Categories
ಉಡುಪಿ

ವಿಶ್ವದ 2ನೇ ಅತಿ ಎತ್ತರದ ಪ್ರದೇಶದಲ್ಲಿ ಕನ್ನಡ ಬಾವುಟ ಹಾರಿಸಿದ ತಂದೆ ಮಗ!

ವಿಶ್ವದ 2ನೇ ಅತಿ ಎತ್ತರದ ಪ್ರದೇಶದಲ್ಲಿ ಕನ್ನಡ ಬಾವುಟ ಹಾರಿಸಿದ ತಂದೆ ಮಗ!

– ಹೀರೋ ಮೋಟೋ ಕಾರ್ಪ್ ಸಂಸ್ಥೆಯಿಂದ 10 ಲಕ್ಷ ಮೌಲ್ಯದ ಬೈಕ್ ನೀಡಿ ಗೌರವ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

ಉಡುಪಿ: 25 ವರ್ಷ ಹಳೆಯದಾದ ತಮ್ಮ ಹೀರೋ ಹೊಂಡಾ ಸ್ಪ್ಲೆಂಡರ್ ಬೈಕ್ ನಲ್ಲಿ ಜಗತ್ತಿನ ಎರಡನೇ ಅತಿ ಎತ್ತರದ ಪ್ರದೇಶವಾದ ಜಮ್ಮು ಕಾಶ್ಮೀರದ ಖರ್ದುಂಗ್ಲಾವನ್ನು ಏರಿ, 17.982 ಅಡಿ ಎತ್ತರವಿರುವ ಆ ಜಾಗದಲ್ಲಿ ಕನ್ನಡ ಬಾವುಟ ಹಾರಿಸಿ ತಂದೆ ಮಗ ಹೊಸ ದಾಖಲೆ ಬರೆದಿದ್ದಾರೆ.
ಶಿರ್ವದ ತಂದೆ ಮತ್ತು ಮಗನಾದ ರಾಜೇಂದ್ರ ಶೆಣೈ, ಪ್ರಜ್ವಲ್ ಶೆಣೈ ಈ ಸಾಧನೆ ಮಾಡಿದ ವ್ಯಕ್ತಿ. ಪ್ರಯಾಣದ ಬಗ್ಗೆ ವಿಶೇಷ ಆಸಕ್ತಿಯುಳ್ಳ ಪ್ರಜ್ವಲ್ ತಮ್ಮ ಬೈಕಿನಲ್ಲಿ ಒಬ್ಬರೇ ಹದಿನೇಳು ರಾಜ್ಯಗಳನ್ನು ಸುತ್ತಿದ್ದು, ಕೆಲವೊಮ್ಮೆ ತಂದೆ ರಾಜೇಂದ್ರ ಶೆಣೈ ಅವರೊಡನೆ ಐದು ವರ್ಷಗಳ ಕಾಲ ಸುಮಾರು 45ಸಾವಿರದಿಂದ ಐವತ್ತು ಸಾವಿರ ಕಿ.ಮೀ ತಮ್ಮ ಬೈಕಿನಲ್ಲಿ ಸಂಚರಿಸಿದ್ದಾರೆ.
ಪ್ರಜ್ವಲ್ ತಮ್ಮ ಹತ್ತೊಂಭತ್ತನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಬೈಕಿನಲ್ಲಿ ಬೆಂಗಳೂರಿಗೆ ಪ್ರಯಾಣ ಆರಂಭಿಸಿದ್ದು ಸಂಚಾರ ಇಂದಿಗೂ ಮುಂದುವರಿದುಕೊಂಡು ಬಂದಿದೆ. ಅಯೋಧ್ಯೆ, ಕನ್ಯಾಕುಮಾರಿ, ಗೋವಾ, ಶಿರಡಿ ಸೇರಿದಂತೆ ದೇಶದ ಪ್ರಸಿದ್ಧ ದೇವಾಲಯಗಳಿಗೆ ಹೀರೋ ಹೊಂಡಾ ಸ್ಪ್ಲೆಂಡರ್ ನಲ್ಲೇ ತೆರಳಿ ದರ್ಶನ ಪಡೆದು ಬಂದಿದ್ದಾರೆ. ಪ್ರಜ್ವಲ್ ಶೆಣೈ ಅವರ ಈ ಸಾಧನೆ ಗುರುತಿಸಿ, ಸಂತಸಗೊಂಡ ಹೀರೋ ಹೊಂಡಾ ಸಂಸ್ಥೆಯು ತಮ್ಮ ಸಂಸ್ಥೆಯ ಸ್ಥಾಪಕರಾದ ಡಾ. ಬ್ರಿಜ್ ಮೋಹನ್ ಲಾಲ್ ಮುಂಜಾಲ್ ಅವರ 101ನೇ ಜನ್ಮ ದಿನದ ನೆನಪಿನಾರ್ಥವಾಗಿ ತಯಾರಿಸಿದ ಹತ್ತು ಲಕ್ಷ ರೂಪಾಯಿ ಬೆಲೆ ಬಾಳುವ ನೂರು ಬೈಕ್ ಗಳಲ್ಲಿ ಒಂದನ್ನು ಅತ್ಯುತ್ತಮ ಗ್ರಾಹಕ ಎಂಬ ಹೆಸರಿನಲ್ಲಿ ಪ್ರಜ್ವಲ್ ಅವರಿಗೆ ನೀಡಲು ನಿರ್ಧರಿಸಿದೆ. ಈ ಬೈಕ್ ಅನ್ನು ಹೀರೋ ಹೊಂಡಾ ಸಂಸ್ಥೆಯು ಉಡುಪಿಯ ಶಕ್ತಿ ಹೀರೋ ಮೋಟಾರ್ ಸಂಸ್ಥೆಯಲ್ಲಿ ಪ್ರಮುಖ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಜ್ವಲ್ ಶೆಣೈ ಅವರಿಗೆ ಜೂನ್ 28ರಂದು ವಿತರಿಸಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.