪೆಟ್ರೋಲ್ ಬಂಕ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ವರ್ಕ್ ಫ್ರಮ್ ಹೋಮ್: ಹಣ ಕಳೆದುಕೊಂಡ ಯುವತಿ
ಕಾರ್ಕಳ: ತಾಲ್ಲೂಕಿನ ರೆಂಜಾಳ ನಿವಾಸಿ ಪಲ್ಲವಿ ವರ್ಕ್ ಫ್ರಮ್ ಹೋಮ್ ಹೆಸರಿನಲ್ಲಿ ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ. ಫೇಸ್ ಬುಕ್ ನಲ್ಲಿ ವರ್ಕ್ ಫ್ರಮ್ ಹೋಮ್ ಮಾಡಲು ಪ್ರಾರಂಭಿಸಿದ್ದ ಪಲ್ಲವಿ ಅವರಿಗೆ ಇಪ್ಪತ್ತು ಟಾಸ್ಕ್ ಗಳನ್ನು ನೀಡಿ, ಒಂದು ಟಾಸ್ಕ್ ಗೆ ಹತ್ತು ರೂಪಾಯಿ ನೀಡುವುದಾಗಿ, ಬಳಿಕ ಅದನ್ನು ದುಪ್ಪಟ್ಟು ಮಾಡುವುದಾಗಿ ಆಮಿಷ ಒಡ್ಡಿದ್ದರು. ಇದಕ್ಕೆ ಮೊದಲು ಇಂತಿಷ್ಟು ಹಣ ನೀಡಬೇಕೆಂದಿದ್ದರಿಂದ ಜೂನ್ ಹತ್ತರಿಂದ ಹದಿಮೂರರ ವರೆಗೆ ತಮ್ಮ ಕೆನರಾ ಬ್ಯಾಂಕ್ ಖಾತೆಯಿಂದ ಹಂತಹಂತವಾಗಿ ಹಣವನ್ನು ವರ್ಗಾಯಿಸುತ್ತಾ ಹೋಗಿ 95.000 ದಷ್ಟು ಹಣವನ್ನು ವರ್ಗಾಯಿಸಿ ವಂಚನೆಗೆ ಒಳಗಾಗಿದ್ದಾರೆ.
ಮಣಿಪಾಲ: ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆ ಹತ್ಯೆ?!
ಮಣಿಪಾಲ: ಪದ್ಮಾಬಾಯಿ ಎಂಬ ಮಹಿಳೆಯೊಬ್ಬರು ಕುತ್ತಿಗೆ ನೋವಿನಿಂದ ಬಳಲುತ್ತಿದ್ದರು. ಮಣಿಪಾಲ ಆಸ್ಪತ್ರೆಗೆ ತೋರಿಸಲು ಹಿರಿಯ ಮಗಳು ಮೀರಾಬಾಯಿ ಅವರ ಮನೆಯಲ್ಲಿ ಉಳಿದುಕೊಂಡಿದ್ದರು. ಪದ್ಮಾ ಬಾಯಿ ಅವರ ಕಿರಿಯ ಮಗಳು ಶಿಲ್ಪಾಳ ಬಳಿ ಮೀರಾಬಾಯಿಯ ಮಗ ಚಿಕಿತ್ಸೆಗೆ ಹಣ ಕೇಳಿದ್ದು, ಮರುದಿನ ಬೆಳಿಗ್ಗೆ ಪದ್ಮಾಬಾಯಿ ಅವರು ಮೃತಪಟ್ಟಿದ್ದಲ್ಲದೆ, ಆಕೆಯ ಕುತ್ತಿಗೆ ಬಳಿ ಕೆಂಪಾದ ಗುರುತು ಕಂಡುಬಂದಿದ್ದು, ಕುತ್ತಿಗೆ ಹಿಸುಕಿ ಹತ್ಯೆ ಮಾಡಿರಬಹುದು ಎಂಬ ಸಂದೇಹ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಶಿಲ್ಪ ಮಣಿಪಾಲ ಠಾಣೆಗೆ ದೂರು ನೀಡಿದ್ದಾರೆ.
ಮಂಗಳೂರು: ಚಾಕಲೇಟ್ ರೂಪದಲ್ಲಿ ಗಾಂಜಾ ಮಾರಾಟ..!
ಮಂಗಳೂರು: ಪಂಪ್ ವೆಲ್ ಬಳಿಯ ಗೂಡಂಗಡಿಯೊಂದರಲ್ಲಿ ಗಾಂಜಾ ಮಿಶ್ರಿತ ಚಾಕಲೇಟ್ ಗಳು ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಉತ್ತರ ಭಾರತ ಮೂಲದ ಸುಜಿತ್ ಎನ್ನುವ ವ್ಯಕ್ತಿ ಗಾಂಜಾ ಎಲೆಗಳ ವಾಸನೆಯುಳ್ಳ ಚಾಕಲೇಟ್ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದ್ದು, ಅಬಕಾರಿ ಇಲಾಖೆಯ ಅಧಿಕಾರಿಗಳು ಅಂಗಡಿಯ ಮೇಲೆ ದಾಳಿ ನಡೆಸಿ, ಸುಜಿತ್ ನನ್ನು ಬಂಧಿಸಿದ್ದಾರೆ. ಮಂಗಳೂರು ಉತ್ತರ ವಿಭಾಗದ ಉಪಾಧೀಕ್ಷಕಿಯಾದ ಗಾಯಿತ್ರಿ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.