Categories
ತೀರ್ಥಹಳ್ಳಿ

ನಿದ್ರೆಯಲ್ಲಿ ಸರ್ಕಾರಗಳು: ಮಂಡಗದ್ದೆ ಪಕ್ಷಿಧಾಮ ಮಾಯ!

ನಿದ್ರೆಯಲ್ಲಿ ಸರ್ಕಾರಗಳು: ಮಂಡಗದ್ದೆ ಪಕ್ಷಿಧಾಮ ಮಾಯ!
– ಶಿವಮೊಗ್ಗ ತೀರ್ಥಹಳ್ಳಿ ಮಾರ್ಗದ ತುಂಗಾ ನದಿಯ ದಡದಲ್ಲಿದ್ದ ಪಕ್ಷಿಧಾಮ
– ಜನರಿಗೂ…ಅಳುವವರಿಗೂ ಪರಿಸರ ಬೇಕಿಲ್ಲ: ಹಕ್ಕಿಗಳೇ ಎಲ್ಲಿ ಹೋದಿರಿ?

ಲೇಖನ: ಧೀರಜ್ ಎಂ ಇರುವತ್ತಿ

ನಮ್ಮೂರ್ ಎಕ್ಸ್ ಪ್ರೆಸ್ ಸ್ಪೆಷಲ್

ತೀರ್ಥಹಳ್ಳಿ ಅಂದ್ರೆ ಕುವೆಂಪು ಮನೆ ಅಲ್ಲೇ ಇರೋದು ಅಲ್ವಾ ಅಂತಿದ್ರು. ಹಾಗೆ ಮಂಡಗದ್ದೆ ಅಂದ್ರೆ ಪಕ್ಷಿದಾಮ ಇದೆ ಅಲ್ವಾ ಅಲ್ಲಿ ಅಂತಿದ್ರು.
ಶಿವಮೊಗ್ಗ ತೀರ್ಥಹಳ್ಳಿ ಮಾರ್ಗ ಮಧ್ಯದಲ್ಲಿ ಸಿಗುವ ಪಕ್ಷಿಧಾಮ ಅಷ್ಟು ಸುಂದರವಾಗಿತ್ತು. ಅದರೆ ಇದೀಗ ಅಲ್ಲಿ ಪಕ್ಷಿದಾಮ ಇಲ್ಲದಾಗಿದೆ.
ಶಿವಮೊಗ್ಗ ತೀರ್ಥಹಳ್ಳಿ ಮಾರ್ಗದ ತುಂಗಾ ನದಿಯ ದಡದಲ್ಲಿ ನಿಂತು ನದಿ ನೀರಿನ ಮಧ್ಯದಲ್ಲಿರುವ ಆ ಬಿಳಿ ಪಕ್ಷಿಗಳ ಹಾರಾಟ ಆ ಚಿಲಿಪಿಲಿ ಕಲರವ ಕೇಳಿ ಮುಂದೆ ಸಾಗುತ್ತಿದ್ದರು. ಪುಸ್ತಕಗಳಲ್ಲಿ ಕೂಡ ಯಾವ ಯಾವ ಪಕ್ಷಿದಾಮ ಇದೆ ಎಂದು ನೋಡಿದರೆ ನಮ್ಮ ಮಂಡಗದ್ದೆ ಪಕ್ಷಿಧಾಮ ಹೆಸರು ಇರುತಿತ್ತು. ನೋಡಿದರೆ ನಮ್ಮೂರು ಹೆಮ್ಮೆ ಎನಿಸುತಿತ್ತು
ಕಾಲ ಕ್ರಮೇಣ ನದಿ ಮಧ್ಯದಲ್ಲಿದ್ದ ಪಕ್ಷಿಧಾಮ ಪ್ರತೀ ವರ್ಷ ಮಳೆಗಾಲದ ಪ್ರವಾಹಕ್ಕೆ ಸಿಕ್ಕು ಪ್ರತಿ ವರ್ಷ ಸ್ವಲ್ಪ ಸ್ವಲ್ಪ ನಶಿಸಲು ಪ್ರಾರಂಭವಾಗಿ ಇಂದು ಸಂಪೂರ್ಣ ಪಕ್ಷಿಧಾಮ ನಶಿಸುತ್ತಿದೆ. ಈಗ ಉಳಿದಿದ್ದು ಕೇವಲ ರಸ್ತೆ ಬದಿಯಲ್ಲಿ ನೆಟ್ಟ ಪಕ್ಷಿ ಧಾಮ ಎಂದೂ ಸೂಚಿಸುವ ಬೋರ್ಡ್ ಮತ್ತು ಪಕ್ಷಿಧಾಮ ವೀಕ್ಷಿಸಲು ಮಾಡಿದoತಹ ಒಂದು ಕಬ್ಬಿಣದ ಕಟ್ಟಡ ಮಾತ್ರ ಇಂದಿಗೂ ತಲೆ ಎತ್ತಿ ನಿಂತಿದೆ.ಅದೇ ಈಗ ಈ ಪಕ್ಷಿಧಾಮದ ಗುರುತಾಗಿದೆ. ಅಂದಹಾಗೆ ಈ ತುಂಗಾ ನದಿಯ ಪ್ರವಾಹ ಕೇವಲ ಪಕ್ಷಿಧಾಮಕ್ಕೆ ಮಾತ್ರ ಆಗಿರಲಿಲ್ಲ ಅದು ಸಂಪೂರ್ಣ ಮಂಡಗದ್ದೆ ಎಂಬ ಊರನ್ನೇ ಆವರಿಸಿತ್ತು ಹಾಗೂ ಸಂಪೂರ್ಣ ಊರೇ ಖಾಲಿ ಮಾಡಿಸಿತು ಆದರೆ ಊರಿನಲ್ಲಿದ್ದ ಪ್ರತಿಯೊಂದು ಮನೆಗೆ ಒಂದೊಂದು ಸೂರು ಎಂಬಂತೆ ಎಲ್ಲಾರಿಗೂ ಪರಿಹಾರದ ಮೊತ್ತದ ಜೊತೆಗೆ ಬದಲಿ ಜಾಗವನ್ನು ಸರ್ಕಾರದಿಂದ ಕೊಡಲಾಯಿತು. ಪರಿಣಾಮ ಅವರು ಅಲ್ಲೆಲ್ಲೇ ಅಕ್ಕಪಕ್ಕ ಊರಲ್ಲಿ ಮನೆಮಾಡಿಕೊಂಡು ಜೀವಿಸಿದರು. ಪಾಪ ಈ ಪಕ್ಷಿಗಳಿಗೆ ಯಾವುದೇ ನೆರವು ಸಹ ಸಿಗದೇ ಹಂತ ಹಂತವಾಗಿ ತನ್ನ ಧಾಮ ನದಿಯಲ್ಲಿ ಮುಳುಗಿ ಸಂಪೂರ್ಣ ನಾಶ ಆಗಿ ಹೋಯ್ತು ಹಾಗೇ ಜೂನ್ ನಿಂದ ಸೆಪ್ಟೆಂಬರ್ ತಿಂಗಳಲ್ಲಿ ಇಲ್ಲಿಗೆ ನಾನಾ ಕಡೆ ಇಂದ ಬಿಳಿ ಬಣ್ಣದ ಕೊಕ್ಕರೆಗಳು ಈ ಪಕ್ಷಿ ಧಾಮಕ್ಕೆ ಬಂದು ಗೂಡು ಕಟ್ಟಿಕೊಂಡು ಮರಿ ಮಟ್ಟೆ ಮಾಡಿಕೊಂಡು ಪುನಃ ಹೋಗುತ್ತಿದ್ದ ಕಾಲವದು. ಇಲ್ಲಿ ಈ ನದಿ ಮಧ್ಯದಲ್ಲಿದ್ದ ಪಕ್ಷಿಧಾಮ ನಶಿಸಿದ ನಂತರ ಕ್ರಮೇಣ ಅವು ಬೇರೆಡೆ ಹೋಗಲು ಶುರುಮಾಡಿದವು ಅಂದಹಾಗೆ ಆ ಪಕ್ಷಿಧಾಮ ಉಳಿಸುವುದು ಸರ್ಕಾರಕ್ಕೆ ಕಷ್ಟ ವಾಗಿರಲಿಲ್ಲ, ಆದರೆ ಅದಕ್ಕೆ ಅಗತ್ಯವಿದ್ದ ಹಣವನ್ನು ಮಂಜೂರು ಮಾಡಿಸಲು ನಮ್ಮ ಜನಪ್ರತಿನಿಧಿಗಳು ಆಗಲಿ ಅಧಿಕಾರಿಗಳು ಆಗಲಿ ಮನಸ್ಸು ಮಾಡಲಿಲ್ಲ ಕಾರಣ ಜನ ಪ್ರತಿನಿಧಿಗಳಿಗೆ ಆ ಕೆಲಸ ಮಾಡಿದರೆ ಪಕ್ಷಿ ಗಳೇನು ಓಟು ಹಾಕುತ್ತಿರಲಿಲ್ಲ, ಇನ್ನೂ ಅಧಿಕಾರಿ ವರ್ಗದವರಿಗೆ ಯಾವುದೇ ಹಣ ಪಕ್ಷಿಗಳಿಂದ ಸಿಗುತ್ತಿರಲಿಲ್ಲ. ಅದೇ ಜನರು ತಮ್ಮ ಪರಿಹಾರ ಹಣ ಪಡೆಯಲು ಅಧಿಕಾರಿ ವರ್ಗದವರಿಗೆ ಹಣ ನೀಡಿ ತಮ್ಮ ಪರಿಹಾರ ಮೊತ್ತ ಪಡೆದಿರಬಹುದು. ಅದಕ್ಕೆ ಅವರಿಗೆ ಸೂರು ದೊರೆಯಿತು. ಹಾಗೆ ಮಳೆ ಗಾಲದಲ್ಲಿ ನಿರಂತರ ಮಳೆ ಆದರೆ ಈ ಮಾರ್ಗದ ರಸ್ತೆ ಮಾರ್ಗ ನೀರಿನಲ್ಲಿ ಮುಳುಗಿ ಸಂಪೂರ್ಣ ಸಂಚಾರ ವ್ಯವಸ್ಥೆ ಬಂದ್ ಆಗುವ ಕಾರಣ ರಸ್ತೆ ಮಾರ್ಗವನ್ನು ಎತ್ತರಿಸಿ ಹೊಸ ರಸ್ತೆ ಮಾರ್ಗ ಮಾಡಿ ಸುಗಮ ಸಂಚಾರಕ್ಕೆ ಅವಕಾಶ ನೀಡಿದರೂ ಅದೇ ಪಕ್ಕದಲ್ಲಿದ್ದ ಈ ಪಕ್ಷಿ ಧಾಮಕ್ಕೆ ಒಂದು ರೂಪಾಯಿ ಖರ್ಚು ಮಾಡದೆ ನದಿಯಲ್ಲಿ ಮುಳುಗಿ ಸಂಪೂರ್ಣ ನಾಶ ಮಾಡಿದರು. ಮನುಷ್ಯ ತನ್ನ ಸ್ವಾರ್ಥಕ್ಕೆ ಏನಾದ್ರೂ ಮಾಡಿಕೊಂಡು ತಾನು ಒಬ್ಬ ಬದುಕಿದರೆ ಸಾಕು ಎನುವ ಈ ಕಾಲದಲ್ಲಿ ಪ್ರಾಣಿ ಪಕ್ಷಿಯ ಬಗ್ಗೆ ಯೋಚಿಸುವರು ಯಾರು?
ಈ ಊರಿನ ನದಿಯಲ್ಲಿ ಪಕ್ಷಿಧಾಮ ಮುಳುಗಿ ಹೋದರೂ ಕೂಡ ಅ
ಪಕ್ಷಿಗಳು ಮಾತ್ರ ಇಂದಿಗೂ ನಮ್ಮೂರು ಮರೆಯದೆ ಈ ಸಮಯದಲ್ಲಿ ಹೊಳೆ ಅಂಚಿನಲ್ಲಿರುವ ಮರ ಗಿಡ ಗಳ ಮೇಲೆ ಇಂದು ಸಹ ಬಂದು ಗೂಡು ಕಟ್ಟಿಕೊಂಡು ಇರುವುದನ್ನು ನಾವು ಈ ಮಾರ್ಗ ಮಧ್ಯೆ ಹೋಗುವಾಗ ಇಂದಿಗೂ ನೋಡಬಹುದು. ಅಂದ ಹಾಗೆ ಪ್ರಕೃತಿಯ ದಬ್ಬಾಳಿಕೆ ಇನ್ನೆಷ್ಟು ದಿನ?.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.