ಅದ್ದೂರಿಯಾಗಿ ನಡೆದ ಭಜನಾ ಮಂಡಳಿ ಹಾಗೂ ಗಣ್ಯರಿಗೆ ಸನ್ಮಾನ ಸಭೆ!
– ರಾಮನವಮಿ ಪ್ರಯುಕ್ತ ಶ್ರೀ ಕ್ಷೇತ್ರ ಭಜನಾ ಉತ್ಸವದ ನಿಮಿತ್ತ ಸನ್ಮಾನ
– ಶ್ರೀ ಅಂಬಿಕಾ ಮಠದ ವಠಾರದಲ್ಲಿ ನಡೆದ ಸಮಾರಂಭ
NAMMUR EXPRESS NEWS
ಕಾರ್ಕಳ: ಭಜನಾ ಉತ್ಸವದ ಪ್ರಯುಕ್ತ ಏ.19ನೇ ಶನಿವಾರ ರಾತ್ರಿ 07ರಿಂದ ಶ್ರೀ ಅಂಬಿಕಾ ಮಠದ ವಠಾರದಲ್ಲಿ ಭಜನಾ ಮಂಡಳಿಗಳ ಅಧ್ಯಕ್ಷರು ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಶ್ರೀ ಜೈ ಭವಾನಿ ಪರಿಸರ ರಕ್ಷಾ ಸೇವಾ ಸಂಸ್ಥೆ ಮಲ್ಲಾಯಬೆಟ್ಟು, ಕಲ್ಯಾ ಶ್ರೀ ತ್ರೈ ಅಂಬಿಕಾ ಮಠದ ಶ್ರೀ ತ್ರೈಂಬಿಕೇಶ್ವರಿ ಅನ್ನಪೂರ್ಣಿ ದೇವಸ್ಥಾನ, ಮಲ್ಲಾಯಬೆಟ್ಟು, ಕಲ್ಯಾ ಬ್ರಹ್ಮಋಷಿ ಶ್ರೀ ಉಮಾಮಹೇಶ್ವರ ಸ್ವಾಮೀಜಿಯವರ ನೇತೃತ್ವದಲ್ಲಿ ರಾಮನವಮಿ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಮಾ. 29ರಿಂದ ಏ. 07ರವರೆಗೆ ಜರುಗಿದ ಭಜನಾ ಉತ್ಸವದ ಪ್ರಯುಕ್ತ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.
ಈ ಸಭಾ ಕಾರ್ಯಕ್ರಮದಲ್ಲಿ ಲಕ್ಕಿ ಡ್ರಾದಲ್ಲಿ ವಿತೇತರಾದವರಿಗೆ ಪ್ರಥಮ ಬಹುಮಾನ ಎಲೆಕ್ಟ್ರಿಕ್ ಸ್ಕೂಟಿ, ದ್ವಿತೀಯ ಎಲೆಕ್ಟ್ರಿಕ್ ಸೈಕಲ್, ತೃತೀಯ ಮೊಬೈಲ್ ಹಾಗೂ ಐದು ಸಮಾಧಾನಕರ ಬಹುಮಾನ ವಿತರಿಸಲಾಯಿತು.
ಹಾಗೆಯೇ ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್ ವಿಜೇತ ವಸತಿಯುತ ವಿಶೇಷ ಶಾಲಾ ಮಕ್ಕಳ ಪೋಷಣೆಗೆ ನೆರವು ನೀಡಲಾಯಿತು. ಗಗ್ಗರ ಮತ್ತು ಕಂಬಳದ ನಡುಟೊಂಜಿ ಕಥೆ ಎಂಬ ತುಳು ನಾಟಕಗಳು ಹಾಗೂ ಹಲವಾರು ಕಥೆಗಳನ್ನು ಬರೆದ ವಿಲಾಸ್ ಕುಮಾರ್ ಶೆಟ್ಟಿ, ನಿಟ್ಟೆ ಇವರಿಗೆ ಹಾಗೂ ಗೋರಕ್ಷಾ ಪ್ರಮುಖ್ ವಿಶ್ವಹಿಂದೂ ಪರಿಷದ್, ಕರ್ನಾಟಕ ದಕ್ಷಿಣ ಸುನಿಲ್ ಕೆ. ಆರ್, ಪ್ರತ್ಯರ್ಥ ಚಲನಚಿತ್ರದಲ್ಲಿ ನಟಿಸಿದ ನಮ್ಮೂರ ಪ್ರತಿಭೆ ಯೋಗೀಶ್ ಶೆಟ್ಟಿ ಹಾಗೂ ಜೈ ಭವಾನಿ ಸಂಸ್ಥೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸದಸ್ಯರಿಗೆ ಸನ್ಮಾನಿಸಲಾಯಿತು.
ಹಾಗೆಯೇ ಸ್ವಾಮೀಜಿಯವರು ಮನೆ ಮನೆಗಳಲ್ಲಿ ದಿನ ನಿತ್ಯ ಭಜನೆಗಳು ನಡೆಯುತ್ತಿರಬೇಕು, ಮಕ್ಕಳನ್ನು ಭಜನಾ ಮಂಡಳಿಗೆ ಸೇರಿಸಬೇಕೆಂದು ಇದರಲ್ಲಿ ದೇಹದಾರ್ಡ್ಯ ದಿಂದ ಬಲಿಷ್ಠರಾಗುತ್ತಾರೆ. ಭಜನೆ ಮಾಡುತ್ತಾ ಇದ್ದರೆ ಆಧ್ಯಾತ್ಮಿಕ ಧ್ಯಾನ ಬೆಳೆಯುವುದು. ಹಾಗೆಯೇ ಮೊಬೈಲ್ಗಳಲ್ಲಿ ಬೆಟ್ಟುಕಟ್ಟಿ ಜೂಪಾಟ ಆಡುವುದರಿಂದ ಮಕ್ಕಳು ಸ್ವಲ್ಪ ದೂರವಿರುತ್ತಾರೆ ಎಂದು ಹಿತವಚನ ನೀಡಿ, ಕೃಷ್ಣಾರ್ಪಣೆ ಅರ್ಪಿಸಿದರು.
ಹಾಗೂ ಏ. 20ರಂದು ಮಕ್ಕಳು ಹಾಗೂ ಮಹಿಳೆಯರು ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಮೆಡಲ್ಗಳನ್ನು ಪಡೆದಿರುತ್ತಾರೆ.
ಸಭೆಯಲ್ಲಿ ಜೆ.ಬಿ.ಪಿ.ಆರ್.ಎಸ್.ಎಸ್.ನ ಮಾಜಿ ಅಧ್ಯಕ್ಷರಾದ ಅರವಿಂದ ರಾವ್, ಅಧ್ಯಕ್ಷರಾದ ಲತಾ ನಾರಾಯಣ ಪೂಜಾರಿ, ಸುಧಾಕರ ಎನ್. ಕೋಟ್ಯಾನ್, ಪಂಚಾಯತ್ ಸದಸ್ಯ ಜಗದೀಶ್ ಆಚಾರ್ಯ, ಉದ್ಯೋಗಿ ಸುಧೀರ್ ಶೆಟ್ಟಿ ಹಾಗೂ ಹಲವಾರು ಗಣ್ಯರು ಉಪಸ್ಥಿತದ್ದರು.
