Categories
ಕರಾವಳಿ

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಇನ್ಮುಂದೆ ಅಕ್ರಮ ಮರಳು ಗಣಿಗಾರಿಕೆ ನಡೆಸಿದ್ರೆ ಕಠಿಣ ಕ್ರಮ

ಟಾಪ್ 3 ನ್ಯೂಸ್ ಕರಾವಳಿ

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಇನ್ಮುಂದೆ ಅಕ್ರಮ ಮರಳು ಗಣಿಗಾರಿಕೆ ನಡೆಸಿದ್ರೆ ಕಠಿಣ ಕ್ರಮ
– ಬಂಟ್ವಾಳ :ಗರ್ಭಿಣಿ ಪತ್ನಿಯನ್ನು ಹತ್ಯೆಗೈದು ತಾನೂ ನೇಣಿಗೆ ಶರಣಾದ ಪಾಪಿ ಗಂಡ…!!
– ಕಾಪು : ಮದ್ವೆಯಾಗದ ಚಿಂತೆಯಲ್ಲಿ ನೇಣಿಗೆ ಶರಣಾದ ಅವಿವಾಹಿತ..!!

NAMMUR EXPRESS NEWS
ಉಡುಪಿ: ಕೈಗಾರಿಕಾ ಇಲಾಖೆಯ ಪ್ರಧಾನ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸ್ವರೂಪ ಟಿಕೆ ಅವರು ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರವನ್ನು ಸ್ವೀಕರಿಸಿಕೊಂಡಿದ್ದಾರೆ. ಡಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಮ್ಮನ್ನು ಪರಿಚಯಿಸಿಕೊಂಡ ಡಿಸಿ ಸ್ವರೂಪ ಅವರು ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸುವವರ ವಿರುದ್ಧ ಯಾವುದೇ ಹಿಂದೇಟು ಹಾಕದೆ, ಏನೂ ಮುಲಾಜಿಲ್ಲದೆ ಸೂಕ್ತ ಕಾನೂನು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ನಾನು ಈಗಷ್ಟೇ ಅಧಿಕಾರ ವಹಿಸಿಕೊಂಡಿದ್ದು ಪ್ರಸ್ತುತ ಮಾಹಿತಿ ಸಂಗ್ರಹಿಸುತ್ತಿದ್ದೇನೆ. ಉಡುಪಿಯಲ್ಲಿ ಪೋಸ್ಟಿಂಗ್ ಸಿಕ್ಕ ತಕ್ಷಣ ಭಾರೀ ಮಳೆಯಿಂದಾಗಿ ರಜೆ ಘೋಷಿಸುವಂತೆ ಸಾಮಾಜಿಕ ಮಾಧ್ಯಮದಲ್ಲಿ ಸಂದೇಶಗಳು ಬರುತ್ತಿದ್ದವು. ಮಳೆಪೀಡಿತ ಪ್ರದೇಶಗಳಿಗೆ ಖುದ್ದಾಗಿ ನಾನು ಭೇಟಿ ನೀಡ್ತೇನೆ ಎಂದು ಹೇಳಿದರು.

– ಬಂಟ್ವಾಳ :-ಗರ್ಭಿಣಿ ಪತ್ನಿಯನ್ನು ಹತ್ಯೆಗೈದು ತಾನೂ ನೇಣಿಗೆ ಶರಣಾದ ಪಾಪಿ ಗಂಡ…!!

ಬಂಟ್ವಾಳ: ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಗರ್ಭಿಣಿ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆಗೈದ ಆಘಾತಕಾರಿ ಘಟನೆ ಬಂಟ್ವಾಳದ ನಾವೂರು ಗ್ರಾಮದ ಬಡಗುಂಡಿ ಎಂಬಲ್ಲಿ ನಡೆದಿದೆ. ತಿಮ್ಮಪ್ಪ ರಾಮ ಮೂಲ್ಯ ಪತ್ನಿಯನ್ನು ಕೊಲೆಗೈದು ನೇಣಿಗೆ ಶರಣಾದ ವ್ಯಕ್ತಿ. ಪತ್ನಿ ಜಯಂತಿ ಹತ್ಯೆಗೀಡಾದ ಮಹಿಳೆ. ರಾತ್ರಿ ದಂಪತಿ ಜಗಳವಾಡಿ ಆ ಗಲಾಟೆ ವಿಕೋಪಕ್ಕೇರಿ ಜಯಂತಿ ಅವರಿಗೆ ಹಲ್ಲೆ ಮಾಡಿ ಕತ್ತು ಹಿಚುಕಿ ಸಾಯಿಸಿದ್ದಾರೆ. ನಂತರ ತಿಮ್ಮಪ್ಪ ಅವರು ಅಡುಗೆ ಮನೆಯ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ಮದ್ವೆ ಆಗಿ ಹದಿನೈದು ವರ್ಷಗಳಾಗಿದ್ದರೂ ಮಕ್ಕಳಾಗಿರಲಿಲ್ಲ.‌ ಜಯಂತಿ ಇತ್ತೀಚೆಗೆ ಗರ್ಭಿಣಿಯಾಗಿದ್ದರು. ಜುಲೈ ಎರಡರಂದು ಸೀಮಂತ ಕಾರ್ಯಕ್ರಮವೂ ನಿಗದಿಯಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

– ಕಾಪು : ಮದ್ವೆಯಾಗದ ಚಿಂತೆಯಲ್ಲಿ ನೇಣಿಗೆ ಶರಣಾದ ಅವಿವಾಹಿತ..!!

ಕಾಪು: ಇನ್ನೂ ಮದುವೆಯಾಗದ ಕಾರಣಕ್ಕೆ ಖಿನ್ನತೆಗೊಳಗಾಗಿ ಮನೆಯಲ್ಲೇ ಅವಿವಾಹಿತನೋರ್ವ ನೇಣಿಗೆ ಶರಣಾದ ಘಟನೆ ಉದ್ಯಾವರದಲ್ಲಿ ನಡೆದಿದೆ. ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಮಧುಕರ ಮೃತ ದುರ್ದೈವಿ. ಕಳೆದ ಎರಡು ದಿನಗಳಿಂದ ಮೀನುಗಾರಿಕೆಗೆ ರಜೆ ಇದ್ದ ಕಾರಣ ಇವರು ಮನೆಯಲ್ಲೇ ಇದ್ದರು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ನೋಡಿ ಮಲಗುವ ಕೋಣೆಯ ಮರದ ಪಕ್ಕಾಸಿಗೆ ನೈಲಾನ್ ಹಗ್ಗ ಕಟ್ಟಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.
ಮದುವೆಯಾಗದೆ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ. ತಾಯಿ ಸುಶೀಲಾ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.