Categories
ರಾಜ್ಯ

ಟಾಪ್ ನ್ಯೂಸ್ ಟುಡೇ

ಟಾಪ್ ನ್ಯೂಸ್ ಟುಡೇ

– ಎಟಿಎಂಗೆ ಹಣ ಹಾಕಲು ಬಂದ ಸಿಬ್ಬಂದಿಗೆ ಗುಂಡೇಟು: ಇಬ್ಬರು ಸಾವು
– ಬ್ಯಾಂಕ್ ಮುಂದೆಯೇ ಉಸಿರು ನಿಲ್ಲಿಸಿದ ಇಬ್ಬರು ಸಿಬ್ಬಂದಿ
– ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ ದರೋಡೆಕೋರರಿಂದ ಚಾಕು ಇರಿತ!
– ಹಾಸನ: ಸ್ನೇಹಿತನನ್ನೆ ಕೊಲೆ ಮಾಡಿ ಶಿರಾಡಿ ಘಾಟ್ ಪ್ರಪಾತಕ್ಕೆ ಎಸೆದ ಪಾತಕಿಗಳು!

NAMMUR EXPRESS NEWS
ಬೀದರ್‌: ಹಾಡಹಗಲೇ ಎಟಿಎಂಗೆ ಹಣ ಹಾಕಲು ಬಂದ ಸಿಬ್ಬಂದಿಗೆ ಗುಂಡು ಹಾರಿಸಿರೋ ಘಟನೆ ಬೀದರ್‌ನ ಎಸ್‌ಬಿಐ ಮುಖ್ಯ ಕಚೇರಿ ಮುಂದೆ ನಡೆದಿದೆ. ಎಟಿಎಂಗೆ ಹಣ ಹಾಕಲು ಬಂದ ಸಿಬ್ಬಂದಿಗೆ ದುಷ್ಕರ್ಮಿಗಳು ಕಣ್ಣಿಗೆ ಖಾರದ ಪುಡಿ ಎರಚಿ, ಗುಂಡು ಹಾರಿಸಿ ಹಣದ ಸಮೇತ ಪರಾರಿಯಾಗಿದ್ದಾರೆ. ಗುಂಡು ಹಾರಿಸಿದ ಪರಿಣಾಮ ಎಸ್‌ಬಿಐ ಬ್ಯಾಂಕ್‌ ಸಿಬ್ಬಂದಿ ಸ್ಥಳದಲ್ಲೇ ಗಿರಿ ವೆಂಕಟೇಶ್ ಎಂಬುವವರು ಉಸಿರು ನಿಲ್ಲಿಸಿದ್ದರು. ಅಲ್ಲದೇ ಮತ್ತೊಬ್ಬ ಸಿಬ್ಬಂದಿ ಶಿವಕುಮಾ‌ರ್ ಎಂಬುವವರಿಗೂ ಕೂಡ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಿದ್ದರು. ಈಗ ಶಿವಕುಮಾರ್ ಅವರು ಕೂಡ ಉಸಿರು ನಿಲ್ಲಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ, ಎಸ್‌ಬಿಐ ಬ್ಯಾಂಕ್ ಸಿಬ್ಬಂದಿ PSC ವಾಹನದಲ್ಲಿ ತೆಗೆದುಕೊಂಡು ಲಕ್ಷಾಂತರ ಹಣವನ್ನು ಬಂದಿದ್ದರು. ಇನ್ನೇನು ಎಟಿಎಂಗೆ ಹಣ ಹಾಕಬೇಕು ಅನ್ನುವಷ್ಟರಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಐದು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಇಬ್ಬರು ಸಿಬ್ಬಂದಿ ಅಸುನೀಗಿದ್ದಾರೆ. ಇನ್ನೂ, ಖರೀಮರು ಹಣದ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗುತ್ತಿರೋ ದೃಶ್ಯ ಸ್ಥಳೀಯರ ಫೋನ್‌ನಲ್ಲಿ ಸೆರೆಯಾಗಿದೆ. ಸದ್ಯ ಘಟನಾ ಸ್ಥಳದಲ್ಲಿ ಡಾಗ್ ಸ್ಕ್ಯಾಡ್, ಬೆರಳಚ್ಚು ತಜ್ಞರ ತಂಡ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಹಣ ಹೊತ್ತೊಯ್ದ ಇಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ ದರೋಡೆಕೋರರಿಂದ ಚಾಕು ಇರಿತ!

ಬೆಂಗಳೂರು: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮುಂಬೈ ಮನೆಯಲ್ಲಿ ದರೋಡೆ ಯತ್ನ ನಡೆದಿದ್ದು, ಈ ವೇಳೆ ಅವರ ಮೇಲೆ ಚಾಕುವಿನಿಂದ ದಾಳಿ ಮಾಡಲಾಗಿದೆ. ಕಳ್ಳರು ಮನೆಗೆ ನುಗ್ಗಿದಾಗ ಸೈಫ್ ಅವರು ಪ್ರತಿರೋಧಿಸಿದ್ದರಿಂದ ಘಟನೆ ನಡೆದಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕಿನಿಂದ ದಾಳಿ ಮಾಡಲಾಗಿದೆ. ಶ್ರೀಮಂತ ನಟ ಎಂಬ ಕಾರಣಕ್ಕೆ ಕೆಲವರು ಅವರ ಮನೆಗೆ ಕನ್ನ ಹಾಕಲು ಪ್ರಯತ್ನಿಸಿದ್ದಾರೆ. ಈ ವೇಳೆ ಸೈಫ್ ಅಲಿ ಖಾನ್ ಅವರನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆಗ ಅವರಿಗೆ ಗಾಯ ಆಗಿದೆ. ಅವರನ್ನು ಸದ್ಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಸೈಫ್ ಅಲಿ ಖಾನ್ ಅವರು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಮನೆಯಲ್ಲಿ  ಜನವರಿ 16ರಂದು ಮುಂಜಾನೆ 2.30ರ ವೇಳೆಗೆ ಕಳ್ಳರು ಮನೆ ಒಳಗೆ ನುಗ್ಗಿದ್ದಾರೆ. ಈ ವೇಳೆ ಎಲ್ಲರಿಗೂ ಎಚ್ಚರ ಆಗಿದೆ. ಆಗ ಸೈಫ್ ಅವರು ಕಳ್ಳರನ್ನು ತಡೆಯಲು ಹೋಗಿದ್ದು, ಈ ವೇಳೆ ಕಳ್ಳರು ಹಲ್ಲೆ ಮಾಡಿದ್ದಾರೆ. ತಕ್ಷಣ ಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಸದ್ಯ ಕಳ್ಳರನ್ನು ಹಿಡಿಯುವ ಪ್ರಯತ್ನ ನಡೆಯುತ್ತಿದೆ. ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದ್ದು, ವಿಶೇಷ ಪೊಲೀಸರ ತಂಡ ರಚನೆ ಆಗಿದೆ. ಮನೆ ಹಾಗೂ ಸುತ್ತಮುತ್ತ ಇರುವ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಮಾಡಲಾಗುತ್ತಿದೆ. ಸದ್ಯ ಸೈಫ್ ಅಲಿ ಖಾನ್ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬೆನ್ನಿನ ಭಾಗದಲ್ಲಿ ಕಳ್ಳರು ಇರಿದ ಚಾಕು ತುಂಬಾನೇ ದೊಡ್ಡ ಗಾಯವನ್ನೇ ಮಾಡಿದೆ ಎನ್ನಲಾಗಿದೆ. ಬೆನ್ನಿನ ಮೂಳೆಗೆ ತೊಂದರೆ ಆಗಿದೆಯೇ ಎನ್ನುವ ಬಗ್ಗೆ ಪರೀಕ್ಷೆ ನಡೆಯುತ್ತಿದೆ. ಸದ್ಯ ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯ ಇದೆ ಎನ್ನಲಾಗಿದೆ.

* ಸ್ನೇಹಿತನನ್ನೆ ಕೊಲೆ ಮಾಡಿ ಶಿರಾಡಿ ಘಾಟ್ ಪ್ರಪಾತಕ್ಕೆ ಎಸೆದ ಪಾತಕಿಗಳು

ಹಾಸನ: ಕಳೆದ ಮೂರು ದಿನಗಳ ಹಿಂದೆ ದಿಢೀರ್ ಕಾಣೆಯಾಗಿದ್ದ ತಾಲೂಕಿನ ಹರಳಹಳ್ಳಿಯ ಚಾಲಕ ಶಿವಕುಮಾರ್(34) ಸ್ನೇಹಿತರಿಂದಲೇ ಕೊಲೆಯಾಗಿರುವುದು ಖಾತ್ರಿಯಾಗಿತ್ತು. ತಾವು ಜಾನುವಾರು ಹಾಗೂ ಕುರಿ ಕಳವು ಮಾಡಿದ್ದು ಗೊತ್ತಿದ್ದ ಶಿವಕುಮಾರ್, ಅದನ್ನು ಬೇರೆಯವರಿಗೆ ಹೇಳಿ ಬಿಡುತ್ತಾನೆ ಎಂದು ಸ್ನೇಹಿತರೇ ಆತನಿಗೆ ಕಂಠಪರಿ ಕುಡಿಸಿ ಜೀವ ತೆಗೆದಿದ ಘಟನೆ ನಡೆದಿದೆ. ಶಿವಕುಮಾ‌ರ್ ಮೃತದೇಹ ಸಕಲೇಶಪುರದಿಂದ 20 ಕಿಮೀ ದೂರ ರಾಷ್ಟ್ರೀಯ ಹೆದ್ದಾರಿ 75 ಶಿರಾಡಿ ಘಾಟ್ನ ಪ್ರಪಾತದಲ್ಲಿ ಪತ್ತೆಯಾಗಿತ್ತು.
ಘಟನೆ ನಂತರ ಆರೋಪಿಗಳಲ್ಲಿ ಒಬ್ಬನಾದ ದಿಲೀಪ್‌ ಎಂಬಾತ, ಪೊಲೀಸರಿಗೆ ಶರಣಾಗಿದ್ದು, ಕೊಲೆ ಕೃತ್ಯದಲ್ಲಿ ಭಾಗಿಯಾಗಿರುವ ಅದೇ ಊರಿನ ಪ್ರದೀಪ್ ಮತ್ತು ಶರತ್ ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಅದರಂತೆ ತನಿಖೆ ಕೈಗೊಂಡ ಪೊಲೀಸರಿಗೆ ಈಗ ಮೃತ ದೇಹ ದೊರೆತಿದ್ದು, ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.