Categories
ಮಾಹಿತಿ ಸುದ್ದಿ

ದ್ವಿತೀಯ ಪಿಯುಸಿ ಫಲಿತಾಂಶ: ಎಲ್ಲೆಡೆ ಕುತೂಹಲ!

ದ್ವಿತೀಯ ಪಿಯುಸಿ ಫಲಿತಾಂಶ: ಎಲ್ಲೆಡೆ ಕುತೂಹಲ!
– ಮಧ್ಯಾಹ್ನ ವೇಳೆಗೆ ಫಲಿತಾಂಶ: ಮಕ್ಕಳೆ ಡೋಂಟ್ ವರಿ
– ಫಲಿತಾಂಶವೇ ಜೀವನ ಅಲ್ಲ, ಏನಾದ್ರೂ ತಲೆ ಕೆಡಿಸ್ಕೊಬೇಡಿ!
– https://karresults.nic.in ಫಲಿತಾಂಶ ವೀಕ್ಷಿಸಿ..

NAMMUR EXPRESS NEWS
ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಾರ್ಚ್ 2025ರ ದ್ವಿತೀಯ ಪಿಯುಸಿ ಪರೀಕ್ಷೆ-1 ನ್ನು ದಿನಾಂಕ:01/03/2025 ರಿಂದ 20/03/2025ರವರೆಗೆ ನಡೆಸಲಾಗಿತ್ತು. ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯವಾಗಿರುತ್ತದೆ. ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಿಸುವ ಸಂಬಂಧ ದಿನಾಂಕ: 08/04/2025 ರಂದು ಮಧ್ಯಾಹ್ನ 12:30 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಲ್ಲಿ ಮಾನ್ಯ ಸಚಿವರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಇವರ ಅಧ್ಯಕ್ಷತೆಯಲ್ಲಿ ಸುದ್ದಿಗೋಷ್ಠಿಯನ್ನು ಕರೆಯಲಾಗಿದೆ. ಫಲಿತಾಂಶವನ್ನು https://karresults.nic.in ತಾಣದಲ್ಲಿ ದಿನಾಂಕ: 08/04/2025 ರ ಮಧ್ಯಾಹ್ನ 1:30 ಗಂಟೆಯ ನಂತರ ವೀಕ್ಷಿಸಬಹುದಾಗಿದೆ. ಎಂದು ಮಾಧ್ಯಮ ಪ್ರಕಟಣೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.

ಪರೀಕ್ಷೆಯ ಫಲಿತಾಂಶವೇ ಜೀವನ ಅಲ್ಲ, ಏನಾದ್ರೂ ತಲೆ ಕೆಡಿಸ್ಕೊಬೇಡಿ!

ಫಲಿತಾಂಶ ಪಾಸ್ ಆಗ್ಲಿ, ಫೇಲ್ ಆಗ್ಲಿ ತಲೆ ಕೆಡಿಸ್ಕೊಬೇಡಿ. ಮತ್ತೊಮ್ಮೆ ಓದಿ, ಅಂಕ ಕಡಿಮೆ ಬಂದ್ರು ನೂರಾರು ಅವಕಾಶ ಇದೆ. ಫಲಿತಾಂಶವೇ ಜೀವನ ಅಲ್ಲ. ಪೋಷಕರು ಕೂಡ ಮಕ್ಕಳ ಮೇಲೆ ಒತ್ತಡ ಹೇರಬೇಡಿ.

ನಮ್ಮೂರ್ ಎಕ್ಸ್ ಪ್ರೆಸ್ ಎಲ್ಲಾ ಮಕ್ಕಳಿಗೆ ಶುಭಾಶಯ ಕೋರುತ್ತದೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.