ಸೋಷಿಯಲ್ ಮೀಡಿಯಾದಲ್ಲಿ ಫೇಕ್ ನ್ಯೂಸ್ ಹಬ್ಬಿಸಿದ್ರೆ ಜೈಲು!?
* 7 ವರ್ಷ ಜೈಲು 10 ಲಕ್ಷ ದಂಡ: ಏನಿದು ಹೊಸ ನಿಯಮ?
* ಕರ್ನಾಟಕ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿ ಮಸೂದೆ’
NAMMUR EXPRESS NEWS
ಬೆಂಗಳೂರು: ಸೋಷಿಯಲ್ ಮೀಡಿಯಾಗಳಲ್ಲಿ ಇತ್ತೀಚೆಗೆ ಬೇಕಾಬಿಟ್ಟಿ ಸುಳ್ಳು ಸುದ್ದಿ ಹಬ್ಬಿಸುವುದು ಕಾಮನ್ ಆಗಿದೆ. ತಪ್ಪು ಮಾಹಿತಿ ಹಬ್ಬಿಸುವವರಿಗೆ ಬಿಸಿ ಮುಟ್ಟಿಸಲು ಇದೀಗ ರಾಜ್ಯ ಸರ್ಕಾರ ಮುಂದಾಗಿದ್ದು, ಅಂತವರಿಗೆ ಏಳು ವರ್ಷ ಜೈಲು ಶಿಕ್ಷೆ ಮತ್ತು ಹತ್ತು ಲಕ್ಷ ರೂ. ದಂಡ ವಿಧಿಸಲು ಸಜ್ಜಾಗಿದೆ.
ಮಾಹಿತಿ ಪ್ರಕಾರ ಕರ್ನಾಟಕ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿ ಮಸೂದೆ’ ಸಿದ್ಧವಾಗಿದ್ದು ಗುರುವಾರ ನಡೆದ ಸಚಿವ ಸಂಪುಟ ಸಭೆಯ ಮುಂದೆ ಅದನ್ನು ಮಂಡಿಸಲಾಗಿದೆ.
ಸಾರ್ವಜನಿಕ ಭದ್ರತೆ, ಸಾಮರಸ್ಯಕ್ಕೆ ಧಕ್ಕೆ ತರುವ ಯಾವುದೇ ಪೋಸ್ಟ್ ಯಾರೇ ಮಾಡಿದರೂ ಅಂತವರಿಗೆ ಈ ಮಸೂದೆಯಡಿಯಲ್ಲಿ ಶಿಕ್ಷೆ ವಿಧಿಸಬಹುದಾಗಿದೆ.