ಜೀ ಇನ್ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಆರ್ಟ್ಸ್ ವಾರ್ಷಿಕೋತ್ಸವ ರಂಗು!
– ಉಡುಪಿಯಲ್ಲಿ ನಡೆದ ಕಾರ್ಯಕ್ರಮ: ಅರಿವಿನ ದಾರಿ ಕಿರುಚಿತ್ರ ನಿರ್ದೇಶಕರಾದ ಪ್ರವೀಣ್ ಜೆ. ಕೆ ಅವರಿಗೆ ಗೌರವ
– ನಗುವ ನಯನ ಮಧುರ ಮೌನ ಕಿರುಚಿತ್ರ ಸೆಕೆಂಡ್ ಲುಕ್ ಪೋಸ್ಟರ್ ಬಿಡುಗಡೆ
NAMMUR EXPRESS NEWS
ಉಡುಪಿ: ಕರಾವಳಿಯ ಪ್ರಸಿದ್ಧ ಸಂಸ್ಥೆಯಾದ ಜೀ ಇನ್ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಆರ್ಟ್ಸ್ ಉಡುಪಿ ಕಾಲೇಜಿನಲ್ಲಿ ಜನವರಿ 16ರಂದು ಅದ್ದೂರಿ 2ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ವಾರ್ಷಿಕೋತ್ಸವದ ಆಚರಣೆಯ ವಿಶೇಷ ಸಂದರ್ಭದಲ್ಲಿ ಉಡುಪಿ ಜಿಲ್ಲೆ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾದ. ಎಸ್. ಎಲ್.ಅಶ್ವತ್ ಅವರು ಬರೆದಿರುವ ಅರಿವಿನ ದಾರಿ ಪುಸ್ತಕ ಆಧರಿಸಿ ರಚಿಸಲ್ಪಟ್ಟ ಅರಿವಿನ ದಾರಿ ಕಿರುಚಿತ್ರ ನಿರ್ದೇಶಕರಾದ ಪ್ರವೀಣ್ ಜೆ. ಕೆ ಹಾಗೂ ನಟಿಸಿರುವ ವಿನಾಯಕ ಕುಲಾಲ್ ಇವರನ್ನು ಗೌರವಿಸಲಾಯಿತು. ಅತಿಥಿಗಳಾಗಿ ಆಹ್ವಾನಿಸಿದ್ದು ಇದೇ ವೇಳೆ ವಿದ್ಯಾರ್ಥಿಗಳಿಗೆ ಕ್ರಿಯೇಷನ್, ಇನ್ನೊವೇಟಿವ್ ಐಡಿಯಾ ಬಗ್ಗೆ ಮಾಹಿತಿ ಹಂಚಿಕೊಂಡರು. ಜೀ ಇನ್ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಆರ್ಟ್ಸ್ ವ್ಯವಸ್ಥಾಪಕ ನಿರ್ದೇಶಕರಾಗಿರುವ ಗುರುಪ್ರಸಾದ್ ಸಾನು ಅವರು ಅರಿವಿನ ದಾರಿ ಕಿರುಚಿತ್ರ ನಿರ್ದೇಶಕರಾದ ಪ್ರವೀಣ್ ಜೆ. ಕೆ ಹಾಗೂ ನಟಿಸಿರುವ ವಿನಾಯಕ ಕುಲಾಲ್ ಇವರನ್ನು ಗೌರವಿಸಿ ಸನ್ಮಾನಿಸಿದರು.
ರಾಜ್ಯ ಮಟ್ಟದಲ್ಲಿ ಗಮನ ಸೆಳೆದ ಕಿರುಚಿತ್ರ
ಅರಿವಿನ ದಾರಿ ಕಿರು ಚಿತ್ರದಲ್ಲಿ ಆಧುನಿಕ ಕಾಲದ ಯುವಜನತೆ ವಿವಿಧ ಚಟಗಳಿಗೆ ದಾಸರಾಗುವ ಬದಲು ಉನ್ನತವಾದ ವಿದ್ಯಾಭ್ಯಾಸವನ್ನು ಮಾಡುವ ಜೊತೆಗೆ ಉತ್ತಮ ಸಂಸ್ಕಾರವನ್ನು ಕಲಿಯುವುದು ಹೇಗೆ?, ಒಂದು ಪುಸ್ತಕ, ಒಂದೊಳ್ಳೆ ಅವ್ಯಾಸ ಹೇಗೆ ಸಾಧನೆಗೆ ಕಾರಣವಾಗುತ್ತದೆ? ಎಂಬುದನ್ನು ಸ್ಪಷ್ಟವಾಗಿ ತೋರಿಸಲಾಗಿದೆ. ಅರಿವಿನ ದಾರಿ ಪುಸ್ತಕ ರಾಜ್ಯದಾದ್ಯಂತ ಹೆಚ್ಚು ಮಾರಾಟವಾಗುತ್ತಿರುವ ಪುಸ್ತಕ ಎಂಬುದು ಹೆಮ್ಮೆಯ ವಿಚಾರವಾಗಿದೆ.
– ನಗುವ ನಯನ ಮಧುರ ಮೌನ ಕಿರುಚಿತ್ರ ಸೆಕೆಂಡ್ ಲುಕ್ ಪೋಸ್ಟರ್ ಬಿಡುಗಡೆ!
ಕಾರ್ಯಕ್ರಮದಲ್ಲಿ ಗುರುಪ್ರಸಾದ್ ಸಾನು ಅವರು ನಗುವ ನಯನ ಮಧುರ ಮೌನ ಎಂಬ ಕಿರುಚಿತ್ರದ ಸೆಕೆಂಡ್ ಲುಕ್ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದರು.
