ಅದ್ದೂರಿಯಾಗಿ ಕಾರ್ಕಳ ಕುಕ್ಕುಂದೂರು ಗರಡಿ, ಕಾಲೋನಿ ಬಳಿ ನಡೆದ ಗುದ್ದಲಿ ಪೂಜೆ!
– ರಸ್ತೆ ಅಭಿವೃದ್ಧಿ ನಿಮಿತ್ತ ನಡೆದ ಗುದ್ದಲಿ ಪೂಜೆ
– ಅಭಿವೃದ್ಧಿಗೆ 100.50 ಲಕ್ಷ ಅನುದಾನ ನೀಡಿದ ಸುನಿಲ್ ಕುಮಾರ್!
– ಗುದ್ದಲಿ ಪೂಜೆಗೆ ಆಗಮಿಸಿದ ಕಾರ್ಕಳ ಶಾಸಕರಾದ ಸಮಗ್ರ ಅಭಿವೃದ್ಧಿಯ ಹರಿಕಾರ!
NAMMUR EXPRESS NEWS
ಕಾರ್ಕಳ: ಕಾರ್ಕಳ ಕುಕ್ಕುಂದೂರು ಗ್ರಾ. ಪಂ ವ್ಯಾಪ್ತಿಯ ಉಡುಪಿ-ಕಾರ್ಕಳ ಮುಖ್ಯ ರಸ್ತೆಯಿಂದ ಕುಕ್ಕುಂದೂರು ಗರಡಿ ಪ.ಜಾತಿ ಕಾಲೋನಿ ಸಂಪರ್ಕ ರಸ್ತೆಯ ಅಭಿವೃದ್ಧಿಗಾಗಿ ಏ. 11ರಂದು ಬೆಳಿಗ್ಗೆ 8:30ಕ್ಕೆ ಕುಕ್ಕುಂದೂರು ಗರಡಿ ಪ.ಜಾತಿ ಕಾಲೋನಿ ಬಳಿ ಗುದ್ದಲಿ ಪೂಜೆ ನಡೆಯಿತು.
ರಸ್ತೆಯ ಅಭಿವೃದ್ಧಿಗಾಗಿ 100.50 ಲಕ್ಷ ರೂಪಾಯಿ
ಅನುದಾನವನ್ನು ಒದಗಿಸಿಕೊಟ್ಟ ಕಾರ್ಕಳ ಕ್ಷೇತ್ರದ ಜನಪ್ರಿಯ ಶಾಸಕರಾದ ಸಮಗ್ರ ಅಭಿವೃದ್ಧಿಯ ಹರಿಕಾರರಾದ ವಿ ಸುನಿಲ್ ಕುಮಾರ್ ರವರವರು ಆಗಮಿಸಿದ್ದರು.
ಇದೊಂದು 20 ವರ್ಷದ ಹಿಂದಿನ ಜನರ ಕನಸು, ಈಗ ಶಾಸಕರ ಅನುದಾನ, ಸಹಕಾರದಲ್ಲಿ ಊರಿನ ಜನರ ಬೇಡಿಕೆಯನ್ನು ಈಡೇರಿಸುವ ಕಾರ್ಯ ನಡೆಯುತ್ತಿದೆ ಎಂದು ಪಂಚಾಯತ್ ಸದಸ್ಯರು ಕಾರ್ಯಕ್ರಮದಲ್ಲಿ ಹೇಳಿದರು.
ರಸ್ತೆ ಸಂಪರ್ಕದ ಅಭಿವೃದ್ಧಿ ಯೋಜನೆಯ ಹಿಂದಿರುವ ಪ್ರತಿಯೊಬ್ಬರಿಗೂ ಎಲ್ಲಾ ಸದಸ್ಯರ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದರು.
ಇದು ಗರಡಿ ರಸ್ತೆಯಾಗಿದ್ದು, ಕೆಲವು ವರ್ಷಗಳಿಂದ ಅಭಿವೃದ್ಧಿ ಉದ್ದೇಶದಿಂದ ಬಹಳ ಪ್ರಯತ್ನದ ಮೇರೆಗೆ ಇಂದಿನ ದಿನ ಇದನ್ನು ಆರಂಭಿಸುವ ಅವಕಾಶ ದೊರಕಿದೆ ಎಂದು ಅಲ್ಲಿನ ಸದಸ್ಯರು ಮಾತನಾಡಿದರು.
ಆದಷ್ಟು ಬೇಗ ಈ ಕಾರ್ಯಗಳನ್ನು ಮುಗಿಸಿ ಇಲ್ಲಿನ ಜನರಿಗೆ ಬೇಕಾಗಿರುವ ಈ ರಸ್ತೆಯ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿ ಕೊಡುವ ಉದ್ದೇಶದಿಂದ ಗುದ್ದಲಿ ಪೂಜೆ ನಡೆಸಲಾಯಿತು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕಾರ್ಕಳ ಕ್ಷೇತ್ರದ ಶಾಸಕರು ವಿ ಸುನಿಲ್ ಕುಮಾರ್, ಪಂಚಾಯತ್ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
