Categories
ಕಾರ್ಕಳ

ಬಟ್ಟೆಯಲ್ಲಿ ಅರಳಿದ ಶ್ರೀ ರಾಮನ ಅದ್ಭುತ ಕಲಾಕೃತಿ!

ಬಟ್ಟೆಯಲ್ಲಿ ಅರಳಿದ ಶ್ರೀ ರಾಮನ ಅದ್ಭುತ ಕಲಾಕೃತಿ!

– ಶ್ರೀ ರಾಮ ನವಮಿಯ ಪ್ರಯುಕ್ತ ಮೂಡಿಬಂದ ಶ್ರೀ ರಾಮ
– 200 ಅಡಿ ವಿಸ್ತೀರ್ಣದ ಕಪ್ಪು ಮತ್ತು ಕೇಸರಿ ಬಟ್ಟೆಯಲ್ಲಿ ರಚನೆ

NAMMUR EXPRESS NEWS
ಕಾರ್ಕಳ: ಶ್ರೀ ರಾಮ ನವಮಿಯ ಪ್ರಯುಕ್ತ ಏ. 6ರಂದು ಸಂಜೆ 7.00ಕ್ಕೆ ಕಾರ್ಕಳ ಬೈಲೂರಿನ ತ್ರಿವರ್ಣ ಆರ್ಟ್ ಕ್ಲಾಸಸ್ ಹಾಗೂ ಕರಾವಳಿ ಯೂತ್ ಕ್ಲಬ್ ರಿ. ಉಡುಪಿ ಸಹಯೋಗದ ವತಿಯಿಂದ ಕಲಾ ತರಗತಿಯ ವಿದ್ಯಾರ್ಥಿಗಳು ರಚಿಸಿರುವ 200 ಅಡಿ ವಿಸ್ತೀರ್ಣದ ಕಪ್ಪು ಮತ್ತು ಕೇಸರಿ ಬಟ್ಟೆಯಲ್ಲಿ ಅರಳಿದ ಶ್ರೀ ರಾಮನ ಅದ್ಭುತ ಕಲಾಕೃತಿಯು ತ್ರಿವರ್ಣ ಆರ್ಟ್ ಕ್ಲಾಸ್ಸಸ್, ಕಾರ್ಕಳ ಬೈಲೂರಿನಲ್ಲಿ ಅನಾವರಣಗೊಂಡಿತು.

ಕಲಾಕೃತಿಯ ಅನಾವರಣ!

ತುಳು ರಂಗಭೂಮಿಯ ಖ್ಯಾತ ಕಲಾವಿದ, ನಿರ್ದೇಶಕ ಹಾಗೂ ತುಳು ಚಲನಚಿತ್ರ ನಟ, ಸಂಭಾಷಣೆಕಾರ ಪ್ರಸನ್ನ ಶೆಟ್ಟಿ ಬೈಲೂರು, ಊರಿನ ಗಣ್ಯರಾದ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರು ವಿಕ್ರಂ ಹೆಗ್ಡೆ, ಹಿಂದೂ ಜಾಗರಣ ವೇದಿಕೆಯ ಮುಖಂಡ ರಮೇಶ್ ಕಲ್ಲೊಟ್ಟೆ ಇವರು ದೀಪ ಬೆಳಗಿಸುವುದರ ಮೂಲಕ ವಿದ್ಯಾರ್ಥಿ ಪೋಷಕರೊಂದಿಗೆ ಪುಷ್ಪಾರ್ಚನೆಗೈದರು.
ಕಾರ್ಯಕ್ರಮದಲ್ಲಿ ತರಗತಿ ವಿದ್ಯಾರ್ಥಿಗಳಾದ ಹಿಮಾನಿ ಡಿ. ಶೆಟ್ಟಿ, ಪ್ರಥ್ವಿಜ್ ಶೆಟ್ಟಿ, ತೇಜಸ್ ದೇವಾಡಿಗ, ಸಾಕ್ಷಿತ್ ಶೆಟ್ಟಿ, ಸದ್ವಿನ್ ಶೆಟ್ಟಿ, ಸ್ಪರ್ಶ್ ಪೂಜಾರಿಯವರು ಉಪಸ್ಥಿತರಿದ್ದರು. ಕಲಾವಿದ ಹರೀಶ್ ಸಾಗಾ ಮಾರ್ಗದರ್ಶನದಲ್ಲಿ ಈ ಆಕರ್ಷಕ ಕಲಾಕೃತಿಯು ಮೂಡಿ ಬಂದಿರುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.