ಕ್ರೈಸ್ಟ್ ಕಿಂಗ್ ಪ್ರೌಢಶಾಲಾ ವಿಭಾಗದ ಇಂಟರಾಕ್ಟ್ ಕ್ಲಬ್‌ನ ನೂತನ ಪದಗ್ರಹಣ ಸಮಾರಂಭ
* ಇಂಟರಾಕ್ಟ್ ಕ್ಲಬ್ ಸೇವಾಭಾವನೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುತ್ತದೆ.
* ಜುಬೇದ ಕ್ಲಬ್‌ನ ಮುಂದಿನ ಯೋಜನೆಗಳ ಮಾಹಿತಿ ನೀಡಿಕೆ
NAMMUR EXPRESS NEWS
ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾರ್ಕಳ ರೋಟರಿ ಕ್ಲಬ್ ಅಧ್ಯಕ್ಷ ರೋ. ನವೀನ್‌ಚಂದ್ರ ಶೆಟ್ಟಿಯವರು ಮಾತನಾಡಿ, “ನಮ್ಮ ಸಣ್ಣ ಸೇವೆಗಳಿಂದಲೂ ದೊಡ್ಡ ಬದಲಾವಣೆ ಸಾಧ್ಯ. ವಿದ್ಯಾರ್ಥಿಗಳು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿ, ಒಳಿತಿಗಾಗಿ ಇಂಟರಾಕ್ಟ್ ಕ್ಲಬ್‌ಗಳಂತೆ ಸೇವಾ ವೇದಿಕೆಯನ್ನು ಬಳಸಿಕೊಳ್ಳಬೇಕು” ಎಂದು ಉಲ್ಲೇಖಿಸಿದರು.
ಕಾರ್ಕಳ ಇಂಟರಾಕ್ಟ್ ಕ್ಲಬ್ ಅಧ್ಯಕ್ಷ ರೋ. ಬಾಲಕೃಷ್ಣ ದೇವಾಡಿಗ ಅವರು ಇಂಟರಾಕ್ಟ್ ಕ್ಲಬ್‌ನ ಉದ್ದೇಶ, ವಿವಿಧ ವಿಭಾಗಗಳು ಮತ್ತು ಸೇವಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ರೋ. ಇಕ್ಬಾಲ್ ಅಹಮದ್ ಮಾತನಾಡುತ್ತಾ, “ಇಂಟರಾಕ್ಟ್ ಕ್ಲಬ್ ಮಕ್ಕಳಲ್ಲಿ ನಾಯಕತ್ವ, ಸೇವಾಭಾವನೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಅನನ್ಯ ವೇದಿಕೆ. ವಿದ್ಯಾರ್ಥಿಗಳು ಇಂತಹ ಕ್ಲಬ್‌ಗಳಲ್ಲಿ ಭಾಗವಹಿಸುವುದರಿಂದ ಉತ್ತಮ ನಾಗರಿಕರಾಗುವ ಭವಿಷ್ಯಕ್ಕೆ ಅಸ್ತಿತ್ವ ನೀಡಬಹುದು” ಎಂದು ಹೇಳಿದರು.
ಮುಖ್ಯ ಶಿಕ್ಷಕಿ ಶ್ರೀಮತಿ ಜೋಸ್ನಾ ಸ್ನೇಹಲತಾ ಅವರು ನೂತನ ಸದಸ್ಯರಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ರೋ. ಚೇತನ್ ಕುಮಾರ್, ಕ್ಲಬ್ ಸಂಯೋಜಕಿ ಶ್ರೀಮತಿ ಶೈಲಿ ಹೆಗ್ಡೆ ಹಾಗೂ ಇತರ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಲಬ್‌ನ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಹತ್ತನೇ ತರಗತಿಯ ಜುಬೇದ ಕಾರ್ಯಯೋಜನೆಗಳನ್ನು ವಿವರಿಸಿದರು. ಕಾರ್ಯದರ್ಶಿ ಲಕ್ಷಣ್ಯ ಸ್ವಾಗತ ಭಾಷಣ ಮಾಡಿದರು. ವಿಶೋನ್ ಶೆಲ್ಟನ್ ಸಲ್ಡಾನ್ಹ ವಂದನಾಪಥವನ್ನು ನಿರ್ವಹಿಸಿದರು. ಶಿಕ್ಷಕಿ ಶ್ರೀಮತಿ ಸುಶ್ಮಿತಾ ಸಮಾರಂಭವನ್ನು ನಿಭಾಯಿಸಿದರು.
