ಸುಮಂತ್ ಕುಮಾರ್ ಜೈನ್ ಅವರಿಗೆ ಶುಭಾಶಯಗಳ ಸುರಿಮಳೆ
– ವಿಶ್ವ ಹಿಂದೂ ಪರಿಷತ್ ಮತ್ತು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಗೌರವಾರ್ಪಣೆ
– ಎಕ್ಸೆಲ್ ಟೆಕ್ನೋ ಸ್ಕೂಲ್ ವತಿಯಿಂದ ಆತ್ಮೀಯ ಗೌರವ
NAMMUR EXPRESS NEWS
ಗುರುವಾಯನಕೆರೆ: ಕರ್ನಾಟಕದ ಖ್ಯಾತ ಮಾಧ್ಯಮ ಸಂಸ್ಥೆ ವಿಜಯವಾಣಿ ಕೊಡ ಮಾಡುವ ವಿಜಯ ರತ್ನ – 2025 ಪ್ರಶಸ್ತಿ ಪುರಸ್ಕೃತರಾದ ರಾಜ್ಯದ ಪ್ರಸಿದ್ಧ ಶಿಕ್ಷಣ ಸಂಸ್ಥೆ ಗುರುವಾಯನಕೆರೆ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಶಿಕ್ಷಣ ಕ್ಷೇತ್ರದ ಸಾಧನೆಗೆ ಸಂದ ಫಲ ಇದಾಗಿದ್ದು ಮತ್ತಷ್ಟು ಸಾಧನೆ ಮಾಡಲಿ ಎಂದು ಶುಭ ಹಾರೈಸಿದ್ದಾರೆ
ವಿಶ್ವ ಹಿಂದೂ ಪರಿಷತ್ ಮತ್ತು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಗೌರವಾರ್ಪಣೆ
ವಿಶ್ವ ಹಿಂದೂ ಪರಿಷತ್ ಮತ್ತು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಇಂದಬೆಟ್ಟು, ನಾವೂರು ವತಿಯಿಂದ ಗೌರವಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸಂಘಟನಾ ಕಾರ್ಯದರ್ಶಿಗಳಾದ ಸಂತೋಷ್ ಉಂಬಾಜೆ, ಶ್ರೀ ಕಾಂತ್, ಪ್ರಧಾನ ಕಾರ್ಯದರ್ಶಿ ಗಣೇಶ್ ಎನ್ ನಾವೂರು, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆನಂದ ಅಡೀಲು, ನವಭಾರತ ಗೆಳೆಯರ ಬಳಗದ ಗೌರವಾಧ್ಯಕ್ಷರಾದ ಅರುಣ್ ಕುಮಾರ್, ಪ್ರಮುಖರಾದ ಪ್ರದೀಪ್ ನಾವೂರು, ವಿನೋದ್ ಕಲ್ಲಾಜೆ, ನಿತೇಶ್ ಇಂದ ಬೆಟ್ಟು, ಅವಿನಾಶ್ ಇಂದ ಬೆಟ್ಟು ಜೊತೆಗಿದ್ದರು.
ಎಕ್ಸೆಲ್ ಟೆಕ್ನೋ ಸ್ಕೂಲ್ ವತಿಯಿಂದ ಗೌರವಾರ್ಪಣೆ
ವಿಜಯ ರತ್ನ 2025 ಪ್ರಶಸ್ತಿ ವಿಜೇತರಾದ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರಿಗೆ ಗುರುವಾಯನಕೆರೆ ಎಕ್ಸೆಲ್ ಟೆಕ್ನೋ ಸ್ಕೂಲ್ ವತಿಯಿಂದ ಗೌರವಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸಹನಾ ಜೈನ್, ಶಾಲಾ ಸಂಯೋಜಕಿ ಲೀನಾ ಫ್ಲೋರಿನ್ ಪಿಂಟೋ, ಶಿಕ್ಷಕಿಯರಾದ ಗೀತಾ ಬಿ, ಚೇತನಾ,ಸ್ವಾತಿಧನು, ಪವಿತ್ರ ಕುಂಡದಬೆಟ್ಟು ಹಾಗೂ ಅಕೌಂಟ್ಸ್ ವಿಭಾಗದ ಶೃತಿ ಶೆಟ್ಟಿ ಜೊತೆಗಿದ್ದರು.
