Categories
ಕರಾವಳಿ

ಉಡುಪಿ: ಲಾಡ್ಜ್‌ನಲ್ಲಿ ಮಾದಕ ವಸ್ತುಗಳ ಸಹಿತ ಮೂವರ ಬಂಧನ!

ಕರಾವಳಿ ಟಾಪ್ ನ್ಯೂಸ್

ಉಡುಪಿ: ಲಾಡ್ಜ್‌ನಲ್ಲಿ ಮಾದಕ ವಸ್ತುಗಳ ಸಹಿತ ಮೂವರ ಬಂಧನ!

– ಪುತ್ತೂರು: ಆಟೋ ರಿಕ್ಷಾ ಚಾಲಕ ರಿಕ್ಷಾ ಸಹಿತ ನಾಪತ್ತೆ!
– ಮಂಗಳೂರು: ಗಾಂಜಾ ಸೇವನೆ ನಾಲ್ವರು ಅರೆಸ್ಟ್

NAMMUR EXPRESS NEWS
ಉಡುಪಿ: ದಶರಥ ನಗರದ ಲಾಡ್ಜ್‌ ಒಂದರಲ್ಲಿ ಮಾದಕ ವಸ್ತು ಸಹಿತ ಎ.22 ಮಂಗಳವಾರದಂದು ಬಂಧನ ಮಾಡಲಾಗಿದೆ.
ಮಾದಕವಸ್ತುವನ್ನು ತೆಗೆದುಕೊಳ್ಳಲು ಉಪಯೋಗಿಸುವ ಸಿರಿಂಜ್‌ಗಳನ್ನು ಹೊಂದಿದ ಮಾಹಿತಿ ಆಧರಿಸಿ ಮಣಿಪಾಲ ಠಾಣೆ ಪೊಲೀಸರು ಕಾರ್ಯಾಚರಣೆ ಮಾಡಿ ಬಂಧನ ಮಾಡಿದ್ದಾರೆ.
ಕಾಪುವಿನ ಮಂಚಕಲ್‌ ಅಜರುದ್ದೀನ್‌, ಮಹಾರಾಷ್ಟ್ರದ ಪುಣೆಯ ರಾಜೇಶ್‌ ಪ್ರಕಾಶ್‌ ಜಾದವ್‌, ಮಲ್ಪೆಯ ನಾಜೀಲ್‌ (ಆಶಿಪ್‌) ಬಂಧಿತ ಆರೋಪಿಗಳು.
ಇವರಿಂದ 40 ಸಾವಿರ ರೂ ಮೌಲ್ಯದ 13.70 ಗ್ರಾಂ ತೂಕದ MDMA, 10,500 ರೂ ಮೌಲ್ಯದ 225 ಗ್ರಾಂ ಗಾಂಜಾ, ಪ್ಲಾಸ್ಟಿಕ್‌ ಕವರ್‌ಗಳು, 5 ಸಿರಿಂಜ್‌ಗಳು, Sterile water 5 ml ನ 3 ಪ್ಲಾಸ್ಟಿಕ್‌ ಸೀಸ, ಮೊಬೈಲ್‌ ವಶಪಡಿಸಲಾಗಿದೆ. ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಪುತ್ತೂರು: ಆಟೋ ರಿಕ್ಷಾ ಚಾಲಕ ರಿಕ್ಷಾ ಸಹಿತ ನಾಪತ್ತೆ!

ಪುತ್ತೂರು: ಪುತ್ತೂರು ರೈಲ್ವೇ ನಿಲ್ದಾಣದ ಬಳಿ ಬಾಡಿಗೆಗೆಂದು ಹೋದ ಸಾಲ್ಮರ ಸೂತ್ರ ಬೆಟ್ಟು ನಿವಾಸಿ ಆಟೋ ರಿಕ್ಷಾ ಚಾಲಕ ಲೋಕೇಶ ಎಂಬುವವರು ರಿಕ್ಷಾ ಸಹಿತ ನಾಪತ್ತೆಯಾಗಿರುವ ಘಟನೆ ಎ.21 ರಂದು ನಡೆದಿದ್ದು, ಈ ಕುರಿತು ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
ಬೆಳಗ್ಗೆ 5.30ಕ್ಕೆ ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಬಾಡಿಗೆಗೆ ಎಂದು ಹೋದ ವ್ಯಕ್ತಿ ವಾಪಾಸು ಬಂದಿಲ್ಲ. ಲೋಕೇಶ ಅವರ ಪತ್ನಿ ಸುವರ್ಣ ಬಿ.ಎಸ್‌ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

– ಮಂಗಳೂರು: ಗಾಂಜಾ ಸೇವನೆ ನಾಲ್ವರು ಅರೆಸ್ಟ್

ಮಂಗಳೂರು: ಕಾವೂರು ಮತ್ತು ಬಂದರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ಮಾಡಿದ ಪ್ರಕರಣದ ಸಂಬಂಧ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೋಂದೆಲ್ ಜಂಕ್ಷನ್ ಬಳಿ ಮಾದಕ ವಸ್ತು ಸೇವನೆ ಮಾಡಿದಂತೆ ಕಂಡು ಬಂದ ಮಂಜೇಶ್ವರ ಉದ್ಯಾವರ ನಿವಾಸಿ ಅಬ್ದುಲ್ ಆಜೀಜ್ (39), ಕುಂಜತ್ತೂರು ನಿವಾಸಿ ಅಪ್ಸರ್ (36) ಪಂಜಿಮೊಗರು ಜಂಕ್ಷನ್ ಬಳಿ ಪುತ್ತೂರು ನಿವಾಸಿ ಮುಹಮ್ಮದ್ ಫೈಜಲ್ (27) ಸೆಂಟ್ರಲ್ ಮಾರ್ಕೆಟ್ ಬಳಿ ಬಿಹಾರ ಮೂಲದ ಫಳ್ನೀರ್ ನಲ್ಲಿ ವಾಸವಿದ್ದ ಇಮ್ರಾನ್ ಆಲಮ್ (18) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ನಾಲ್ವರನ್ನು ವೈದ್ಯಕೀಯ ತಪಾಸನೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.