Categories
ರಾಜ್ಯ

ಇತಿಹಾಸದಲ್ಲೇ ಮೊದಲ ಬಾರಿಗೆ 11 ದಿನ ದಸರಾ ಸಂಭ್ರಮ!

ಇತಿಹಾಸದಲ್ಲೇ ಮೊದಲ ಬಾರಿಗೆ 11 ದಿನ ದಸರಾ ಸಂಭ್ರಮ!
– 400 ವರ್ಷಗಳಲ್ಲಿ ಇಂತಹ ದಿನ ವಿಶೇಷ ಮೊದಲು
– ಸೆ.26, 27ರ ಎರಡೂ ದಿನ ಪಂಚಮಿ ಬಂದ ಹಿನ್ನೆಲೆ

NAMMUR EXPRESS NEWS
ಮೈಸೂರು : ದಸರಾ ಆರಂಭವಾಗುವ ಸೆಪ್ಟೆಂಬರ್ ತಿಂಗಳ ಶುಕ್ಲ ಪಕ್ಷದಲ್ಲಿ 2 ಬಾರಿ ಪಂಚಮಿ ಬಂದಿದ್ದು, ಈ ಬಾರಿ 11ನೇ ದಿನಕ್ಕೆ ವಿಜಯದಶಮಿ ಬರಲಿದೆ. ಹಾಗಾಗಿ ಈ ಬಾರಿ ವಿಶೇಷವಾಗಿ 11 ದಿನಗಳ ದಸರಾ ಆಚರಣೆ ನಡೆಯಲಿದೆ. ಆದರೆ, ಜಂಬೂಸವಾರಿ ಮೆರವಣಿಗೆಯ ದಿನಾಂಕ ಸರ್ಕಾರ ತೀರ್ಮಾನಿಸಲಿದೆ.
ಮಹಾಲಯ ಅಮಾವಾಸ್ಯೆಯ ಬಳಿಕ ಆರಂಭವಾಗುವ ನವರಾತ್ರಿಯು ಈ ಬಾರಿ ದಶರಾತ್ರಿಯಾಗಲಿದೆ. ದಸರಾ ಇತಿಹಾಸದಲ್ಲೇ ಅಪರೂಪದ ಪ್ರಸಂಗ. ನಿಯಮದಂತೆ ಸೆ.21ಕ್ಕೆ ಅಮಾವಾಸ್ಯೆ ಮುಗಿದ ಮಾರನೆ ದಿನ (ಸೆ.22) ನವರಾತ್ರಿ ಆರಂಭವಾಗಬೇಕು. ಆದರೆ, ಸೆ.26, 27ರಂದು ಪಂಚಮಿ ಕಾರಣ ನವರಾತ್ರಿ ದಶರಾತ್ರಿಯಾಗಿ ಮಾರ್ಪಟ್ಟಿವೆ. ಅ.2ರ ಗಾಂಧಿ ಜಯಂತಿಯಂದು ವಿಜಯದಶಮಿ ನಡೆಯಲಿದೆ. ದಸರಾ ಆರಂಭದಿಂದಲೂ ನವರಾತ್ರಿಯನ್ನು ಯದುವಂಶಸ್ಥರು ಚಾಚೂ ತಪ್ಪದೆ ಪಾಲಿಸಿದ್ದಾರೆ. ಸಾಮಾನ್ಯ ಪಂಚಾಂಗಕ್ಕೂ, ಅರಮನೆ ಪಂಚಾಂಗಕ್ಕೂ ವ್ಯತ್ಯಾಸವಿದೆ. ಈ ಹಿನ್ನೆಲೆಯಲ್ಲಿ ಅರಮನೆ, ಸರ್ಕಾರದ ಶಮಿಗೂ ವ್ಯತ್ಯಾಸವಾಗಬಹುದು. ಒಂದು ವೇಳೆ 2 ದಿನದ ಚೌತಿಯನ್ನು ಒಂದೇ ದಿನಕ್ಕೆ ಲೆಕ್ಕ ಹಾಕಿದರೆ ಅ.1ರ ಮಹಾ ನವಮಿಯಂದೆ ವಿಜಯದಶಮಿ ಮಾಡಬೇಕಾಗುತ್ತದೆ. ಇಲ್ಲವೇ ನವರಾತ್ರಿ ಆರಂಭವನ್ನು ಸೆ.23ರಿಂದ ಆರಂಭಿಸಬೇಕಾಗುತ್ತದೆ. 400 ವರ್ಷಗಳಲ್ಲಿ ಇಂತಹ ಘಟನೆ ನಡೆದಿದೆಯೋ ಇಲ್ಲವೋ ಎಂಬುದು ಗೊತ್ತಿಲ್ಲ. ಈ ಬಗ್ಗೆ ಅನೇಕರಲ್ಲಿ ಗೊಂದಲವಿದ್ದು, ಅಂತಿಮ ತೀರ್ಮಾನವನ್ನು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.