ಕ್ರೈಸ್ಟ್ ಕಿಂಗ್ : ಪ್ರೌಢಶಾಲಾ ಮತ್ತು ಪ್ರಾಥಮಿಕ ವಿಭಾಗದ ಕರಾಟೆ ಪಂದ್ಯಾಟದಲ್ಲಿ ೭ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ
ಕಾರ್ಕಳ: ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ ಇವರ ಆಶ್ರಯದಲ್ಲಿ ಬೈಲೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಕರಾಟೆ ಪಂದ್ಯಾಟದಲ್ಲಿ ಕ್ರೈಸ್ಟ್ ಕಿಂಗ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಮಿಂಚಿನ ಸಾಧನೆ ಮಾಡಿದ್ದಾರೆ.
ಈ ಸ್ಪರ್ಧೆಯಲ್ಲಿ ಒಟ್ಟು ಏಳು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ಉಡುಪಿ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಪ್ರೌಢಶಾಲಾ ವಿಭಾಗದಿಂದ ಒಂಬತ್ತನೇ ತರಗತಿಯ ಆಯುಶ್ರೀ ಎಂ. ಆಚಾರ್ಯ, ಸಾನ್ವಿ ಎಂ. ನಾಯಕ್, ಎಂಟನೇ ತರಗತಿಯ ಸುದೀಕ್ಷಾ, ಅದ್ವಿತ್ ಡಿ.ವಿ ಹಾಗೂ ನಾಗೇಶ್ ಭಟ್ ಪ್ರಥಮ ಸ್ಥಾನ ಪಡೆದಿದ್ದಾರೆ. ಪ್ರಾಥಮಿಕ ವಿಭಾಗದಿಂದ ಏಳನೇ ತರಗತಿಯ ಅಕ್ಷಯ್ ಪ್ರಭು ಮತ್ತು ಶಾರ್ವಿ ಬಾಲಕೃಷ್ಣ ಪೂಜಾರಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾದರು.
ಇದು, ಒಂಬತ್ತನೇ ತರಗತಿಯ ಲಕ್ಷಣ್ಯ ಪಿ.ಆರ್, ಶಗುನ್ ಎಸ್. ವರ್ಮಾ ಹಾಗೂ ಹತ್ತನೇ ತರಗತಿಯ ಅಬ್ದುಲ್ ಅಝೀಝ್ ಸಫ್ವಾನ್ ಮತ್ತು ಡೇನಿಯಲ್ ಟಿ.ಕೆ ದ್ವಿತೀಯ ಸ್ಥಾನ ಗಳಿಸಿದರು. ಈ ಸಾಧನೆಗಾಗಿ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
