Categories
ಮಂಗಳೂರು

ಇಂದು ಮಂಗಳೂರಲ್ಲಿ ಕಾಶ್ಮೀರದ ದಾಳಿ ಖಂಡಿಸಿ ಬಿಜೆಪಿ ಬೃಹತ್ ಪ್ರತಿಭಟನೆ!

ಇಂದು ಮಂಗಳೂರಲ್ಲಿ ಕಾಶ್ಮೀರದ ದಾಳಿ ಖಂಡಿಸಿ ಬಿಜೆಪಿ ಬೃಹತ್ ಪ್ರತಿಭಟನೆ!

– ಕ್ಯಾಪ್ಟನ್ ಬ್ರಿಜೇಶ್ ಚೌಟ ನೇತೃತ್ವದಲ್ಲಿ ಉಗ್ರರ ವಿರುದ್ಧ ಆಕ್ರೋಶ
– ದಾಳಿಗೆ ಬಲಿಯಾದ ಹಿಂದೂ ಬಂಧುಗಳಿಗೆ ಭರವಸೆ ನೀಡಿದ ಕ್ಯಾಪ್ಟನ್!

NAMMUR EXPRESS NEWS
ಮಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಮ್ ಬೈಸರಿನಲ್ಲಿ ಭಯೋತ್ಪಾದಕರು ಅಮಾಯಕ ಪ್ರವಾಸಿಗರ ಮೇಲೆ ನಡೆಸಿದ ದಾಳಿಯನ್ನು ಖಂಡಿಸಿ ದಕ್ಷಿಣ ಕನ್ನಡ ಭಾರತೀಯ ಜನತಾ ಪಾರ್ಟಿ ಏ. 23ರಂದು ಅಂದರೆ ಇಂದು ಮಂಗಳೂರಲ್ಲಿ ಪ್ರತಿಭಟನಾ ಸಭೆಯನ್ನು ನಡೆಸಿದರು.
ಜಮ್ಮು ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣವಾದ ಪಹಲ್ಗಾಮ್ ಧಾಮದ ಮೇಲೆ ಏ. 22ರಂದು ಉಗ್ರರ ಗುಂಡಿನ ದಾಳಿ ನಡೆದಿದೆ. ಧಾಮವನ್ನು ಪ್ರವೇಶಿಸಿದ್ದ ಇಬ್ಬರು ಬಂದೂಕುಧಾರಿಗಳು ಅಲ್ಲಿದ್ದ ಪ್ರವಾಸಿಗರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಹಲವಾರು ಪ್ರವಾಸಿಗರನ್ನು ಬೆದರಿಸಿ ಸಾಲಾಗಿ ನಿಲ್ಲಿಸಿ ಗುಂಡಿನ ದಾಳಿ ನಡೆಸಲಾಗಿದೆ.
ಭಾರತೀಯ ವಿರೋಧಿ ಮಾನಸಿಕತೆಗಳು, ಜಿಹಾದಿ ಮಾನಸಿಕತೆಗಳು ಇಡೀ ದೇಶದಲ್ಲಿ ಭಯವನ್ನು ಹುಟ್ಟಿಸಬೇಕು, ಹಿಂದೂ ಸಮಾಜವನ್ನು ಆಸ್ತಿರಗೊಳಿಸಿಸಬೇಕು. ಇದೀಗ ಹೊಸ ಭಾರತವೇ ನಿರ್ಮಾಣವಾಗುತ್ತಿದೆ ಈ ಹೊಸ ಭಾರತವನ್ನು ಖಡಿತಗೊಳಿಸಬೇಕು, ದೇಶದ ಜನರನ್ನು ಭಯಭೀತಗೊಳಿಸಬೇಕು ಎಂಬ ದೃಷ್ಟಿಯನ್ನು ಇಟ್ಟುಕೊಂಡು ಮಾಡಿರುವ ಘಟನೆ ಇದು ಎಂದು ಲೋಕಸಭಾ ಸದಸ್ಯರು, ಬಂಟ್ವಾಳ ತಾಲ್ಲೂಕು ಶಾಸಕರಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಹೇಳಿದರು.
ಪಾಕಿಸ್ತಾನ ಪ್ರೇರಿತ ಜಿಹಾದಿಗಳ ದಾಳಿಗೆ ಬಲಿಯಾದ ಎಲ್ಲಾ ಹಿಂದೂ ಬಂಧುಗಳ ಆತ್ಮಕ್ಕೆ ಶಾಂತಿಯನ್ನು ಕೋರಿದರು. ಹಾಗೂ ಅವರ ಕುಟುಂಬಕ್ಕೆ ಶಕ್ತಿಯನ್ನು ಭಗವಂತ ನೀಡಲಿ ಎಂದು ನಾವೆಲ್ಲ ನಿಮ್ಮ ಜೊತೆಗೆ ಇದ್ದೇವೆ ಎಂಬುದಾಗಿ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಅನೇಕ ಬಿಜೆಪಿ ಮುಖಂಡರು, ಶಾಸಕರು, ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.