ಭಲೇ…ವಿದುಷಿ ದೀಕ್ಷಾ: ವಿಶ್ವ ದಾಖಲೆ ಸಾಧಕಿ
– 9 ದಿನ ರಾತ್ರಿ ಹಗಲು ಭರತ ನಾಟ್ಯ ಮಾಡಿ ಗೆದ್ದ ಕರಾವಳಿ ಪ್ರತಿಭೆ
– ಗೋಲ್ಡನ್ ಬುಕ್ ಆಫ್ ವರ್ಡ್ ರೆಕಾರ್ಡ್ ದಾಖಲೆ ಸೃಷ್ಠಿಸಿದ ಉಡುಪಿಯ ದೀಕ್ಷಾ
NAMMUR EXPRESS NEWS
ಉಡುಪಿಯ ವಿದೂಷಿ ದೀಕ್ಷಾ ವಿ ಇಡೀ ದೇಶ ಮೆಚ್ಚುವ ವಿಶ್ವ ದಾಖಲೆ ಮಾಡಿದ್ದಾರೆ.9 ದಿನಗಳಲ್ಲಿ 216 ಗಂಟೆ ಪೂರ್ಣಗೊಳಿಸುವ ಮೂಲಕ ರಾಜ್ಯಕ್ಕೆ ಹೆಸರು ತಂದಿದ್ದಾರೆ. ದೀಕ್ಷಾ ವಿ ಆ. 21 ರಂದು ಮಧ್ಯಾಹ್ನ 3:30 ಕ್ಕೆ ನೃತ್ಯ ಪ್ರದರ್ಶನ ಮುಗಿಸಿ ದಾಖಲೆ ಪುಟ ಸೇರಿದ್ದಾರೆ.
ಈ ಹಿಂದೆ ವಿಶ್ವದಾಖಲೆಗಾಗಿ 7 ದಿನಗಳಲ್ಲಿ 170 ಗಂಟೆ ನಿರಂತರ ಭರತನಾಟ್ಯ ಪ್ರದರ್ಶಸಿ ಮಂಗಳೂರಿನ ರೆಮೋನಾ ಪೆರೇರಾ ನಿರ್ಮಿಸಿದ್ದ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ ಇದೀಗ ದೀಕ್ಷಾ ಮುಡಿಗೆ ಏರಿದೆ.
ರಾಜ್ಯದ ಉಪ ಮುಖ್ಯಮಂತ್ರಿ ಡಿಕೆಶಿ, . ಜಿ. ಶಂಕರ್, ಕರಾವಳಿ ಪ್ರಮುಖ ನಾಯಕರಾದ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್ ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಜಯಪ್ರಕಾಶ್ ಹೆಗ್ಡೆ, ಅಧಿಕಾರಿಗಳು, ಅಜ್ಜರ ಕಾಡು ಡಾ. ಜಿ. ಶಂಕರ್ ಮಹಿಳಾ ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು, ದೀಕ್ಷಾ ಕುಟುಂಬದವರು ಹಾಜರಿದ್ದರು.
ಕರಾವಳಿಯ ಪ್ರತಿಭೆಗೆ ಶುಭಾಶಯಗಳು
ನಮ್ಮೂರ್ ಎಕ್ಸ್ ಪ್ರೆಸ್ ಮೀಡಿಯಾ
ಕರಾವಳಿ
