ಮಂಡಗದ್ದೆ ಹೋಬಳಿಗೆ S ಸುಕ್ಷಮ್, ಪುನೀತ್ ಬ್ರಿಗೇಡ್ ತಂಡ ಚಾಂಪಿಯನ್!
– ಕೂಡಿಗೆ ಗಬಡಿ ಫ್ರೆಂಡ್ಸ್ ಅವರು ಆಯೋಜಿಸಿದ ಕ್ರಿಕೇಟ್ ಪಂದ್ಯಾವಳಿ ಯಶಸ್ವಿ
NAMMUR EXPRESS NEWS
ತೀರ್ಥಹಳ್ಳಿ: ಏಪ್ರಿಲ್ 18, 19, 20 ರಂದು ಕೂಡಿಗೆ ಗಬಡಿ ಫ್ರೆಂಡ್ಸ್ ಅವರು ಆಯೋಜಿಸಿದ ಮಂಡಗದ್ದೆ ಹೋಬಳಿಯ ಲೀಗ್ ಮತ್ತು ನಾಕೌಟ್ ಮಾದರಿಯ, ಕ್ರಿಕೇಟ್ ಪಂದ್ಯಾವಳಿ ಉತ್ತಮವಾಗಿ ಆಯೋಜನೆ ಮಾಡಿದರು. ಗುಡುಗು ಮಳೆಯ ನಡುವೆ ಸರಳ ರೀತಿಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಅರುಣ್ ಶೆಟ್ಟಿ ಸಿ. ಕೆ ರೋಡ್ ಇವರು ಗೆದ್ದ ತಂಡಗಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಕೆಜಿಎಫ್ ಸೀಜನ್ -1 ಚಿಡುವ ಸತೀಶ್ ಮತ್ತು ಶ್ರೀನಾಥ್ ಗಬಡಿ ಇವರ ಮಾಲೀಕತ್ವದ ತಂಡಕ್ಕೆ ಬಂದಿತು.
C. S ಸುಕ್ಷಮ್ ಪುನೀತ್ ಬ್ರಿಗೇಡ್ ಪ್ರಥಮ ಬಹುಮಾನ 40.000 ಸಾವಿರ ಮತ್ತು ಪಾರಿತೋಷಕ ಪಡೆದುಕೊಂಡಿತು. ದ್ವಿತೀಯ ಸ್ಥಾನ ಪಡೆದ ಗುತ್ತಿಶ್ರೀ ತಂಡ 25.000 ಸಾವಿರ ಮತ್ತು ಪಾರಿತೋಷಕ ಪಡೆದುಕೊಂಡಿತು. ತೃತೀಯ ಸ್ಥಾನ ಶೆಟ್ಟಿ11, ತಂಡ ಪಡೆದುಕೊಂಡಿತ್ತು. ಚತುರ್ಥ ಸ್ಥಾನ R. F C ತಂಡ ಪಡೆದುಕೊಂಡಿತ್ತು. ಐದನೇಯ ಸ್ಥಾನ ಎಲೆಕ್ಟ್ರಿಕ್ ಫೈರ್ ತಂಡ ಪಡೆದುಕೊಂಡಿತು.
ಸರಣಿ ಉದ್ದಕ್ಕೂ ಉತ್ತಮ ಆಟವನ್ನು ಪ್ರದರ್ಶಿಸಿದ C, S ಸುಕ್ಷಮ್ ಪುನೀತ್ ಬ್ರಿಗೇಡ್ ತಂಡದ ಆಟಗಾರ ಮನೋಜ್ ಹಳಗ ಮ್ಯಾನ್ ಆಫ್ ದಿ ಸಿರೀಸ್ ಪಡೆದುಕೊಂಡರು. ಫೈನಲ್ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್, ಕೌಶಿಕ್ ಪೆಟ್ರೋಳ್ಳಿ, C S ಸುಕ್ಷಮ್ ಪುನೀತ್ ಬ್ರಿಗೇಡ್ ತಂಡದ ಆಟಗಾರ.ಉತ್ತಮ ಕೀಪರ್ ” ಎಜು ಮಳೂರು ಶೆಟ್ಟಿ11 ” ತಂಡ ಉತ್ತಮ ಬೌಲರ್ ಪೂರ್ಣೇಶ್ ಅಲಸೆ ಗುತ್ತಿಶ್ರೀ ತಂಡ ಉತ್ತಮ ಬ್ಯಾಟ್ಸ್ ಮ್ಯಾನ್ ಕುಮಾರ್ ಗುತ್ತಿ ಶ್ರೀ ತಂಡ ಪಡೆದರು. C, S ಸುಕ್ಷಮ್ ಪುನೀತ್ ಬ್ರಿಗೇಡ್ ತಂಡ ಮಂಡಗದ್ದೆ ಹೋಬಳಿಯ ಚಾಂಪಿಯನ್ ಆಗಿ ಮತ್ತೊಮ್ಮೆ ಹೊರಹೊಮ್ಮಿದೆ. ತಂಡದ ಎಲ್ಲಾ ಆಟಗಾರರಿಗೆ ಶುಭಾಶಯಗಳು.
ಗ್ರೀನ್ ಹಾರ್ಟ್ ಕೆಫೆ ಮಾಲಿಕತ್ವದ ತಂಡ ಸರ್ವಧರ್ಮ ಕಫ್ ರನ್ನರ್ ಅಪ್
ಯುವ ರೈತ ಬಳಗ ಕಮ್ಮರಡಿ ಇವರು ಆಯೋಜಿಸಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಕೋಣಂದೂರಿನ ಗ್ರೀನ್ ಹಾರ್ಟ್ ಕೆಫೆ ಮಾಲಿಕತ್ವದ ಉದಯೋನ್ಮುಖ ಆಟಗಾರರನ್ನು ಹೊಂದಿದ ತಂಡ ರನ್ನರ್ ಅಪ್ ಆಗಿ ಹೊರಹೊಮ್ಮಿತು.
ಮಧ್ಯರಾತ್ರಿ ಸುರಿದ ಭಾರಿಮಳೆಯಿಂದಾಗಿ ಆಟಕ್ಕೆ ತುಂಬ ಅಡಚಣೆಯಾದರೂ ಆಡಲು ಬಂದಿದ್ದ ಎಲ್ಲ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಿದರು. ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾದ ಮಂಗಳೂರು ನಿಜಾಮ್ ಫ್ರೆಂಡ್ಸ್ ತಂಡ ಮತ್ತು ಗ್ರೀನ್ ಹಾರ್ಟ್ ತಂಡದ ನಡುವೆ ಚಂಚಲೆಯಾಗಿದ್ದ ಮೊದಲ ಸ್ಥಾನ ಮಂಗಳೂರು ತಂಡಕ್ಕೆ ಒಲಿಯಿತು.
ಗ್ರೀನ್ ಹಾರ್ಟ್ ತಂಡದ ಸ್ಟಾರ್ ಆಟಗಾರರಾದ ಲೋಕೇಶ್ ಮನು , ಅಚ್ಚುತ್, ಅಬ್ಬು, ಸಮೀರ್, ದರ್ಶನ್ ಬಿ, ಆಶಿಕ್, ತಂಡದ ಮಾಲಿಕರಾದ ತೀರ್ಥಹಳ್ಳಿ ಟಿಎಪಿಸಿಎಂಎಸ್ ನಿರ್ದೇಶಕರು ಆದ ನಾಗರತ್ನಮುರುಗರಾಜ್ ಪತ್ರಕರ್ತ ಮುರುಗರಾಜ್, ವಿಶ್ವನಾಥ್ ದೇಮ್ಲಾಪುರ, ಇನ್ನು ಅನೇಕರು ಉಪಸ್ಥಿತರಿದ್ದರು.
